Asianet Suvarna News Asianet Suvarna News

ಚಿಕ್ಕಮಗಳೂರು: ಹೆಲ್ಮೆಟ್ ಹಾಕಿಲ್ಲ ಅಂತ ವಕೀಲರಿಗೆ ಮನಸೋ ಇಚ್ಛೆ ಥಳಿಸಿದ ಪೊಲೀಸರ ಬಂಧನಕ್ಕೆ ಆಗ್ರಹ

ನಿನ್ನೆ ಇಡೀ ರಾತ್ರಿ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದ 60ಕ್ಕೂ ಲಾಯರ್‌ಗಳು ಎಫ್.ಐ.ಆರ್. ಆಗಿ ಆರು ಜನ ಪೊಲೀಸರು ಅಮಾನತ್ತಾದ ಬಳಿಕ ಬೆಳಗಿನ ಜಾವ ಎಲ್ಲರೂ ವಾಪಸ್ಸಾಗಿದ್ದರು. ಇಂದು ಅವರನ್ನ ಬಂಧಿಸಬೇಕು. ಐಪಿಸಿ ಸೆಕ್ಷನ್ 307 ಅಡಿ ಪ್ರಕರಣ ದಾಖಲಾಗಿದೆ. ಜನಸಾಮಾನ್ಯರನ್ನಾದರೆ ತಕ್ಷಣ ಅರೆಸ್ಟ್ ಮಾಡ್ತೀರಾ, ಠಾಣೆಯಲ್ಲೇ ಇರೋ ಪೊಲೀಸರನ್ನ ಏಕೆ ಬಂಧಿಸಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. 

Lawyers Demand Police Arrest in Chikkamagaluru grg
Author
First Published Dec 1, 2023, 8:54 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಡಿ.01):  ಹೆಲ್ಮೆಟ್ ಹಾಕಿಲ್ಲ ಎಂದು ಚಿಕ್ಕಮಗಳೂರು ನಗರ ಪೊಲೀಸರು ವಕೀಲರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದನ್ನ ವಿರೋಧಿಸಿ ಚಿಕ್ಕಮಗಳೂರು ಜಿಲ್ಲಾ ವಕೀಲರ ಸಂಘ ಪೊಲೀಸ್ ಇಲಾಖೆ ವಿರುದ್ಧ ವಕೀಲರ ಸಂಘ ಫುಲ್ ರೆಬಲ್ ಆಗಿದೆ. 

ನಿನ್ನೆ ಇಡೀ ರಾತ್ರಿ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದ 60ಕ್ಕೂ ಲಾಯರ್‌ಗಳು ಎಫ್.ಐ.ಆರ್. ಆಗಿ ಆರು ಜನ ಪೊಲೀಸರು ಅಮಾನತ್ತಾದ ಬಳಿಕ ಬೆಳಗಿನ ಜಾವ ಎಲ್ಲರೂ ವಾಪಸ್ಸಾಗಿದ್ದರು. ಇಂದು ಅವರನ್ನ ಬಂಧಿಸಬೇಕು. ಐಪಿಸಿ ಸೆಕ್ಷನ್ 307 ಅಡಿ ಪ್ರಕರಣ ದಾಖಲಾಗಿದೆ. ಜನಸಾಮಾನ್ಯರನ್ನಾದರೆ ತಕ್ಷಣ ಅರೆಸ್ಟ್ ಮಾಡ್ತೀರಾ, ಠಾಣೆಯಲ್ಲೇ ಇರೋ ಪೊಲೀಸರನ್ನ ಏಕೆ ಬಂಧಿಸಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. 

ರಾತ್ರಿ ಮಂಕಿ ಕ್ಯಾಪ್ ಧರಿಸಿ ಬಂದಿದ್ದ ಕಿರಾತಕನಿಂದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ!

ಘಟನೆ ವಿವರ: 

ಗುರುವಾರ ರಾತ್ರಿ ೮ ಗಂಟೆ ವೇಳೆಗೆ ವಕೀಲ ಪ್ರೀತಂ ಎಂಬಾತನನ್ನು ಮಾರ್ಕೆಟ್ ರಸ್ತೆಯ ನಗರ ಠಾಣೆ ಮುಂಭಾಗವೇ ತಡೆದಿದ್ದ ಪೊಲೀಸ್ ಪೇದೆಯೊಬ್ಬರು ಹೆಲ್ಮೆಟ್ ಧರಿಸದ ಬಗ್ಗೆ ಪ್ರಶ್ನಿಸಿ ಬೈಕ್ನ ಕೀಯನ್ನು ಕಿತ್ತುಕೊಂಡಿದ್ದರು. ಈ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ವಕೀಲರನ್ನು ಠಾಣೆಗೆ ಕರೆದೊಯ್ದ ಪೊಲೀಸರು ಮನಸೋಇಚ್ಛೆ ಹಲ್ಲೆ ನಡೆಸಿದ್ದರು.ಇದರಿಂದ ವಕೀಲ ಪ್ರೀತಂರ ಎದೆ, ಕೈ ಮತ್ತು ಬೆನ್ನಿನಲ್ಲಿ ಗಾಯವೂ ಉಂಟಾಗಿತ್ತು. ವಿಚಾರ ತಿಳಿದು ಠಾಣೆ ಬಳಿ ಜಮಾಯಿಸಿದ ವಕೀಲರು ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದರು. ಹಲ್ಲೆ ನಡೆಸಿದ ಸಿಬ್ಬಂಧಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. 

ರಾತ್ರಿಯಿಡೀ ಪ್ರತಿಭಟನೆ

ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಸುಧಾಕರ್ ಸೇರಿದಂತೆ ಪದಾಧಿಕಾರಿಗಳು ಮತ್ತು ಎಲ್ಲಾ ವಕೀಲರು ಪಟ್ಟುಬಿಡದೆ ಬೆಳಗಿನ ಜಾವದ ವರೆಗೆ ಸುಮಾರು ೬ ಗಂಟೆಗಳ ನಿರಂತರ  ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಎಸ್ಪಿ ವಿಕ್ರಮ ಆಮಟೆ ಠಾಣೆಗೆ ಆಗಮಿಸಿ ಸಿಬ್ಬಂದಿಗಳನ್ನು ಅಮಾನತುಪಡಿಸುವುದಾಗಿ ತಿಳಿಸಿದರು. ನಂತರ ಪಿಎಸ್ಐ, ಎಎಸ್ಐ, ಮುಖ್ಯಪೇದೆ ಹಾಗೂ ಮೂವರು ಪೇದೆಗಳ ವಿರುದ್ಧ ಐಪಿಸಿ ಸೆಕ್ಷನ್ ೩೦೭, ೩೨೪, ೫೦೬ ಹಾಗೂ ೫೦೪ ರಡಿ ಪ್ರಕರಣ ದಾಖಲಿಸಿ ಅಷ್ಟೂ ಜನರನ್ನು ಅಮಾನಪಡಿಸಿ ಎಸ್ಪಿ ಆದೇಶಿಸಿದರು.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ-ಆರೋಪ

ಪೊಲೀಸರ ಹಲ್ಲೆಯಿಂದಾಗಿ ತೀವ್ರ ಗಾಯಗೊಂಡಿರುವ ವಕೀಲ ಪ್ರೀತಂ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ಕ್ಷುಲ್ಲಕ ಕಾರಣಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.ಹೆಲ್ಮೆಟ್ ಧರಿಸಲಿಲ್ಲ ಎನ್ನುವ ಕಾರಣಕ್ಕೆ ಠಾಣೆ ಮುಂಭಾಗದ ರಸ್ತೆಯಲ್ಲೇ ತಡೆದ ಪೇದೆಯೊಬ್ಬರು ಬೈಕ್ನ ಕೀಯನ್ನು ಕಿತ್ತುಕೊಂಡರು. ವಾಹನ ಚಾಲನೆಯಲ್ಲಿರುವಾಗಲೇ ಕೀ ಕಿತ್ತುಕೊಂಡ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಠಾಣೆಗೆ ಕರೆದೊಯ್ದು ಅವಾಚ್ಯವಾಗಿ ನಿಂಧಿಸಿದ್ದಲ್ಲದೆ, ಠಾಣೆಯಲ್ಲಿದ್ದ ಎಲ್ಲಾ ಸಿಬ್ಬಂದಿಗಳು ಕಂಟಪ್ಯೂಟರ್ ರೂಂನಲ್ಲಿ ಹಾಕಿ ಸ್ಟಿಕ್, ಪ್ಲಂಬಿಂಗ್ ಪೈಪ್, ದೊಣ್ಣೆಗಳಿಂದ ಹಲ್ಲೆ ಮಾಡಿ ಪ್ರಜ್ಞೆ ತಪ್ಪಿಸಿದರು. ಈ ವೇಳೆ ಬೂಟು ಕಾಲಿನಲ್ಲಿ ತುಳಿದು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು. 

ಚಿಕ್ಕಮಗಳೂರು: ಸಿಬ್ಬಂದಿಯಿಂದಲೇ ಬ್ಯಾಂಕ್‌ಗೆ ದೋಖಾ, ಚಿನ್ನ, ಎಫ್‌ಡಿ ಇಟ್ಟ ಗ್ರಾಹಕರಿಗೆ ಶಾಕ್..!

ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಇಂದು (ಶುಕ್ರವಾರ )ಬೆಳಗ್ಗೆ ಜಿಲ್ಲಾ ನ್ಯಾಯಾಲಯದ ಎಲ್ಲಾ ಕಲಾಪಗಳನ್ನು ಬಹಿಷ್ಕರಿಸಿದ ವಕೀಲರು ಆರೋಪಿತ ಪೊಲೀಸರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದರು.ತಾಲ್ಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟು ಮಾರ್ಕೆಟ್ ರಸ್ತೆಯ ನಗರ ಠಾಣೆ ಮುಂದೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಆಜಾದ್ ಪಾರ್ಕ್ ಮೈದಾನಕ್ಕೆ ತೆರಳಿ ಧರಣಿ ಕುಳಿತರು. 

ವಿವೇಕ್ ಸುಬ್ಬಾರೆಡ್ಡಿ ಬೆಂಬಲ

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು ಬೆಳಗ್ಗೆಯೇ ಬೆಂಗಳೂರಿನಿಂದ ಹೊರಟು ಮಧ್ಯಾಹ್ನದ ವೇಳೆಗೆ ನಗರಕ್ಕಾಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರಲ್ಲದೆ, ಕೂಡಲೇ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಅವರೂ ನಗರಕ್ಕಾಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

Follow Us:
Download App:
  • android
  • ios