ದಕ್ಷಿಣ ಕನ್ನಡದಲ್ಲಿ 271ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ, 17 ಮಂದಿ ಬಿಡುಗಡೆ

ದ.ಕ. ಜಿಲ್ಲೆಯಲ್ಲಿ ಶನಿವಾರ ಮತ್ತೆ ಕೊರೋನಾ ಅಬ್ಬರ ಕಾಣಿಸಿದೆ. ಬರೋಬ್ಬರಿ 30 ಮಂದಿಯಲ್ಲಿ ಕೊರೋನಾ ಪಾಸಿಟಿವ್‌ ಕಂಡು ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 271ಕ್ಕೆ ಏರಿಕೆಯಾಗಿದೆ.

30 COVID19 positive cases in mangalore on June 13th

ಮಂಗಳೂರು(ಜೂ.14): ದ.ಕ. ಜಿಲ್ಲೆಯಲ್ಲಿ ಶನಿವಾರ ಮತ್ತೆ ಕೊರೋನಾ ಅಬ್ಬರ ಕಾಣಿಸಿದೆ. ಬರೋಬ್ಬರಿ 30 ಮಂದಿಯಲ್ಲಿ ಕೊರೋನಾ ಪಾಸಿಟಿವ್‌ ಕಂಡು ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 271ಕ್ಕೆ ಏರಿಕೆಯಾಗಿದೆ.

ಸೌದಿ ಅರೇಬಿಯಾದಿಂದ ಆಗಮಿಸಿದ 25 ಮಂದಿ ಮತ್ತು ಮಹಾರಾಷ್ಟ್ರದಿಂದ ಬಂದ 5 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದುವರೆಗೆ ಮಹಾರಾಷ್ಟ್ರದಿಂದ ಬಂದವರಲ್ಲಿ ಪಾಸಿಟಿವ್‌ ಕಂಡುಬರುತ್ತಿದ್ದು, ಇದೀಗ ಸೌದಿ ಅರೇಬಿಯಾದಿಂದ ಬಂದವರಲ್ಲೂ ಸೋಂಕು ಕಾಣಿಸಿದೆ. ಕಳೆದ ಒಂದು ವಾರದ ಅಂತರದಲ್ಲಿ 300ಕ್ಕೂ ಅಧಿಕ ಮಂದಿ ಸೌದಿ ಅರೇಬಿಯಾದಿಂದ ಚಾರ್ಟರ್‌ ವಿಮಾನದ ಮೂಲಕ ಕರಾವಳಿಗೆ ಬಂದಿದ್ದಾರೆ. ಬಂದವರೆಲ್ಲರೂ ಕ್ವಾರಂಟೈನ್‌ನಲ್ಲಿದ್ದಾರೆ.

ಉಡುಪಿಯಲ್ಲಿ ‘ಮಹಾ’ ಕೊರೋನಾ ಕೇಕೆ: 80ನೇ ದಿನಕ್ಕೆ ಕೊರೋನಾ 1006 ನಾಟೌಟ್‌!

ಶನಿವಾರ ಸೋಂಕು ಪತ್ತೆಯಾದವರ ಪೈಕಿ 1 ವರ್ಷದ ಮೂರು ಮಕ್ಕಳು, 2 ವರ್ಷದ ಇಬ್ಬರು ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ 5 ವರ್ಷದ ಕೆಳಗಿನ ಒಟ್ಟು 7 ಮಕ್ಕಳು, 8ರಿಂದ 14 ವರ್ಷದೊಳಗಿನ 3 ಮಕ್ಕಳು ಮತ್ತು 6 ಮಂದಿ ಗರ್ಭಿಣಿಯರು ಸೇರಿದ್ದಾರೆ. ಪುಟ್ಟಮಕ್ಕಳಲ್ಲಿ ಕೊರೋನಾ ಸೋಂಕು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಶನಿವಾರ ಬಂದ ಒಟ್ಟು 196 ವರದಿಗಳ ಪೈಕಿ 30 ಪಾಸಿಟಿವ್‌ ಹಾಗೂ 166 ನೆಗೆಟಿವ್‌ ಆಗಿದೆ. ಶನಿವಾರ ಮತ್ತೆ 258 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 28 ಮಂದಿಯಲ್ಲಿ ಶ್ವಾಸಕೋಶದ ಸೋಂಕು ಕಾಣಿಸಿದೆ. 29 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಇದುವರೆಗೆ 146 ಮಂದಿ ಗುಣಮುಖರಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ. 118 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ತೀವ್ರ ನಿಗಾದಲ್ಲಿ ಇದ್ದಾರೆ.

ದಿನ ಭವಿಷ್ಯ: ಈ ರಾಶಿಯವರಿಗೆ ಇದು ಭಾರೀ ಅದೃಷ್ಟದ ದಿನ!

17 ಮಂದಿ ಬಿಡುಗಡೆ: ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ದಾಖಲಾದವರ ಪೈಕಿ ಗುಣಮುಖರಾದ 17 ಮಂದಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 1,46 ಮಂದಿ ಸೋಂಕು ಮುಕ್ತರಾಗಿ ಮನೆಗೆ ತೆರಳಿದಂತಾಗಿದೆ.

Latest Videos
Follow Us:
Download App:
  • android
  • ios