ಚಿಕ್ಕಮಗಳೂರು: ವಕೀಲನ ಮೇಲೆ ಪೊಲೀಸರ ಹಲ್ಲೆ ಪ್ರಕರಣ, ಅಮಾನತುಗೊಂಡ ಆರಕ್ಷರ ಕುಟುಂಬದಿಂದ ಧರಣಿ
ಪೊಲೀಸರು ಒಂದು ದಿನ ಕರ್ತವ್ಯ ಮಾಡುವುದನ್ನು ನಿಲ್ಲಿಸಿದರೆ ಜನರು ಬದುಕಲಿಕ್ಕೆ ಆಗುತ್ತದೆ? ಇಂತಹ ಘಟನೆಗಳಿಂದಲೇ ಪೊಲೀಸರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಹಾಗೇನಾದರೂ ಹೆಚ್ಚು ಕಡಿಮೆ ಆದರೆ ನಮ್ಮನ್ನು ರಕ್ಷಿಸಲು ವಕೀಲರಾಗಲಿ, ಪೊಲೀಸ್ ಅಧಿಕಾರಿಗಳಾಗಲಿ ಬರುವುದಿಲ್ಲ. ವಕೀಲ ಪ್ರೀತಂ ಅವರೂ ಸಹ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ನಾವೂ ಸಹ ದೂರು ಕೊಟ್ಟಿದ್ದೇವೆ. ಪ್ರಕರಣ ದಾಖಲಿಸಲಿ ಎಂದು ಒತ್ತಾಯಿಸಿದರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಡಿ.03): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದ ವಿಚಾರಕ್ಕೆ ವಕೀಲನ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಅಮಾನತುಗೊಂಡಿರುವ ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರು ಇಂದು (ಶನಿವಾರ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ತಮಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ನಂತರ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ಬಳಿ ಸುದ್ದಿಗಾರರ ಜೊತೆ ಚೈತ್ರಶ್ರೀ ಎಂಬುವವರು ಮಾತನಾಡಿ, ಪೊಲೀಸರು ನಿಯಮ ಉಲ್ಲಂಘಿಸಿದ್ದನ್ನು ಕೇಳಿದ್ದು ತಪ್ಪೇ, ಅವರು ಅವಾಚ್ಯವಾಗಿಯೂ ಮಾತನಾಡಿಲ್ಲ. ದಂಡ ಕಟ್ಟಲು ಹೇಳಿದ್ದಾರೆ. ಆದರೆ ಹಲ್ಲೆ ನಡೆಸಿದ್ದಾರೆ ಎಂದು ವಕೀಲರು ಆರೋಪಿಸುತ್ತಿದ್ದಾರೆ. ಹಾಗಾದರೆ ಪೊಲೀಸರಿಗೆ ರಕ್ಷಣೆ ಕೊಡುವವರು ಯಾರು? ಎಂದು ಪ್ರಶ್ನಿಸಿದರು.
ಹೆಲ್ಮೆಟ್ ಹಾಕದ್ದಕ್ಕೆ ವಕೀಲನ ಮೇಲೆ ಹಲ್ಲೆ ಕೇಸ್ ; ಪ್ರತಿಭಟನೆ ಎಚ್ಚರಿಕೆ ಬೆನ್ನಲ್ಲೇ 6 ಪೊಲೀಸ್ ಸಿಬ್ಬಂದಿ ಅಮಾನತ್ತು!
ಪೊಲೀಸರು ಒಂದು ದಿನ ಕರ್ತವ್ಯ ಮಾಡುವುದನ್ನು ನಿಲ್ಲಿಸಿದರೆ ಜನರು ಬದುಕಲಿಕ್ಕೆ ಆಗುತ್ತದೆ? ಇಂತಹ ಘಟನೆಗಳಿಂದಲೇ ಪೊಲೀಸರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಹಾಗೇನಾದರೂ ಹೆಚ್ಚು ಕಡಿಮೆ ಆದರೆ ನಮ್ಮನ್ನು ರಕ್ಷಿಸಲು ವಕೀಲರಾಗಲಿ, ಪೊಲೀಸ್ ಅಧಿಕಾರಿಗಳಾಗಲಿ ಬರುವುದಿಲ್ಲ. ವಕೀಲ ಪ್ರೀತಂ ಅವರೂ ಸಹ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ನಾವೂ ಸಹ ದೂರು ಕೊಟ್ಟಿದ್ದೇವೆ. ಪ್ರಕರಣ ದಾಖಲಿಸಲಿ ಎಂದು ಒತ್ತಾಯಿಸಿದರು.
ಕಣ್ಣೀರಿಟ್ಟ ಕುಟುಂಸ್ಥರು :
ಘಟನೆ ನಡೆದ ದಿನದಿಂದ ನಮ್ಮ ಪತಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಫೋನ್ ಸಹ ಸ್ವಿಚ್ ಆಫ್ ಆಗಿದೆ. ಏನಾದರೂ ಆನಾಹುತ ಆದರೆ ನಮಗೆ ಯಾರು ದಿಕ್ಕು ಎಂದು ಕಣ್ಣೀರಿಟ್ಟರು.ಭಾರತಿ ಎಂಬುವವರು ಮಾತನಾಡಿ, ಮೇಲಾಧಿಕಾರಿಗಳ ಆದೇಶದ ಮೇರೆಗೆ ಕರ್ತವ್ಯ ನಿರ್ವಹಿಸಿರುತ್ತಾರೆ. ಒಂದು ವಾರ ಪೊಲಿಸ್ ವ್ಯವಸ್ಥೆ ಇಲ್ಲವಾದರೆ ಪರಿಸ್ಥಿತಿ ಏನಾಗುತ್ತದೆ. ವಕೀಲರು ಆರೋಪ ಮಾಡಿದಂತೆಯೇ ಆಗಿದೆ ಎಂದು ಹೇಗೆ ನಂಬುತ್ತೀರಿ. ಪೊಲೀಸ್ ಠಾಣೆಯಲ್ಲಿ ಏನಾಗಿದೆ ಏನಾಗಿದೆ ಎಂದು ಯಾರಿಗಾದರೂ ಸರಿಯಾಗಿ ಗೊತ್ತಿದೆಯಾ? ನಾವು ದೂರು ಕೊಡಲು ಹೋದರೆ ನಿಮ್ಮ ದೂರು ತೆಗೆದುಕೊಳ್ಳುವುದಿಲ್ಲ ಹೋಗಿ ಎಂದು ಕಳಿಸಿದ್ದಾರೆ. ಸರಿಯಾಗಿ ಯಾರೊಬ್ಬರೂ ಸ್ಪಂದಿಸಿಲ್ಲ. ಹೀಗಿದ್ದ ಮೇಲೆ ಪೊಲಿಸ್ ಕೆಲಸ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರು: ಹೆಲ್ಮೆಟ್ ಹಾಕಿಲ್ಲ ಅಂತ ವಕೀಲರಿಗೆ ಮನಸೋ ಇಚ್ಛೆ ಥಳಿಸಿದ ಪೊಲೀಸರ ಬಂಧನಕ್ಕೆ ಆಗ್ರಹ
ಪೊಲೀಸರ ಜಿನ್ಞಾಸೆ
ವಕೀಲ ಪ್ರೀತಂ ಮೇಲೆ ನಡೆದಿರುವ ಹಲ್ಲೆ ಬಗ್ಗೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಕಾರಣಕ್ಕೆ ವಕೀಲರು ಪ್ರತಿಭಟನೆಯನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ ಕೊಲೆಯತ್ನ ಆರೋಪ ಎದುರಿಸುತ್ತಿರುವ ಪಿಎಸ್ಐ ಸೇರಿದಂತೆ ಆರು ಮಂದಿ ಸಿಬ್ಬಂದಿಗಳನ್ನು ಬಂಧಿಸಬೇಕೋ ಬೇಡವೋ ಎನ್ನವ ಜಿನ್ಞಾಸೆ ಪೊಲೀಸ್ ಇಲಾಖೆಯದ್ದಾಗಿದೆ.
ಇದೇ ಕಾರಣಕ್ಕೆ ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತ ಅವರು ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಒಂದೆಡೆ ಅಮಾನತುಗೊಂಡ ಸಿಬ್ಬಂದಿಗಳ ಕುಟುಂಬಸ್ಥರ ಅಹವಾಲು ಕೇಳುವುದು, ಸಿಬ್ಬಂಧಿಗಳ ಬಂಧನದ ವಿಚಾರದಲ್ಲಿ ಯಾವ ಹೆಜ್ಜೆ ಇಡಬೇಕು. ಮುಂದೆ ಎದುರಾಗಬಹುದಾದ ಕಾನೂನಿನ ತೊಡಕುಗಳೇನು ಎನ್ನುವ ಕುರಿತು ದಿನವಿಡೀ ಹಿರಿಯ ಪೊಲೀಸ್ ಅಧಿಕಾರಿಗಳು ಸಮಾಲೋಚನೆ ನಡೆಸಿದರು.