Chamarajanagar: ಪೊಲೀಸ್ ಅಧಿಕಾರಿಗಳ ಅಮಾನತು ಖಂಡಿಸಿ ಪ್ರತಿಭಟನೆ
ಯರಿಯೂರು ಗ್ರಾಮದ ಬಳಿ ಪೊಲೀಸ್ ಜೀಪ್‌ನಿಂದ ಜಿಗಿದು ಮೃತಪಟ್ಟಕುಂತೂರು ಮೋಳೆ ಗ್ರಾಮದ ನಿಂಗರಾಜು ಸಾವಿನ ಪ್ರಕರಣದ ಹಿನ್ನೆಲೆ ಮೂವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕ್ರಮ ಖಂಡಿಸಿ, ದಲಿತ ಪರ ಸಂಘಟನೆಗಳ ಸದಸ್ಯರು ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದರು.
ಯಳಂದೂರು (ಡಿ.01): ಯರಿಯೂರು ಗ್ರಾಮದ ಬಳಿ ಪೊಲೀಸ್ ಜೀಪ್‌ನಿಂದ ಜಿಗಿದು ಮೃತಪಟ್ಟಕುಂತೂರು ಮೋಳೆ ಗ್ರಾಮದ ನಿಂಗರಾಜು ಸಾವಿನ ಪ್ರಕರಣದ ಹಿನ್ನೆಲೆ ಮೂವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕ್ರಮ ಖಂಡಿಸಿ, ದಲಿತ ಪರ ಸಂಘಟನೆಗಳ ಸದಸ್ಯರು ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದರು. ಕುಂತೂರುಮೋಳೆ ಗ್ರಾಮದ ನಿಂಗರಾಜು ಜೀಪ್‌ನಿಂದ ಜಿಗಿದು ಮೃತಪಟ್ಟಹಿನ್ನೆಲೆ ಗ್ರಾಮಸ್ಥರು, ಉಪ್ಪಾರ ಸಮುದಾಯ, ಈ ಸಾವು ಹಲವು ಅನುಮಾನ ಹುಟ್ಟಿಸಿದೆ. ಕೂಡಲೇ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟಿಸಿದ್ದರು.
ಈ ಹಿನ್ನೆಲೆ ಸಿಪಿಐ ಶಿವಮಾದಯ್ಯ ಮಾಂಬಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಮಾದೇಗೌಡ, ಪೇದೆ ಸೋಮಣ್ಣರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿತ್ತು. ಪ್ರಗತಿಪರ ಸಂಘಟನೆಗಳ ಪ್ರತಿಭಟನೆ: ಅಮಾನತ್ತುಗೊಳಿಸಿದ ಕ್ರಮದ ವಿರುದ್ಧ ಅಂಬೇಡ್ಕರ್ ಸೇವಾ ಸಮಿತಿ, ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವು ದಲಿತಪರ, ಪ್ರಗತಿಪರ ಸಂಘಟನೆಗಳ ಸದಸ್ಯರು ಪೊಲೀಸ್ ಠಾಣೆಯ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
Chamarajanagar: ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮಧ್ಯವರ್ತಿಗಳ ದರ್ಬಾರ್
ಮಂಗಳವಾರ ನಡೆದ ಘಟನೆಯಲ್ಲಿ ಮೃತಪಟ್ಟವ್ಯ ಕ್ತಿ ಹೇಗೆ ಸಾವನ್ನಪ್ಪಿದ ಎಂಬುದನ್ನು ತನಿಖೆ ನಡೆಸದೆ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ. ಸಿಪಿಐ ಶಿವಮಾದಯ್ಯರನ್ನು ಉದ್ದೇಶ ಪೂರ್ವಕವಾಗಿ ಘಟನೆಯಲ್ಲಿ ಶಾಮೀಲು ಮಾಡಲಾಗಿದೆ. ಇದರಲ್ಲಿ ರಾಜಕೀಯ ಪಿತೂರಿ, ವೈಯುಕ್ತಿಕ ದ್ವೇಷದಿಂದ ಹೀಗೆ ಮಾಡಲಾಗಿದೆ. ಜಿ.ಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ವೈಯುಕ್ತಿಕ ಪ್ರತಿಷ್ಠೆಗಾಗಿ ಶಿವಮಾದಯ್ಯರನ್ನು ನೇರ ಹೊಣೆಯಾಗಿ ಮಾಡಿ, ಇವರನ್ನು ಬಲಿಪಶು ಮಾಡಿದ್ದಾರೆ.
ಕೂಡಲೇ ಸಂಬಂಧಪಟ್ಟ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಇವರ ಅಮಾನತ್ತಿನ ಆದೇಶವನ್ನು ಹಿಂಪಡೆಯಬೇಕು. ಶಿವಮಾದಯ್ಯರನ್ನು ಕರ್ತವ್ಯದಲ್ಲಿ ಮುಂದುವರೆಸಬೇಕು, ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಡಿವೈಎಸ್‌ಪಿ ನಾಗರಾಜುರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಇದನ್ನು ಸ್ವೀಕರಿಸಿ ಮಾತನಾಡಿದ ನಾಗರಾಜು, ಮಂಗಳವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಇವರನ್ನು ಅಮಾನತು ಮಾಡಲಾಗಿದೆ.
ಕುಟುಂಬವನ್ನು ಏಕಾಏಕಿ ಮನೆಯಿಂದ ಹೊರಹಾಕಿದ ಮಾಲೀಕ: ಬೀದಿಗೆ ಬಿದ್ದ ಬಾಡಿಗೆದಾರ
ಈ ಬಗ್ಗೆ ತನಿಖೆ ನಡೆಯುತ್ತಿದ್ದು ಸಿಪಿಐ ಶಿವಮಾದಯ್ಯರವರೂ ಸೇರಿದಂತೆ ಇತರರಿಗೆ ನ್ಯಾಯ ಸಿಗುವ ಭರವಸೆ ಇದೆ. ಪ್ರಗತಿಪರ ಸಂಘಟನೆಗಳ ಸದಸ್ಯರು ತಾಳ್ಮೆಯಿಂದ ವರ್ತಿಸಬೇಕು. ಈ ಮನವಿಯನ್ನು ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಡಿ. ರೇವಣ್ಣ, ಮದ್ದೂರು ಚಕ್ರವರ್ತಿ, ಶಿಮೂರ್ತಿ, ದೊಡ್ಡಿಂದುವಾಡಿ ಸಿದ್ದರಾಜು, ಮಾಂಬಳ್ಳಿ ರಾಮು, ಜೆ.ಶ್ರೀನಿವಾಸ್, ದುಗ್ಗಹಟ್ಟಿಮಹೇಶ್, ಅಗ್ರಹಾರ ರಂಗಸ್ವಾಮಿ, ಕೆಸ್ತೂರು ನಾಗರಾಜು, ರಾಮಾಪುರ ರಂಗಸ್ವಾಮಿ, ಚಂದ್ರಶೇಖರ, ಡಿ.ರಂಗಸ್ವಾಮಿ, ಮಾಂಬಳ್ಳಿ ಕಾಂತರಾಜು, ಮಹೇಶ, ರಾಮಸಮುದ್ರ ಸುರೇಶ್, ಚಂದ್ರಶೇಖರ್, ರಾಚಪ್ಪ, ರವಿ ಸೇರಿದಂತೆ ಅನೇಕರು ಇದ್ದರು.