*  ರೈತ ಮುಖಂಡನ ಟ್ವೀಟ್‌ಗೆ ಪಿಎಂ ಕಚೇರಿ ಸ್ಪಂದನೆ*  ಹುಟ್ಟಿನಿಂದಲೂ ವಿಚಿತ್ರ ಚರ್ಮ ಖಾಯಿಲೆಯಿಂದ ಬಳಲುತ್ತಿರುವ ನೂತನ್*  ನೂತನ್ ಫೋಟೋ ಮತ್ತು ಮಾಹಿತಿ ಟ್ವೀಟ್ ಮಾಡಿ ಪಿಎಂಗೆ ಟ್ಯಾಗ್ ಮಾಡಿದ್ದ ಮಧುಚಂದನ್   

ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ(ಜೂ.03): ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಅನಿವಾರ್ಯ. ನ್ಯಾಯಬೆಲೆ ಅಂಗಡಿ, ಬ್ಯಾಂಕ್, ಸರ್ಕಾರಿ ಕಚೇರಿ ಹೀಗೆ ಎಲ್ಲೇ ಕೆಲಸಗಳು ಆಗಬೇಕೆಂದೆರೆ ಆಧಾರ್ ಬೇಕೆ ಬೇಕು. ಅದೆಷ್ಟೋ ವಯೋವೃದ್ದರು, ಅಂಗವಿಕಲರು ಬಯೋಮೆಟ್ರಿಕ್ ಸಮಸ್ಯೆಯಿಂದ ಆಧಾರ್ ಪಡೆಯಲಾಗ್ತಿಲ್ಲ. ಆದ್ರೆ ಮಂಡ್ಯದ ಓರ್ವ ಅಂಗವಿಕಲ ಯುವಕನಿಗೆ ಪ್ರಧಾನಿ ಕಚೇರಿಯಿಂದಲೇ ಆಧಾರ್ ಪಡೆಯಲು ನೆರವು ದೊರಕಿದೆ. ಕಳೆದ 2 ವರ್ಷದ ಸಮಸ್ಯೆ ಒಂದು ಟ್ವೀಟ್‌ನಿಂದ ಕೇವಲ 2 ದಿನಗಳಲ್ಲೇ ಈ ಸಮಸ್ಯೆ ಬಗೆಹರಿದಿದೆ.

Scroll to load tweet…

ಏನಿದು ಪ್ರಕರಣ.?

ಮಂಡ್ಯ ತಾಲೂಕಿನ ತಂಡಸನಹಳ್ಳಿ ಗ್ರಾಮದ ನೂತನ್ ಎಂಬ 25 ವರ್ಷದ ಅಂಗವಿಕಲ ಯುವಕ. ಹುಟ್ಟಿನಿಂದಲೂ ವಿಚಿತ್ರ ಚರ್ಮ ಖಾಯಿಲೆಯಿಂದ ಬಳಲುತ್ತಿದ್ದಾರೆ. ನೂತನ್ ಹಲವು ವರ್ಷಗಳ ಹಿಂದೆಯೇ ಆಧಾರ್‌ ಕಾರ್ಡ್‌ ಮಾಡಿಸಿದ್ದಾರೆ. ಆದರೆ ಮೊಬೈಲ್ ಸಂಖ್ಯೆ ನಮೂದಿಸಿರಲಿಲ್ಲ. ಕೆಲ ವರ್ಷಗಳಿಂದ ಆಧಾರ್‌ಗೆ ಮೊಬೈಲ್ ನಂಬರ್ ನಮೂದಿಸಬೇಕು ಎಂಬ ನಿಯಮದ ಬಳಿಕ ಯುವಕನಿಗೆ ಬರ್ತಿದ್ದ ಪಿಂಚಣಿ, ಸರ್ಕಾರಿ ಸೌಲಭ್ಯ ನಿಂತುಹೋಗಿದೆ. ಎರಡು ವರ್ಷದ ಹಿಂದೆಯೇ ಬ್ಯಾಂಕ್‌ ಖಾತೆಗೆ ಹಣ ಬಾರದ ಕುರಿತು ವಿಚಾರಿಸಿದ ನೂತನ್‌ಗೆ ಆಧಾರ್‌ನಲ್ಲಿ ಮೊಬೈಲ್‌ ಸಂಖ್ಯೆ ಅಪ್‌ಡೇಟ್‌ ಮಾಡಿಸಲು ಸಿಬ್ಬಂದಿಗಳು ಹೇಳಿದ್ರು. ಆದರೆ ಅಪ್‌ಡೇಟ್ ಮಾಡಿಸಿಕೊಳ್ಳಲು ಹೋದ ನೂತನ್‌ಗೆ ಅದು ಸಾಧ್ಯವಾಗಿಲ್ಲ. ಯಾಕೆಂದರೆ ಆತನಿಗೆ ಚರ್ಮದ ಸಮಸ್ಯೆ ಇದ್ದ ಕಾರಣ ಬಯೋಮೆಟ್ರಿಕ್ ತೆಗೆದುಕೊಂಡಿಲ್ಲ. ಕಣ್ಣಿನ ಸ್ಕ್ಯಾನ್ ಕೂಡ ಆಗಲಿಲ್ಲ. ಇದರಿಂದಾಗಿ ಆಧಾರ್‌ಕಾರ್ಡ್‌ ಕೂಡ ಬ್ಲಾಕ್‌ ಆಗಿತ್ತು. ಪರಿಣಾಮ, ಸರ್ಕಾರದ ಸೌಲಭ್ಯಗಳಿಂದ ನೂತನ್ ವಂಚಿತನಾಗಿದ್ದನು. ಈ ಸಮಸ್ಯೆ ಕುರಿತು ಡಿಸಿ, ಎಸಿ ಸೇರಿದಂತೆ ಹಲವು ಅಧಿಕಾರಿಗಳಿಗೆ ನೂತನ್ ಕುಟುಂಬ ಮನವಿ ಸಲ್ಲಿಸಿತ್ತಾದ್ರು ಯಾವುದೇ ಪ್ರಯೋಜನವಾಗಲಿಲ್ಲ. ಸಂಸದೆ ಸುಮಲತಾ ಪತ್ರ ಕೊಟ್ಟರೂ ಸಮಸ್ಯೆ ಬಗೆಹರಿಯಲಿಲ್ಲ. 

ಕಂದಮ್ಮನ ಕಣ್ಣೇದುರೇ ನೇಣಿಗೆ ಶರಣಾದ ತಾಯಿ, ಶವದ ಮುಂದೆ ಎರಡೂವರೆ ಗಂಟೆ ರೋಧಿಸಿದ ಮಗು

2 ವರ್ಷದ ಸಮಸ್ಯೆಗೆ 2 ದಿನದಲ್ಲಿ ಮುಕ್ತಿ

ಅಧಿಕಾರಿಗಳಿಂದ ರೆಸ್ಪಾನ್ಸ್ ಬಾರದಿದ್ದಾಗ ನೂತನ್ ಕುಟುಂಬಸ್ಥರು ಆರ್ಗ್ಯಾನಿಕ್ ಸಂಸ್ಥಾಪಕ ಹಾಗೂ ರೈತ ಮುಖಂಡ ಮಧುಚಂದನ್ ಭೇಟಿ ಮಾಡಿ ಸಮಸ್ಯೆಯನ್ನು ವಿವರಿಸಿದ್ದಾರೆ. ನೂತನ್ ಫೋಟೋ ಮತ್ತು ಮಾಹಿತಿಯನ್ನು ಟ್ವೀಟ್ ಮಾಡಿ ಪಿಎಂಗೆ ಟ್ಯಾಗ್ ಮಾಡಿದ್ದ ಮಧುಚಂದನ್ ಆನ್‌ಲೈನ್ ಪತ್ರ ಕೂಡ ಬರೆದಿದ್ದರು. ಬಳಿಕ ಕೂಡಲೇ ಸ್ಪಂದಿಸಿದ ಅಧಿಕಾರಿಗಳು, ಬೆಂಗಳೂರಿನ ಕಚೇರಿಗೆ ಮಾಹಿತಿ ರವಾನಿಸಿ. ಮೇ.29ರಂದು ಬೆಂಗಳೂರಿನ ಆಧಾರ್‌ಕಾರ್ಡ್‌ ಕಚೇರಿಯಿಂದ ಮಧುಚಂದನ್‌ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಮರು ದಿನವೇ ಹಳೆಯ ಆಧಾರ್ ಕಾರ್ಡ್ ಆಕ್ಟಿವ್‌ಗೊಳಿಸಿ ಅಪ್‌ಡೇಟ್ ಮಾಡಿಕೊಟ್ಟರು. ಈ ಮೂಲಕ ಎರಡು ವರ್ಷದಿಂದ ಆಧಾರ್‌ಕಾರ್ಡ್‌ ಮಾಡಿಸಲಾಗದೆ ತೊಂದರೆ ಅನುಭವಿಸಿದ್ದ ನೂತನ್ ಮಧುಚಂದನ್ ಮಾಡಿದ ಟ್ವೀಟ್‌ನಿಂದ ಸಮಸ್ಯೆ ಮುಕ್ತರಾದರು.