Asianet Suvarna News Asianet Suvarna News

ಮಹದಾಯಿ ಯೋಜನೆ ಶೀಘ್ರ ಕಾರ್ಯರೂಪಕ್ಕೆ: ಸಚಿವ ಗೋವಿಂದ ಕಾರಜೋಳ

ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನ ಇರುವಂತಹ ಈ ಕ್ಷೇತ್ರದಲ್ಲಿ ರಾಜ್ಯ ರಸ್ತೆ ಸಾರಿಗೆ ಸೇವೆಯು ವಿಶೇಷವಾದ ಮಹತ್ವ ಪಡೆದುಕೊಂಡಿದೆ. ಆ ನಿಟ್ಟಿನಲ್ಲಿ ಈ ಭಾಗದಲ್ಲಿ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. 

mahadayi water project to be implemented soon says minister govind karajol gvd
Author
First Published Dec 26, 2022, 8:27 PM IST

ಸವದತ್ತಿ (ಡಿ.26): ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನ ಇರುವಂತಹ ಈ ಕ್ಷೇತ್ರದಲ್ಲಿ ರಾಜ್ಯ ರಸ್ತೆ ಸಾರಿಗೆ ಸೇವೆಯು ವಿಶೇಷವಾದ ಮಹತ್ವ ಪಡೆದುಕೊಂಡಿದೆ. ಆ ನಿಟ್ಟಿನಲ್ಲಿ ಈ ಭಾಗದಲ್ಲಿ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ಪಟ್ಟಣದಲ್ಲಿ ನಿರ್ಮಿಸಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ರಾಜ್ಯದ ಜನರಿಗೆ ಸೌಲಭ್ಯಗಳನ್ನು ಕಲ್ಪಿಸುವ ಸಂಸ್ಥೆಗಳು ಲಾಭದಲ್ಲಿದ್ದರೆ ಮಾತ್ರ ಸದೃಢವಾಗಿರಲು ಸಾಧ್ಯವಾಗುತ್ತದೆ ಎಂದರು.

ಬಹುದಿನಗಳ ಬೇಡಿಕೆಯಾಗಿರುವ ಮಹದಾಯಿ ಯೋಜನೆಯು ಕೂಡಲೇ ಕಾರ್ಯರೂಪಕ್ಕೆ ಬರಲಿದ್ದು, ಅದಕ್ಕಾಗಿ .1 ಸಾವಿರ ಕೋಟಿ ಮೀಸಲಿರಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಹದಾಯಿ ಯೋಜನೆ ಸದ್ಯದಲ್ಲಿಯೇ ಇತ್ಯರ್ಥಗೊಳ್ಳಲಿದೆ. ಅಲ್ಲದೇ ದಿ.ಆನಂದ ಮಾಮನಿ ಅವರು ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ಅಭಿವೃದ್ದಿಗೆ ವಿಶೇಷ ಕಾಳಜಿ ಹೊಂದಿದ್ದರು. ಅವರ ಕಾಳಜಿ ಪೂರಕವಾಗಿರುವಂತ ಕ್ಷೇತ್ರದ ಎಲ್ಲ ಬೇಡಿಕೆಗಳನ್ನು ಅನುಷ್ಠಾನಕ್ಕೆ ತಂದೆ ತರುತ್ತೇವೆ ಎಂದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದ್ದು, ಗ್ರಾಮೀಣ ಸಾರಿಗೆಯು ಅಭಿವೃದ್ಧಿ ಹೊಂದಬೇಕಿದೆ. 

ಸುಳ್ಳು ಹೇಳುವುದು ಕಾಂಗ್ರೆಸ್‌ನ ಜಾಯಮಾನ: ಸಚಿವ ಗೋವಿಂದ ಕಾರಜೋಳ

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಲಕ್ಷಾಂತರ ಜನರು ಆಗಮಿಸುತ್ತಿದ್ದು, ಸವದತ್ತಿ ಘಟಕಕ್ಕೆ ಹೊಸ ಹಾಗೂ ಅತ್ಯಾಧುನಿಕ ಸೌಲಭ್ಯತೆಗಳಿರುವ ಬಸ್ಸುಗಳನ್ನು ಸರ್ಕಾರ ನೀಡಬೇಕು. ಸಚಿವ ಸಂಪುಟದಲ್ಲಿ .5700 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆಗಳಿಗಾಗಿ ಅನುಮೋದನೆ ನೀಡಿ ರೈತರ ಪರವಾಗಿ ಸರ್ಕಾರ ಉತ್ತಮ ಕ್ರಮ ಕೈಗೊಳ್ಳುತ್ತಿದೆ ಎಂದರು. ಸಂಸದೆ ಮಂಗಲಾ ಅಂಗಡಿ ಮಾತನಾಡಿ, ಸವದತ್ತಿ ಭಾಗದ ಜನರು ಹಲವಾರು ವರ್ಷಗಳಿಂದ ರೈಲು ಮಾರ್ಗದ ಬೇಡಿಕೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮುಂದೆ ತರಲಾಗಿದ್ದು, ಅದನ್ನು ಸದ್ಯದಲ್ಲಿ ಈಡೇರಿಸುವಂತ ಕಾರ್ಯವನ್ನು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮತ್ತು ತಾವು ಮಾಡಿಕೊಡುವದಾಗಿ ಭರವಸೆ ನೀಡಿದರು.

ರತ್ನಕ್ಕಾ ಆನಂದ ಮಾಮನಿ ಮಾತನಾಡಿ, ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿ ನಮ್ಮ ಯಜಮಾನರು ಮಾಡಿದಂತ ಅಭಿವೃದ್ದಿ ಕಾರ್ಯಗಳು ಇಂದು ಲೋಕಾರ್ಪಣೆಗೊಳ್ಳುತ್ತಿರುವ ಸಂತಸ ತಂದಿದೆ. ಸಾರಿಗೆ ಸಂಸ್ಥೆಯ ನೌಕರರ ಮೇಲೆ ಆನಂದ ಮಾಮನಿ ಅವರ ಹೆಚ್ಚಿನ ಪ್ರೀತಿ ಮತ್ತು ಸಹಕಾರವನ್ನು ತೋರಿ ಅವರ ಸಮಸ್ಯೆಗಳಿಗೆ ಸ್ಪಂಧನೆ ನೀಡುತ್ತಾ ಬಂದಿದ್ದರು. ಸಾರಿಗೆ ಸಂಸ್ಥೆಯ ನೌಕರರ ಜೀವನ ಕಷ್ಟದಾಯಕವಾಗಿದ್ದು, ಅವರಿಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೌಕರರಂತೆ ಪಿಂಚಣಿ ವ್ಯವಸ್ಥೆಯಾಗಬೇಕು ಎಂದರು.

ಕರ್ನಾಟಕಕ್ಕೆ ನೀರು ನಿಲ್ಲಿಸಲು ಯಾರಪ್ಪನಿಂದಲೂ ಆಗದು: ಸಚಿವ ಗೋವಿಂದ ಕಾರಜೋಳ

ವಾಕರಸಾ ಸಂಸ್ಥೆ ಕೇಂದ್ರ ಕಚೇರಿಯ ಉಪಾಧ್ಯಕ್ಷ ಡಾ.ಬಸವರಾಜ ಕೆಲಗಾರ, ಪುರಸಭೆ ಉಪಾಧ್ಯಕ್ಷ ದೀಪಕ ಜಾನವೇಕರ, ಅಶೋಕ ಮಳಗಿ, ತಹಸೀಲ್ದಾರ ಜೆ.ಬಿ.ಜಕ್ಕನಗೌಡರ, ಪ್ರಕಾಶ ಕಬಾಡಿ, ವಿಭಾಗೀಯ ನಿಯಂತ್ರಣಾಧಿಕಾರಿ ಡಾ.ಶಶಿಧರ ಚನ್ನಪ್ಪಗೌಡರ, ಘಟಕ ವ್ಯವಸ್ಥಾಪಕ ಗಣೇಶ ಜವಳಿ, ಪುರಸಭೆ ಸದಸ್ಯರಾದ ಅರ್ಜುನ ಅಮ್ಮೋಜಿ, ಐ.ಪಿ.ಪಾಟೀಲ, ಎಲ್‌.ಆರ್‌.ಕುಲಕರ್ಣಿ, ಯಲ್ಲಪ್ಪ ರುದ್ರಾಕ್ಷಿ ಇತರರು ಉಪಸ್ಥಿತರಿದ್ದರು. ಸುನೀಲ ಪತ್ರಿ ನಿರೂಪಿಸಿದರು.

Follow Us:
Download App:
  • android
  • ios