ಕೋವಿಡ್ ರಿಪೋರ್ಟ್ ಇಲ್ಲ, ಆಸ್ಪತ್ರೆ-ಆಸ್ಪತ್ರೆ ಅಡ್ಡಾಡಿ ಪ್ರಾಣ ಬಿಟ್ಟ ಗೌರಿಬಿದನೂರು ಗರ್ಭಿಣಿ

* ಆಸ್ಪತ್ರೆಗಳಿಗೆ ಸುತ್ತಾಡಿ, ಸುತ್ತಾಡಿ ಪ್ರಾಣ ಬಿಟ್ಟ ಗರ್ಭಿಣಿ
* ಗೌರಿಬಿದನೂರು ತಾಲೂಕು ಹುಲಿಕುಂಟೆ ಗ್ರಾಮದ ರಮ್ಯ (24) ಮೃತ ಗರ್ಭಿಣಿ.
* ಕಳೆದ 2 ದಿನಗಳಿಂದ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಬಂದ್ರು ಸಿಗಲಿಲ್ಲ ಅಡ್ಮಿಷನ್
* ಬಳಿಕ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಹೋದ್ರು ಕೋವಿಡ್ ನೆಗಟಿವ್ ರಿಪೋರ್ಟ್ ಇಲ್ಲ ಅಂತಾ ವಾಪಸ್

Pregnant women dies without covid report Bengaluru mah

ಬೆಂಗಳೂರು(ಜೂ.02)  ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ  ಅಲೆದಾಡಿ ಕೊನೆಗೆ ಗರ್ಭಿಣಿ ಪ್ರಾಣ ಬಿಟ್ಟಿದ್ದಾಳೆ. ಗೌರಿಬಿದನೂರು ತಾಲೂಕು ಹುಲಿಕುಂಟೆ ಗ್ರಾಮದ ರಮ್ಯಾ (24) ಮೃತರಾಗಿದ್ದಾರೆ.

ಕಳೆದ 2 ದಿನಗಳ ಹಿಂದೆ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಬಂದ್ರು  ಆಡ್ಮಿಟ್ ಮಾಡಿಕೊಳ್ಳಲಿಲ್ಲ.  ಬಳಿಕ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಕರೆದುಕೊಂಡು  ಕೊರೋನಾ ನೆಗಟಿವ್ ರಿಪೋರ್ಟ್ ಇಲ್ಲ ಅಂತಾ ವಾಪಸ್ ಕಳಿಸಿದ್ದಾರೆ.

ಆಸ್ಪತ್ರೆ ಬಾಗಿಲಿನಲ್ಲೇ ಹೆರಿಗೆ, ಕೊರೋನಾ ಕಣ್ಣೀರ ಕತೆ

 ಅಲ್ಲಿಂದ ಗೌರಿಬಿದನೂರಿಗೆ ಬಂದು‌ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಗೌರಿಬಿದನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಮ್ಯಾ ಅವರನ್ನು ಸಿರಿಯಸ್ ಅಂತಾ ವಾಣಿವಿಲಾಸ್ ಆಸ್ಪತ್ರೆಗೆ ಲರೆದುಕೊಂಡು ಬರಲಾಗಿದೆ.  ವಾಣಿ‌ವಿಲಾಸ್ ಆಸ್ಪತ್ರೆಗೆ ಹೋಗಿ ದಾಖಲಾಗುತ್ತಿದ್ದಂತೆ ತುಂಬು ಗರ್ಭಿಣಿ ಸಾವುಕಂಡಿದ್ದಾರೆ. ಸರಿಯಾದ ಚಿಕಿತ್ಸೆ ಸಿಕ್ಕಿದ್ದಿದ್ರೆ ನನ್ನ ಪತ್ನಿ ಬದುಕುಳಿಯಬಹುದಿತ್ತು ಎಂದು ಪತಿ ವಿಜಯ್ ನೋವಿನಿಂದ ಆಕ್ರೋಶ ತೋಡಿಕೊಂಡಿದ್ದಾರೆ.

 

Latest Videos
Follow Us:
Download App:
  • android
  • ios