ಬೆಂಗಳೂರು [ಜ.30]:  ಕೈದಿಗಳಿಗೆ ರಾಜಾತಿಥ್ಯದ ಆರೋಪಕ್ಕೆ ತುತ್ತಾಗುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೀಗ ವಿಚಾರಣಾಧೀನ ಕೈದಿಗಳ ಟಿಕ್‌ಟಾಕ್‌ ವಿಡಿಯೋ ವಿವಾದ ಎದ್ದಿದೆ.

"

ಹೆಣ್ಣೂರಿನ ಫಯಾಜ್‌ ಹಾಗೂ ಶಾಹೀದ್‌ ಟಿಕ್‌ಟಾಕ್‌ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ಬಹಿರಂಗಗೊಂಡು ವೈರಲ್‌ ಆಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಂದೀಖಾನೆ ಎಡಿಜಿಪಿ ಎನ್‌.ಎಸ್‌.ಮೇಘರಿಕ್‌ ಅವರು, ಪ್ರಕರಣದ ಕುರಿತು ಆಂತರಿಕ ವಿಚಾರಣೆಗೆ ಆದೇಶಿಸಿದ್ದಾರೆ. ಈ ವಿಡಿಯೋ ಬೆನ್ನೆಲ್ಲೇ ಜೈಲಿನಲ್ಲಿ ಕೈದಿಗಳು ನಿರಾಂತಕವಾಗಿ ಮೊಬೈಲ್‌ ಬಳಸುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ಸೋಷಿಯಲ್ ಮೀಡಿಯಾ ಮೊಬೈಲ್ ಅಪ್ಲಿಕೇಶನ್ ಹಿಂದಿಕ್ಕಿದ ಟಿಕ್‌ಟಾಕ್..!

ಕೆಲ ದಿನಗಳ ಹಿಂದೆ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿಗೆ ಸೇರಿರುವ ಫಯಾಜ್‌ ಹಾಗೂ ಶಾಹಿದ್‌, ತಮ್ಮ ಸಹಚರರ ಜತೆ ನಟ ಶಿವರಾಜ್‌ ಕುಮಾರ್‌ ಅವರ ಸಿನಿಮಾದ ಡೈಲಾಗ್‌ಗೆ ಟಿಕ್‌ಟಾಕ್‌ ಮಾಡಿದ್ದಾರೆ. ಅಲ್ಲದೆ, ಸಿಗರೆಟ್‌ ಸೇದುವುದು ಹಾಗೂ ಚಾಕು ಚೂರಿ ಸಹ ದೃಶ್ಯಗಳಲ್ಲಿ ಕಂಡು ಬಂದಿದೆ. ಮತ್ತೊಂದು ಟಿಕ್‌ಟಾಕ್‌ ವಿಡಿಯೋದಲ್ಲಿ ಫಯಾಜ್‌ನ ಪ್ರಿಯಸಿ ಕಾಣಿಸಿಕೊಂಡಿದ್ದಾಳೆ. ಆದರೆ ಈ ವಿಡಿಯೋವನ್ನು ಫಯಾಜ್‌ ಚಿತ್ರ ಬಳಸಿ ಮಾಡಲಾಗಿದೆ. ಆದರೆ ಜೈಲಿಗೆ ಆಕೆ ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹಣದಿಂದ ಖುಷಿ ಖರೀದಿಸಲು ಸಾಧ್ಯವಿಲ್ಲ: ನೆಟ್ಟಿಗರ ಮನಗೆದ್ದ ಅಪ್ಪ ಮಗಳ ಬಾಂಧವ್ಯ!...

ಕಾರಾಗೃಹದಲ್ಲಿ ಮೊಬೈಲ್‌ ಬಳಕೆಗೆ ಅವಕಾಶವಿಲ್ಲ. ಆದಾಗ್ಯೂ ಕೆಲವು ಕೈದಿಗಳು ರಹಸ್ಯವಾಗಿ ಮೊಬೈಲ್‌ ಬಳಸುತ್ತಿದ್ದಾರೆ. ಟಿಕ್‌ಟಾಕ್‌ ವಿಡಿಯೋ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.