ನವದೆಹಲಿ[ಡಿ.15]: ಖುಷಿ ಹಣದಿಂದ ಖರೀದಿಸಲು ಸಾಧ್ಯ ಇಲ್ಲ... ಟಿಕ್ ಟಾಕ್ ನಲ್ಲಿ ವಿಡಿಯೋ ಒಂದು ವೈರಲ್ ಆದ ಬಳಿಕ ನೆಟ್ಟಿಗರು ಕೊಟ್ಟ ರಿಯಾಕ್ಷನ್ ಇದು. ಟಿಕ್ ಟಾಕ್ ನಲ್ಲಿ ಭಾರೀ ಫೇಮಸ್ ಆಗಿರುವ ತಂದೆ ಮಗಳ ವಿಡಿಯೋ ಇದಾಗಿದ್ದು, ಅವರ ಮುಗ್ಧತೆ ಹಾಗೂ ಪ್ರೀತಿ ಜನರ ಮನ ಗೆದ್ದಿದೆ.

ಹೌದು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿರುವ ತಂದೆ, ಕೆಲಸ ಮಾಡುತ್ತಾ ಅಲ್ಲೇ ತನ್ನ ಮಗಳೊಂದಿಗೆ ಟಿಕ್ ಟಾಕ್ ವಿಡಿಯೋ ಮಾಡುತ್ತಾರೆ. ಸದ್ಯ ಈ ತಂದೆ ಮಗಳ ಲೇಟೆಸ್ಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ಈ ವಿಡಿಯೋದಲ್ಲಿ ಅವರು ಆಮಿರ್ ಖಾನ್ ನಟನೆಯ ಸಿನಿಮಾ 'ಅಕೇಲೆ ಹಮ್ ಅಕೇಲೆ ತುಮ್' ಸಿನಿಮಾದ ಹಾಡು 'ತೂ ಮೆರಾ ದಿಲ್, ತೂ ಮೇರಿ ಜಾನ್' ಹಾಡಿಗೆ ಟಿಕ್ ಟಾಕ್ ವಿಡಿಯೋ ಮಾಡಿದ್ದಾರೆ. 

ಟ್ವಿಟರ್ ನಲ್ಲಿ ಭಾರೀ ವೈರಲ್ ಆಗಿರುವ ಈ ವಿಡಿಯೋ ಜನರ ಮನ ಗೆದ್ದಿದ್ದು, ವಿಭಿನ್ನ ಕಮೆಂಟ್ ಗಳ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ವಿಡಿಯೋದಲ್ಲಿರುವ ವ್ಯಕ್ತಿ ಸಂತೋಷ್ ರೋಕಡೆ ಹೆಸರಿನಲ್ಲಿ ಟಿಕ್ ಟಾಕ್ ಅಕೌಂಟ್ ಹೊಂದಿದ್ದಾನೆ. ಇಲ್ಲಿ ಅವರಿಗೆ 5 ಲಕ್ಷದ 27 ಸಾವಿರ ಫಾಲೋವರ್ಸ್ ಇದ್ದಾರೆ. ಅಲ್ಲದೇ 1 ಕೋಟಿಗೂ ಅಧಿಕ ಮಂದಿ ಅವರ ಪೇಜ್ ಲೈಕ್ ಮಾಡಿದ್ದಾರೆ. ಈ ಅಕೌಂಟ್ ನಲ್ಲಿ ತಂದೆ ಮಗಳ ಪ್ರೀತಿ ಸಾರುವ ಅದ್ಭುತ ವಿಡಿಯೋಗಳನ್ನು ನೊಡಬಹುದಾಗಿದೆ.