ಪ್ರತಿಮೆ ಎದುರು ಮಹಿಷ ದಸರ ಆಚರಿಸಿದರೆ ಪ್ರತಿಭಟನೆ ಎಚ್ಚರಿಕೆ

ಮಹಿಷ ದಸರಾ ಆಚರಿಸಿಕೊಳ್ಳುವವರು ಆಚರಿಸಿಕೊಳ್ಳಲಿ. ಆದರೆ, ಚಾಮುಂಡಿಬೆಟ್ಟದಲ್ಲಿನ ಮಹಿಷಾಸುರನ ಪ್ರತಿಮೆ ಎದುರು ಆಚರಿಸಿದರೆ ರಾಷ್ಟ್ರೀಯ ಹಿಂದೂ ಸಮಿತಿ ಪದಾಧಿಕಾರಿಗಳು ಪ್ರತಿಭಟಿಸುವುದಾಗಿ ಸಮಿತಿ ಅಧ್ಯಕ್ಷ ವಿಕಾಸ್‌ ಶಾಸ್ತ್ರಿ ಎಚ್ಚರಿಸಿದರು.

Protest if Mahisha Dasara is celebrated in front of the statue snr

 ಮೈಸೂರು :  ಮಹಿಷ ದಸರಾ ಆಚರಿಸಿಕೊಳ್ಳುವವರು ಆಚರಿಸಿಕೊಳ್ಳಲಿ. ಆದರೆ, ಚಾಮುಂಡಿಬೆಟ್ಟದಲ್ಲಿನ ಮಹಿಷಾಸುರನ ಪ್ರತಿಮೆ ಎದುರು ಆಚರಿಸಿದರೆ ರಾಷ್ಟ್ರೀಯ ಹಿಂದೂ ಸಮಿತಿ ಪದಾಧಿಕಾರಿಗಳು ಪ್ರತಿಭಟಿಸುವುದಾಗಿ ಸಮಿತಿ ಅಧ್ಯಕ್ಷ ವಿಕಾಸ್‌ ಶಾಸ್ತ್ರಿ ಎಚ್ಚರಿಸಿದರು.

ಮಹಿಷ ದಸರಾ ಆಚರಣಾ ಸಮಿತಿಯಿಂದ ದಸರಾ ಆಚರಿಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಆದರೆ, ಮಹಿಷಾಸುರನ ಪ್ರತಿಮೆ ಎದುರು ಆಚರಿಸಿದರೆ ನಾವು ಪ್ರತಿಯಾಗಿ ಪ್ರತಿಭಟಿಸುತ್ತೇವೆ. ಹಲವು ದಿನಗಳಿಂದ ಮಹಿಷ ದಸರಾ ಆಚರಣೆ ಕುರಿತು ಚರ್ಚೆ ನಡೆಯುತ್ತಿದೆ. ಮಹಿಷ ದಸರಾ ಆಚರಣೆ ವೇಳೆ ಚಾಮುಂಡೇಶ್ವರಿಯನ್ನು ಕೆಟ್ಟ ಪದಗಳಿಂದ ನಿಂದಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ಮಹಿಷ ಓರ್ವ ಬೌದ್ಧ, ಆತನಿಗೂ ಚಾಮುಂಡೇಶ್ವರಿಗೂ ಭೇಟಿಯೇ ಆಗಿಲ್ಲ ಎನ್ನುತ್ತಾರೆ. ಈ ರೀತಿ ಧರ್ಮ ಧರ್ಮದ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಳಿಕ, ನಾವು ಬುದ್ಧನನ್ನು ವಿರೋಧಿಸುತ್ತಿಲ್ಲ. ದಶಾವತಾರದಲ್ಲಿ ಬುದ್ಧನೂ ಒಬ್ಬನಾಗಿದ್ದಾನೆ. ಇನ್ನು, ಮಹಿಷನಿಂದಲೇ ಮೈಸೂರಿಗೆ ಆ ಹೆಸರು ಬಂತು ಎನ್ನುವುದು ಸರಿಯಲ್ಲ. ಇಲ್ಲಿ ಎಮ್ಮೆಗಳು ಹೆಚ್ಚಾಗಿದ್ದರಿಂದಾಗಿ ಮಹಿಷೂರು ಎಂಬ ಹೆಸರು ಬಂದಿದೆ ಎಂದು ವಾದಿಸಿದರು. ಜೊತೆಗೆ, ಸರ್ಕಾರ ಕೂಡ ಕಾನೂನು ಸುವ್ಯವಸ್ಥೆಗೆ ಅಡ್ಡಿಯುಂಟು ಮಾಡುವ ಮಹಿಷ ದಸರಾ ಆಚರಣೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರದೀಪ್, ಗಗನ್ ಇದ್ದರು.

ರಾಜ್ಯ ಸರ್ಕಾರಕ್ಕೆ ಪ್ರತಾಪ್ ಸಿಂಹ ಸವಾಲು

ಮೈಸೂರು (ಸೆ.10): ಮಹಿಷ ದಸರಾ ಅದ್ಹೇಗೆ ಮಾಡ್ತಾರೋ ಮಾಡಲಿ ನೋಡ್ತೀನಿ ಎಂದು ಸಂಸದ ಪ್ರತಾಪ್ ಸಿಂಹ ಅವರು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸರ್ಕಾರ ಬಂದರೂ ಮಹಿಷ ದಸರಾ ಆಚರಣೆ ಮಾಡುವಂತಿಲ್ಲ. ಇದರಿಂದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದರು. ಏನೇ ಕಷ್ಟ ಬಂದರೂ ಲಕ್ಷಾಂತರ ಮಂದಿ ಚಾಮುಂಡಿ ತಾಯಿಯ ಬಳಿಗೆ ಹೋಗುತ್ತಾರೆ. ವಾಸ್ತವ ಪರಿಸ್ಥಿತಿ ಹೀಗಿರುವಾಗ ತಾಯಿಯನ್ನು ತುಚ್ಛವಾಗಿ ಮಾತನಾಡುವವರಿಗೆ ಹೇಗೆ ಅವಕಾಶ ನೀಡುತ್ತಾರೆ? ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸೋಮಣ್ಣ ಹಾಗೂ ನಾವು ಸೇರಿ ಅನುಮತಿಗೆ ಅವಕಾಶ ಕೊಟ್ಟಿರಲಿಲ್ಲ ಎಂದು ಅವರು ಹೇಳಿದರು.

ಮೈಸೂರಿಗರು ಈ ವಿಚಾರದಲ್ಲಿ ಒಟ್ಟಾಗಬೇಕು. ನಿಮಗೆ ಏನೇ ಕಷ್ಟ ಸುಖ ಬಂದರೂ ತಾಯಿ ಬಳಿ ಬೇಡಿಕೊಳ್ಳುತ್ತೀರಿ. ಅಂತಹ ತಾಯಿಗೆ ಅವಮಾನವಾಗುವಾಗ ನೀವೆಲ್ಲರೂ ಒಟ್ಟಿಗೆ ಹೋರಾಡಬೇಕು. ಮಹಿಷ ದಸರಾ ಆಚರಣೆ ಮಾಡುವ ನಾಲ್ಕು ಜನರ ಮನೆಗೆ ಹೋಗಿ ನೋಡಿ. ಅವರ ಹೆಂಡತಿಯರು ಸಹ ಚಾಮುಂಡಿ ತಾಯಿಯನ್ನು ಆರಾಧನೆ ಮಾಡುತ್ತಾರೆ. ಇವರಿಗೆ ಕನಿಷ್ಠ ಅವರ ಮನೆಯವರ ಭಾವನೆಗಳನ್ನು ಕೂಡ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇಲ್ಲಿಗೆ ಬಂದು ಉದ್ದುದ್ದ ಮಾತನಾಡುತ್ತಾರೆ ಎಂದು ಅವರು ಕಿಡಿಕಾರಿದರು.

ಚಾಮುಂಡೇಶ್ವರಿಯ ಆಶೀರ್ವಾದದಿಂದ ನಾನು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ: ಸಂಸದ ಪ್ರತಾಪ್ ಸಿಂಹ

ಹಿಂದೂ ಧರ್ಮಕ್ಕೆ ಸೊಳ್ಳೆ, ನೊಣಗಳನ್ನೆಲ್ಲ ಜೀರ್ಣಸಿಕೊಳ್ಳುವ ಶಕ್ತಿ ಇದೆ: ಹಿಂದೂ ಧರ್ಮಕ್ಕೆ ಈ ಸೊಳ್ಳೆ ನೊಣಗಳನ್ನೆಲ್ಲ ನುಂಗಿ ಜೀರ್ಣೀಸಿಕೊಳ್ಳುವ ಶಕ್ತಿ ಇದೆ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು. ಸನಾತನ ಧರ್ಮದ ವಿಚಾರವಾಗಿ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಮೈಸೂರಿನಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಸೂರ್ಯನ ಸುತ್ತ ಭೂಮಿ ಸುತ್ತುತ್ತಿದೆ ಎಂದು ಹೇಳಿದ ಏಕೈಕ ಧರ್ಮ ಹಿಂದೂ ಧರ್ಮ ಮಾತ್ರ. ಈ ಖಗೋಳ ವಿಜ್ಞಾನಕ್ಕೆ ನಮ್ಮ ಋಷಿಮುನಿಗಳು ಹಿಂದಿನ ಕಾಲದಲ್ಲಿ ಕೊಡುಗೆ ನೀಡಿದ್ದಾರೆ. 

ಆದರೆ, ಬೇರೆ ಧರ್ಮಗಳಿಗೆ ಖಗೋಳ ವಿಜ್ಞಾನದ ಬಗ್ಗೆ ಅರಿವೇ ಇಲ್ಲ. ಭೂಮಿ ಸುತ್ತ ಸೂರ್ಯ ಸುತ್ತುತ್ತಾನೆ ಅಂತ ಅವರು ಹೇಳ್ತಾರೆ. ಹಿಂದೂ ಧರ್ಮದ ಬಗ್ಗೆ ಅರಿವೇ ಇಲ್ಲದೆ, ಜ್ಞಾನ ಇಲ್ಲದೆ ಅಸಂಬಂಧ ಮಾತುಗಳನ್ನ ಆಡುತ್ತಾರೆ ಎಂದು ಕಿಡಿಕಾರಿದರು. 700 ವರ್ಷಗಳ ಮುಸಲ್ಮಾನರ ದಾಳಿಯನ್ನ, 200 ವರ್ಷಗಳ ಕ್ರೈಸ್ತರ ದಾಳಿಯನ್ನ ಸಹಿಸಿಕೊಂಡು ಇವತ್ತಿಗೂ ಶೇ.80 ಹಿಂದೂಗಳು ಈ ದೇಶದಲ್ಲಿ ಇದಾರೆ ಅಂದ್ರೆ, ಹಿಂದೂ ಧರ್ಮಕ್ಕೆ ಈ ಸೊಳ್ಳೆ ನೊಣಗಳನ್ನೆಲ್ಲ ನುಂಗಿ ಜೀರ್ಣೀಸಿಕೊಳ್ಳುವ ಶಕ್ತಿ ಇದೆ ಎಂದು ಅವರು ಕುಟುಕಿದರು.

ಹೈಕಮಾಂಡ್‌ ನಿರ್ಧಾರಕ್ಕೆ ಬೆಂಬಲ: ಪಕ್ಷದ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ನಾಯಕರು ಯಾವುದೇ ನಿರ್ಧಾರ ಕೈಗೊಂಡರು ಬೆಂಬಲಿಸುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌‍ಮೈತ್ರಿ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಪಕ್ಷದ ಹೈಕಮಾಂಡ್‌ನಿರ್ಧಾರವನ್ನು ಮುಖಂಡರು, ಕಾರ್ಯಕರ್ತರು ಬೆಂಬಲಿಸುತ್ತಾರೆ ಎಂದರು. ಇವತ್ತಿಗೂ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರು. ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಎರಡೆರಡು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. 

Latest Videos
Follow Us:
Download App:
  • android
  • ios