ಬೆಂಗಳೂರು [ಜ.24]:  ಬಾಗಲೂರು ಸಮೀಪ ಮನೆಯೊಂದರ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಬಾಂಗ್ಲಾದೇಶದ ಪ್ರಜೆ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚನ್ನಸಂದ್ರದ ಅಶ್ರಫ್‌ ಮಂಡಲ್‌, ಬಾಂಗ್ಲಾದೇಶದ ಮೊಹಮ್ಮದ್‌ ಹುಸೇನ್‌ ಹಾಗೂ ದೆಹಲಿ ಮೂಲದ ಮಹಿಳೆ ಬಂಧಿತಳಾಗಿದ್ದು, ಈ ವೇಳೆ ಇಬ್ಬರು ಮಹಿಳೆಯರನ್ನು ಸಹ ರಕ್ಷಿಸಲಾಗಿದೆ.

ಬೆಂಗಳೂರು: ಬೌನ್ಸ್‌ನಲ್ಲಿ ಬಂದಿದ್ದವರು 3 ಲಕ್ಷ ರೂ. ದೋಚಿದ್ರು, ಆಮೇಲೆ!...

ಹಲವು ತಿಂಗಳಿಂದ ಬಾಂಗ್ಲಾದೇಶದಿಂದ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆಗೆ ಆರೋಪಿಗಳು ತಳ್ಳಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬುಧವಾರ ರಾತ್ರಿ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು : ಕೊಂದೇ ಬಿಟ್ಟ ಪಾಪಿ...

ಒಂದು ವರ್ಷದ ಅವಧಿಯಲ್ಲಿ ಬಾಂಗ್ಲಾದೇಶದಿಂದ ಇಬ್ಬರು ಯುವತಿಯರನ್ನು ಹುಸೇನ್‌ ಅಕ್ರಮವಾಗಿ ಕರೆ ತಂದಿರುವ ಬಗ್ಗೆ ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಮತ್ತಷ್ಟುಮಾಹಿತಿ ಸಿಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.