ಕಂದಮ್ಮನ ಕಣ್ಣೇದುರೇ ನೇಣಿಗೆ ಶರಣಾದ ತಾಯಿ, ಶವದ ಮುಂದೆ ಎರಡೂವರೆ ಗಂಟೆ ರೋಧಿಸಿದ ಮಗು
* ಕಂದಮ್ಮನ ಕಣ್ಣೆದುರೇ ಪ್ರಾಣ ಬಿಟ್ಟ ತಾಯಿ.
* ಮಗುವಿನ ಜೋಕಾಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ.
* ಸತ್ತ ತಾಯಿ ಎದುರು ಮಗುವಿನ ಆಕ್ರಂದನ.
ಮಂಡ್ಯ, (ಜೂನ್.02): ತನ್ನ ಪುಟ್ಟ ಮಗುವಿನ ಎದರೇ ತಾಯಿ ನೇಣಿಗೆ ಶರಣಾದ ಮನಕಲಕುವ ಘಟನೆ ಮಂಡ್ಯದ ಕೆಂಪೇಗೌಡ ಬಡಾವಣೆಯಲ್ಲಿ ನಡೆದಿದೆ. 36 ವರ್ಷದ ಕವಿತಾ ಮಗುವಿನ ಜೋಕಾಲಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದು ವರ್ಷ ಹೆಣ್ಣು ಮಗು ಎದುರೇ ಕವಿತಾ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ತಾಯಿಯ ಎದುರು ಕುಳಿತಿದ್ದ ಪುಟ್ಟ ಮಗು ಎರಡೂವರೆ ಗಂಟೆಗೂ ಹೆಚ್ಚು ಕಾಲ ರೋಧಿಸಿದೆ.
ಮೂಲತಃ ಕನಕಪುರದವರಾದ ಕವಿತಾ ಕಳೆದ 9 ವರ್ಷಗಳ ಹಿಂದೆ ರವಿಕುಮಾರ್ ಎಂಬುವರನ್ನ ವಿವಾಹವಾಗಿದ್ರು. ದಂಪತಿಗಳಿಗೆ 7 ವರ್ಷದ ಗಂಡು ಮತ್ತು 1 ವರ್ಷದ ಹೆಣ್ಣು ಮಗುವಿದೆ. ಮೂಲತಃ ಮಂಡ್ಯದವರಾದ ರವಿಕುಮಾರ್ ದೈಹಿಕ ಶಿಕ್ಷಕರಾಗಿ ಕೆಲಸ ಮಾಡ್ತಿದ್ದಾರೆ. ಆರಂಭದಲ್ಲಿ ಬೆಂಗಳೂರು ನಗರದಲ್ಲಿ ವಾಸವಾಗಿದ್ದ ಜೋಡಿ. ರವಿಕುಮಾರ್ ಮೈಸೂರಿಗೆ ವರ್ಗಾವಣೆಗೊಂಡ ನಂತರ ಕಳೆದ 3 ತಿಂಗಳ ಹಿಂದೆ ಮಂಡ್ಯದಲ್ಲಿ ನೆಲೆಸಿದ್ರು.
ಎರಡು ಬಾರಿ ಅಬಾರ್ಷನ್ ಮಾಡಿಸಿಕೊಂಡಿದ್ದೇನೆ: ಅನಂತರಾಜು ಫ್ರೆಂಡ್ ಆಡಿಯೋ ವೈರಲ್
ಸಂತೋಷದಿಂದಲೇ ಸಂಸಾರ ನಡೆಸುತ್ತಿದ್ದ ದಂಪತಿ ಕಳೆದ ಮೂರು ದಿನಗಳ ಹಿಂದೆ ತಮ್ಮ ಎರಡನೇ ಮಗುವಿನ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಿದ್ದರು. ಇಷ್ಟು ಅನ್ಯೋನ್ಯವಾಗಿದ್ದ ಸಂಸಾರದಲ್ಲಿ ಯಾಕೆ ಹೀಗೆ ಆಯ್ತು. ಕವಿತಾ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಮಗು ಅಳುವಿನ ಶಬ್ದ ಕೇಳಿ ಬಂದ ಸ್ಥಳೀಯರು
ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕವಿತಾ ಮನೆಯ ಹಾಲ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಮಗುವಿನ ಜೋಕಾಲಿಗೆ ನೇಣು ಬಿಗಿದುಕೊಂಡು ಪುಟ್ಟ ಕಂದಮ್ಮನ ಎದುರೇ ಪ್ರಾಣ ಬಿಟ್ಟಿದ್ದಾರೆ. ತಾಯಿ ಕಳೆದುಕೊಂಡ ಮಗು 12 ಗಂಟೆ ಮಧ್ಯಾಹ್ನ 3 ಗಂಟೆವರೆಗೂ ಅಳುತ್ತಲೇ ಇತ್ತು. ಮಗು ಅಳುವಿನ ಶಬ್ದ ಕೇಳಿ ಆಗಮಿಸಿದ ಅಕ್ಕಪಕ್ಕದವರು ಕವಿತಾ ನೇಣು ಬಿಗಿದು ಕೊಂಡಿರುವ ದೃಶ್ಯ ನೋಡಿ ಗಾಬರಿಗೊಂಡಿದ್ರು. ತಕ್ಷಣ ಕವಿತಾ ಪತಿ ರವಿಕುಮಾರ್‌ಗೆ ವಿಚಾರ ತಿಳಿಸಿದ ಅವರು ನಂತರ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ರು.
ಡೆತ್ ನೋಟ್ ಬರೆದು ಆತ್ಮಹತ್ಯೆ
ತನ್ನ ಒಂದು ವರ್ಷದ ಕಂದಮ್ಮ ಎದರು ಆತ್ಮಹತ್ಯೆ ಮಾಡಿಕೊಂಡಿರುವ ಕವಿತಾ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ. ಇಂದು ನನ್ನ ಕೊನೆ ದಿನವಾಗಿದೆ ಎಂದಿರುವ ಅವರು ಎಲ್ಲಾ ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಆಭರಣ ಮಗ ಮಗಳಿಗೆ ಸೇರಬೇಕು. ನಾನು ಕಷ್ಟಪಟ್ಟ ಆಭರಣಗಳವು. ಇಲ್ಲವಾದರೇ ನಾನು ಮತ್ತು ದೇವರು ಕ್ಷಮಿಸುವುದಿಲ್ಲ ಇಂತಿ ದುರ್ದೈವಿ ಕವಿತಾ ಎಂದು ಬರೆದಿದ್ದಾರೆ. ಸಂಸಾರದ ಸಣ್ಣ ಪುಟ್ಟ ಏರು ಪೇರುಗಳಿಗೆ ದುಡುಕಿನ ನಿರ್ಧಾರ ಕೈಗೊಂಡ ಕವಿತಾ ತನ್ನಿಬ್ಬರು ಮಕ್ಕಳನ್ನ ಅನಾಥರಾಗಿಸಿ ಇಹಲೋಕ ತ್ಯಜಿಸಿದ್ದಾರೆ.