ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿ ಸೇರಿಕೊಂಡ ಠಾಗೋರ್ ಶಾಂತಿನಿಕೇತನ ಮನೆ!
ಖ್ಯಾತ ಸಾಹಿತಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ರಬೀಂದ್ರನಾಥ್ ಠಾಗೋರ್ ಮನೆ ಇದೀಗ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಗೊಂಡಿದೆ. ಈ ಮೂಲಕ ಬಹುದಿನಗಳ ಬೇಡಿಕೆ ಈಡೇರಿದೆ.

ಕೋಲ್ಕತಾ(ಸೆ.17) ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ರಬೀಂದ್ರನಾಥ್ ಠಾಗೋರ್ ಅವರು ಬದುಕಿ ಬಾಳಿದ ಮನೆ ಇದೀಗ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಯಾಗಿದೆ. ಇಂದು ನಡೆದ ಯುನೆಸ್ಕೋ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಘೋಷಿಸಲಾಗಿದೆ. ಸಭೆಯಲ್ಲಿ ಪಾರಂಪರಿಕ ಪಟ್ಟಿಗೆ ಶಾಂತಿನಿಕೇತನ ಸೇರ್ಪಡೆ ಘೋಷಣೆ ಹೊರಬೀಳುತ್ತಿದ್ದಂತೆ ಭಾರತದ ಅಧಿಕಾರಿಗಳು ಧನ್ಯವಾದ, ಭಾರತ್ ಮಾತಾ ಕಿ ಜೈ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಬೀರ್ಮುಮ್ ಜಿಲ್ಲೆಯಲ್ಲಿರುವ ಶಾಂತಿನಿಕೇತನ ಯುನೆಸ್ಕೋ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಯಾಗುವ ಮೂಲಕ ಭಾರತದ 41 ತಾಣಗಳು ಈ ಪಟ್ಟಿಗೆ ಸೇರಿದ ಹೆಗ್ಗಳಿಗೆ ಪಡೆದುಕೊಂಡಿದೆ. ಶಾಂತಿನಿಕೇತನವನ್ನು ರವೀಂದ್ರನಾಥ ಟಾಗೋರ್‌ನವರ ತಂದೆ ಮಹರ್ಷಿ ದೇವೇಂದ್ರನಾಥ್‌ರವರು 1863ರಲ್ಲಿ ಪಶ್ಚಿಮ ಬಂಗಾಳದ ಬೀರ್‌ಭೂಂನಲ್ಲಿ ಸ್ಥಾಪಿಸಿದ್ದರು. ನಂತರ ರವೀಂದ್ರನಾಥ್ ಟಾಗೋರರು ಮುನ್ನಡೆಸಿಕೊಂಡು ಅದನ್ನು ವಿಶ್ವ ಭಾರತಿ ಎಂಬ ವಿಶ್ವ ವಿದ್ಯಾಲಯವನ್ನಾಗಿಸಿದರು.
ಎಲ್ಲೋರ ಗುಹೆಗಳ ಸ್ಥಿರತೆಯ ರಹಸ್ಯ ಅನ್ವೇಷಣೆ: ಪರಿಸರ ಸ್ನೇಹಿ ಮನೆಗಳ ನಿರ್ಮಾಣಕ್ಕೆ ಪೂರಕ
ಭಾರತದ ರಾಷ್ಟ್ರಗೀತಿ ಜನಗಣಮನ ರಚನೆ ಮಾಡಿದ ಠಾಗೋರ್ ಅವರ ಇದೇ ಶಾಂತಿನಿಕೇತನ ಮನೆ ಭಾರತದ ಇತಿಹಾಸದಲ್ಲಿ ಪ್ರಮುಖ ಕೇಂದ್ರಬಿಂದುವಾಗಿದೆ. ಇದೇ ಶಾಂತಿನಿಕೇತನದಲ್ಲಿ ರಬೀಂದ್ರನಾಥ್ ಠಾಗೋರ್ ಹಲವು ಸಭೆಗಳನ್ನು ನಡೆಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಹಾತ್ಮಾ ಗಾಂಧಿ ಜೊತೆಗೆ ಹಲವು ಸಭೆಗಳು ನಡೆದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಮನೆ ಪ್ರಮುಖ ಪಾತ್ರ ನಿರ್ವಹಿಸಿದೆ. ಇನ್ನು ಸ್ವಾತಂತ್ರ್ಯ ಬಳಿಕ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಕೂಡ ಇದೇ ಮನೆಯಲ್ಲಿ ಠಾಗೋರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
UNESCO World Heritage List: ವಿಶ್ವ ಪರಂಪರೆ ಪಟ್ಟಿಯಲ್ಲಿ ಕರ್ನಾಟಕದ ಬೇಲೂರು, ಹಳೇಬೀಡು, ಸೋಮನಾಥಪುರ
ಭಾರತದ 41 ತಾಣಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 2021ರಲ್ಲಿ ಗಂಗಾವತಿ ತಾಲೂಕಿನ ಹಿರೇಬೆಣಕಲ್‌ನ ಮೌರ್ಯರ ಕಾಲದ ಶಿಲಾಯುಗ ಪ್ರದೇಶವನ್ನು ಯುನೆಸ್ಕೋ ಪಟ್ಟಿಗೆ ಸೇರ್ಪಡಿಸಿತ್ತು. ಹಿರೇಬೆಣಕಲ್ ಪ್ರದೇಶದ ಗುಡ್ಡದಲ್ಲಿ ಶಿಲಾಯುಗದ ಶಿಲಾ ಸಮಾಧಿಗಳು ಇದ್ದು, 2 ಸಾವಿರಕ್ಕೂ ಹೆಚ್ಚು ನವ ಶಿಲಾಯುಗದ ಸ್ಮಶಾನಗಳಲ್ಲೇ ಇದು ಅತಿ ದೊಡ್ಡದು ಎಂದು ಹೇಳಲಾಗುತ್ತಿದೆ.