ಗರ್ಭಿಣಿ ಸೋಂಕಿತೆಯರ ಅವಧಿ ಪೂರ್ವ ಪ್ರಸವ ಹೆಚ್ಚಳ
- ಕುಟುಂಬಗಳನ್ನೇ ದೂರ ದೂರ ಮಾಡುತ್ತಿದೆ ಕೊರೋನಾ ವೈರಾಣು
- ಶಿಶುವೊಂದು ತಾಯಿಯ ಗರ್ಭದಲ್ಲಿ ನವಮಾಸ ಪೂರೈಸಲು ಮಹಾಮಾರಿ ಬಿಡುತ್ತಿಲ್ಲ
- ಸೋಂಕಿತ ಗರ್ಭಿಣಿಯರಿಗೆ ನವಮಾಸದ ಬದಲಿಗೆ ಏಳರಿಂದ ಎಂಟೂವರೆ ತಿಂಗಳ ಒಳಗೆ ಪ್ರಸವ
ಬೆಂಗಳೂರು (ಮೇ.18): ಕಣ್ಣಿಗೆ ಕಾಣದ ಕೊರೋನಾ ವೈರಾಣು ಕುಟುಂಬಗಳನ್ನೇ ದೂರ ದೂರ ಮಾಡುತ್ತಿರುವುದು ಒಂದೆಡೆಯಾದರೆ ಶಿಶುವೊಂದು ತಾಯಿಯ ಗರ್ಭದಲ್ಲಿ ನವಮಾಸ ಪೂರೈಸಲು ಮಹಾಮಾರಿ ಬಿಡುತ್ತಿಲ್ಲ.
ಬೆಂಗಳೂರು ನಗರದ ಕೊರೋನಾ ಸೋಂಕಿತ ಗರ್ಭಿಣಿಯರಿಗೆ ನವಮಾಸದ ಬದಲಿಗೆ ಏಳರಿಮದ ಎಂಟೂವರೆ ತಿಂಗಳ ಒಳಗೆ ಪ್ರಸವ ಮಾಡುವ ಪ್ರಕರಣಗಳು ಆಗುತ್ತಿವೆ.
ಕೊರೋನಾ ಸೋಂಕು ಉಲ್ಬಣಿಸಿದ ಗರ್ಭಿಣಿಯರಲ್ಲಿ ತಾಯಿಯ ಜೀವ ಉಳಿಸುವ ಸಲುವಾಗಿ ಅವಧಿ ಪೂರ್ಣ ಪ್ರಸವ ಮಾಡಲಾಗುತ್ತಿದೆ.
ಗರ್ಭಿಣಿಯರು, ಬಾಣಂತಿಯರು ಯಾಕಾಗಿ ವ್ಯಾಕ್ಸಿನ್ ಪಡೆಯಬಾರದು..? ..
ಇದರಿಂದ ಕೆಲವು ಶಿಶುಗಳು ಬದುಕುಳಿದರೆ ಇನ್ನು ಕೆಲ ಶಿಶುಗಳು ಕಣ್ತೆರೆದು ಪ್ರಪಂಚ ನೋಡುವ ಮುನ್ನವೇ ಜೀವ ಕಳೆದುಕೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣ ಗರ್ಭಿಣಿಯರಿಗೆ ಸಹಜವಾಗಿ ನೀಡುವ ಚಿಕಿತ್ಸೆ ಕೊರೋನಾ ಸೋಂಕಿಗೂ ನೀಡುವ ಚಿಕಿತ್ಸೆಯಿಂದ ಉದ್ಬವಿಸುವ ಸಮಸ್ಯೆಯಾಗಿದೆ.
ತುಂಬು ಗರ್ಭಿಣಿಯರಿಗೆ ರೆಮ್‌ರೆಸಿವಿರ್ ಸ್ಟಿರಾಯ್ಡ್ ಔಷಧ ನೀಡಲು ಸಾಧ್ಯವಾಗದ ಹಿನ್ನೆಲೆ ಆದಷ್ಟು ಶೀಘ್ರ ಪ್ರಸವ ಮಾಡುವ ನಾಇವಾರ್ಯತೆ ನಿರ್ಮಾಣವಾಗುತ್ತಿದೆ. ಹಿಗಾಗಿ ಗರ್ಭಿಣಿಯರು ಕೋವಿಡ್ ಸೋಂಕು ತಮ್ಮನ್ನು ತಟ್ಟದಂತೆ ಗರಿಷ್ಠ ಮುನ್ನೆಚ್ಚರಿಕೆ ವಹಿಸುವುದು ತಾಯಿ-ಮಗುವಿನ ದೃಷ್ಟಿಯಿಂದ ಅತ್ಯಂತ ಸೂಕ್ತ.