Asianet Suvarna News Asianet Suvarna News

ಪಾರಂಪರಿಕ ಕಟ್ಟಡ ರಕ್ಷಣೆ ಎಲ್ಲರ ಹೊಣೆ : ಡಾ.ಎನ್.ಎಸ್. ರಂಗರಾಜು

ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದಿಂದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮತ್ತು ಸವಾಲುಗಳು ವಿಷಯ ಕುರಿತ ವಿಶೇಷ ಉಪನ್ಯಾಸ ಮತ್ತು ಸಂವಾದ ಆಯೋಜಿಸಲಾಗಿತ್ತು.

Protection of heritage buildings is everyone's responsibility: Dr. N.S. Rangaraju snr
Author
First Published Oct 13, 2023, 11:07 AM IST

 ಮೈಸೂರು :  ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದಿಂದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮತ್ತು ಸವಾಲುಗಳು ವಿಷಯ ಕುರಿತ ವಿಶೇಷ ಉಪನ್ಯಾಸ ಮತ್ತು ಸಂವಾದ ಆಯೋಜಿಸಲಾಗಿತ್ತು.

ಹಾಗೂ ಐತಿಹಾಸಿಕ ಕಟ್ಟಡಗಳು ಮತ್ತು ಸ್ಮಾರಕಗಳು ನಮ್ಮ ನಾಡಿನ ಪರಂಪರೆ ಮತ್ತು ಸಂಸ್ಕೃತಿಯ ಸಂಕೇತವಾಗಿದ್ದು, ಶ್ರೀಮಂತ ಪಾರಂಪರಿಕ ಕಟ್ಟಡ ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿದೆ ಎಂದರು.

ಕರ್ನಾಟಕದಲ್ಲಿ ಮೊದಲ ಬಾರಿಗೆ 2004 ರಲ್ಲಿ ಮೈಸೂರು ಮತ್ತು ಶ್ರೀರಂಗಪಟ್ಟಣವನ್ನು ಪಾರಂಪರಿಕ ಸಂರಕ್ಷಿತ ನಗರಗಳೆಂದು ನಂತರ 2014 ರಲ್ಲಿ 14 ಸ್ಥಳಗಳನ್ನು ಪಾರಂಪರಿಕ ಸಂರಕ್ಷಿತ ಪ್ರದೇಶಗಳೆಂದು ರಾಜ್ಯ ಸರ್ಕಾರವು ಘೋಷಿಸಿತು. ಸಾಮಾನ್ಯವಾಗಿ 100 ವರ್ಷ ದಾಟಿದ ಯಾವುದೇ ಐತಿಹಾಸಿಕ ಕಟ್ಟಡವನ್ನು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಅನುಮೋದನೆ ಮೇರೆಗೆ ಅಧಿಕೃತವಾಗಿ ಪಾರಂಪರಿಕ ಕಟ್ಟಡ ಎಂದು ಪರಿಗಣಿಸಲಾಗುತ್ತದೆ ಎಂದರು.

ಈವರೆಗೂ ಕೇಂದ್ರ ಸರ್ಕಾರದಿಂದ 775 ಸ್ಮಾರಕ, ಕಟ್ಟಡ ಹಾಗೂ ರಾಜ್ಯ ಸರ್ಕಾರದಿಂದ 864 ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಘೋಷಿಸಲಾಗಿದೆ. ಆದರೆ ಇನ್ನೂ 35,000 ಕಟ್ಟಡಗಳು ಮತ್ತು ಸ್ಮಾರಕಗಳು ಪಾರಂಪರಿಕ ಕಟ್ಟಡಗಳೆಂದು ಪರಿಗಣಿಸಲಾಗಿಲ್ಲ ಎಂದು ಅವರು ವಿವರಿಸಿದರು.

ಐತಿಹಾಸಿಕ ಪರಂಪರೆಯಲ್ಲಿ ನಾಲ್ಕು ವಿಧಗಳಿದ್ದು, ಸಾಂಸ್ಕೃತಿಕ ಪರಂಪರೆ, ಸ್ವಾಭಾವಿಕ ಪರಂಪರೆ, ಪುರಾತತ್ವ ಮತ್ತು ಇತಿಹಾಸ ಪರಂಪರೆ ಹಾಗೂ ಜೀವವೈವಿಧ್ಯ ಪರಂಪರೆ ಎಂದು ವಿಂಗಡಿಸಲಾಗಿದೆ. ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಮುಖವಾಗಿ ಮೂರ್ತ ಹಾಗೂ ಅಮೂರ್ತ ಪರಂಪರೆಗಳೆಂದು ವಿಂಗಡಿಸಲಾಗಿದೆ. ನಗರದಲ್ಲಿ ಒಟ್ಟು 234 ಪಾರಂಪರಿಕ ಕಟ್ಟಡಗಳಿದ್ದು, ಇವುಗಳಲ್ಲಿ ಅಂಬಾವಿಲಾಸ ಅರಮನೆ ಸೇರಿದಂತೆ 14 ಅರಮನೆಗಳು, 25 ಮ್ಯೂಸಿಯಂ ಕಟ್ಟಡಗಳನ್ನು ಕಾಣಬಹುದು ಎಂದು ಅವರು ತಿಳಿಸಿದರು.

ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಶೈಕ್ಷಣಿಕ ಡೀನ್ ಡಾ.ಎಚ್. ಶ್ರೀಧರ, ಅಧ್ಯಾಪಕ ಎ.ಆರ್. ನಂದೀಶ, ಎನ್. ಜಯಲಕ್ಷ್ಮೀ ಹಾಗೂ ಕಾಲೇಜಿನ ಅಧ್ಯಾಪಕರು ಮತ್ತು ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಇದ್ದರು.

ಪಾರಂಪರಿಕಾ ಸ್ಥಾನಗಳ ಪಟ್ಟಿಗೆ ಹೊಯ್ಸಳ ದೇವಾಲಯ 

ನವದೆಹಲಿ(ಸೆ.18) ಕರ್ನಾಟಕದ ಹೊಯ್ಸಳರ ಕಾಲದ ದೇವಾಲಯಗಳು ವಾಸ್ತುಶಿಲ್ಪಗಳ ರಾಜ ಎಂದೇ ಗುರುತಿಸಿಕೊಂಡಿದೆ. ಬೇಲೂರಿನ ಚನ್ನಕೇಶವ ದೇವಾಲಯ, ಹಳೇಬೀಡು, ಸೋಮಾನಾಥಪುರದಲ್ಲಿರುವ ಹೊಯ್ಸಳರ ದೇವಾಲಯದ ಗರಿಮೆ ದುಪಟ್ಟಾಗಿದೆ. ಯುನೆಸ್ಕೋ ಘೋಷಿಸಿದ ವಿಶ್ವಪಾರಂಪರಿಕ ತಾಣ ಪಟ್ಟಿಯಲ್ಲಿ ಇದೀಗ ಕರ್ನಾಟಕ ಹೊಯ್ಸಳರ ದೇವಾಲಯ ಸ್ಥಾನ ಪಡೆದಿದೆ. 2014ರಿಂದ ವಿಶ್ವಪಾರಂಪರಿಕ ತಾಣ ಸಂಭಾವ್ಯ ಪಟ್ಟಿಯಲ್ಲಿದ್ದ ಹೊಯ್ಸಳ ದೇವಾಲಯ ಕೊನೆಗೂ ಯನೆಸ್ಕೋ ಮಾನ್ಯತೆಗೆ ಒಳಪಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ಯುನೆಸ್ಕೋ, ಭಾರತಕ್ಕೆ ಅಭಿನಂದನೆಗಳು, ಹೊಯ್ಸಳ ವಿಶಿಷ್ಠ ಹಾಗೂ ವಿಶೇಷ ವಾಸ್ತುಶಿಲ್ಪದ ಕೆತ್ತನೆಗಳು ಇದೀಗ ಯುನೆಸ್ಕೋ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಅಚ್ಚೊತ್ತಿದೆ ಎಂದು ಟ್ವೀಟ್ ಮಾಡಿದೆ.  ಈ ಮೂಲಕ ಭಾರತದ 42 ಸ್ಮಾರಕಗಳು, ದೇವಾಲಯಗಳು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿ ಸೇರಿಕೊಂಡ ಠಾಗೋರ್ ಶಾಂತಿನಿಕೇತನ ಮನೆ!

12 ರಿಂದ 13ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯಗಳು ವಾಸ್ತುಶಿಲ್ಪಗಳಿಂದಲೇ ವಿಶ್ವವಿಖ್ಯಾತಿಯಾಗಿದೆ. ಕರ್ನಾಟಕದ ಎಲ್ಲಾ ಹೊಯ್ಸಳ ದೇವಾಲಯಗಳನ್ನು  ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಣೆ ಮಾಡುತ್ತಿದೆ. ಅತ್ಯಂತ ವಿಶೇಷ ವಾಸ್ತುಶಿಲ್ಪದ ದೇವಾಲಯ ಇದಾಗಿದೆ.  ಹೊಯ್ಸಳರು 12 ಮತ್ತು 13ನೇ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಪ್ರಮುಖ ರಾಜವಂಶಜರು. ಕಲೆ, ಸಾಹಿತ್ಯ ಮತ್ತು ಪ್ರಮುಖವಾಗಿ ದೇವಾಲಯದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಿದ್ದಾರೆ. 

Follow Us:
Download App:
  • android
  • ios