ದಲಿತರ ಶ್ರೇಯೋಭಿವೃದ್ಧಿಗೆ ಸವಲತ್ತು ಪಡೆದುಕೊಳ್ಳಿ: ಸಚಿವ ಕಾರಜೋಳ
ರಾಜ್ಯ ಸರ್ಕಾರದಿಂದ ದಲಿತ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಾಕಷ್ಟುಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಲೋಕಾಪುರ (ಡಿ.26): ರಾಜ್ಯ ಸರ್ಕಾರದಿಂದ ದಲಿತ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಾಕಷ್ಟುಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಪಟ್ಟಣದ ಠಾಣಿಕೇರಿ ಓಣಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನೂತನವಾಗಿ ನಿರ್ಮಿಸಿರುವ ಡಾ.ಬಾಬು ಜಗಜೀವನ್‌ರಾಮ್ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು .75 ಲಕ್ಷಗಳ ವೆಚ್ಚದಲ್ಲಿ ಮೂಲಭೂತಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ಸುಸಜ್ಜಿತವಾದ ಡಾ.ಬಾಬು ಜಗಜೀವನ ರಾಮ್ ಸಮುದಾಯ ಭವನ ನಿರ್ಮಿಸಲಾಗಿದೆ.
ಈ ಭವನವನ್ನು ಸುಂದರವಾಗಿಟ್ಟುಕೊಂಡು ಸಮಾಜದ ಎಲ್ಲ ಕಾರ್ಯಕ್ರಮಗಳಿಗೆ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ನಮ್ಮ ದಲಿತ ಸಮುದಾಯದವರು ಕೇಳಿರುವಂತಹ ಎಲ್ಲ ಕೆಲಸ ಕಾರ್ಯಗಳನ್ನು ನಾನು ಮಾಡಿ ಕೊಟ್ಟಿದ್ದೇನೆ. ನಮ್ಮ ಜನಾಂಗದವರಿಗೆ ಕಳೆದ ಮೂರು ವರ್ಷದಲ್ಲಿ 15 ತಿಂಗಳು ಅವಧಿಯಲ್ಲಿ ನಾನು ಸಮಾಜ ಕಲ್ಯಾಣ ಇಲಾಖೆ ಮಂತ್ರಿ ಇದ್ದಾಗ 4835 ಎಕರೆ ಜಮೀನನ್ನು ಕೊಡಿಸಿದ್ದೇನೆ.
ಮಹದಾಯಿ ಯೋಜನೆ ಶೀಘ್ರ ಕಾರ್ಯರೂಪಕ್ಕೆ: ಸಚಿವ ಗೋವಿಂದ ಕಾರಜೋಳ
ಪ್ರತಿಯೊಬ್ಬರಿಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ, ಪಂಪ್ ಹಾಕಿಸಿ ನೀರಾವರಿ ಸೌಲಭ್ಯವನ್ನು ಒದಗಿಸಲಾಗಿದೆ. ಐವತ್ತು ವರ್ಷಗಳಲ್ಲಿ ನಮ್ಮ ಸಮುದಾಯದ ಕೇರಿಗಳಲ್ಲಿ ಇಲ್ಲಿಯವೆರೆಗೆ ಯಾರು ಮಾಡದ ಕಾರ್ಯವನ್ನು ನಾನು ಮಾಡಿದ್ದೇನೆ. 85 ಹಳ್ಳಿಗಳಲ್ಲಿ ಪ್ರತಿಯೊಬ್ಬರಿಗೂ ಸರ್ಕಾರದ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುವಂತಹ ಕೆಲಸ ಮಾಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಠಾಣಿಕೇರಿ ಗ್ರಾಮದ ಹಿರಿಯರು, ಮುಖಂಡರು ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೆ.ಆರ್. ಮಾಚಪ್ಪನವರ, ಹಣಮಂತ ತುಳಸಿಗೇರಿ, ಲೋಕಣ್ಣ ಕತ್ತಿ, ರಾಜು ಯಡಹಳ್ಳಿ, ಎಂ.ಎಂ.ವಿರಕ್ತಮಠ, ಕುಮಾರ ಹುಲಕುಂದ, ಕಲ್ಲಪ್ಪ ಸಬರದ, ರವಿ ಬೋಳಿಶೆಟ್ಟಿ, ಪ್ರಕಾಶ ಚುಳಕಿ, ಸುರೇಶ ಹುಗ್ಗಿ, ಮಹೇಶ ಹುಗ್ಗಿ, ಜಿಪಂ ಮಾಜಿ ಸದಸ್ಯ ಭೀಮಶೆಪ್ಪ ಹಲಕಿ, ಸಿದ್ರಾಮಪ್ಪ ದೇಸಾಯಿ, ವಸಂತಗೌಡ ಪಾಟೀಲ, ಬಿ.ಎಲ್.ಬಬಲಾದಿ, ವಿನೋದ ಘೋರ್ಪಡೆ, ವಸಂತಗೌಡಪಾಟೀಲ, ಸಾಬಣ್ಣ ಚೌಡನ್ನವರ, ವಿಠ್ಠಲ ಹುಗ್ಗಿ, ಯಮನಪ್ಪಕಾಳಮ್ಮನವರ, ಪರಶುರಾಮ ಜುನ್ನಪ್ಪನವರ, ಸಿದ್ದಪ್ಪಪರಸನ್ನವರ, ಭೀಮಪ್ಪಹುಗ್ಗಿ.
ಸುಳ್ಳು ಹೇಳುವುದು ಕಾಂಗ್ರೆಸ್‌ನ ಜಾಯಮಾನ: ಸಚಿವ ಗೋವಿಂದ ಕಾರಜೋಳ
ಮರಗಪ್ಪಮುದಕವಿ, ರವಿ ರೊಡ್ಡಪ್ಪನವರ, ಹಣಮಂತ ಪರಸನ್ನವರ, ಅರುಣ ಮುಧೋಳ, ಅಧಿಕಾರಿಗಳಾದ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ನಂದಾ ಹಣಬರಟ್ಟಿ, ತಹಸೀಲ್ದಾರ್ ವಿನೋದ ಹತ್ತಳ್ಳಿ, ಸಮಾಜ ಕಲ್ಯಾಣ ತಾಲೂಕು ಅಧಿಕಾರಿ ಮೋಹನ ಕೊರಡ್ಡಿ, ತಾಪಂ ಇಒ ಕಿರಣ ಘೋರ್ಪಡೆ, ಬಿಇಒ ಸಮೀರ ಮುಲ್ಲಾ, ಪಪಂ ಮುಖ್ಯಾಧಿಕಾರಿ ಎಂ.ವಿ.ನಡುವಿನಕೇರಿ, ತೋಟಗಾರಿಕೆ ಇಲಾಖೆ ಅಧಿಕಾರಿ ಮಹೇಶ ದಂಡನ್ನವರ, ಕೃಷಿ ಅಧಿಕಾರಿ ಡಿ.ವಿ.ದಾಸರ, ಪಶು ಇಲಾಖೆ ಅಧಿಕಾರಿ ಗೋವಿಂದ ರಾಠೋಡ, ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ ಸೇರಿದಂತೆ ಗ್ರಾಮಸ್ಥರು ಇದ್ದರು.