Asianet Suvarna News Asianet Suvarna News

ಮುಂಬೈಯಿಂದ ಬಂದ ಗರ್ಭಿಣಿಗೆ ಕೊರೋನಾ ಸೋಂಕು

ಜಿಲ್ಲೆಯಲ್ಲಿ ಸೋಮವಾರ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 11ಕ್ಕೇರಿದೆ

Pregnant lady from mumbai found corona positive
Author
Bangalore, First Published May 19, 2020, 8:33 AM IST

ಉಡುಪಿ(ಮೇ 19): ಜಿಲ್ಲೆಯಲ್ಲಿ ಸೋಮವಾರ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 11ಕ್ಕೇರಿದೆ.

28 ವರ್ಷ ವಯಸ್ಸಿನ ಈ ಮಹಿಳೆ 7 ತಿಂಗಳ ಗರ್ಭಿಣಿಯಾಗಿದ್ದು, ಮೇ 12ರಂದು ಮುಂಬೈಯಿಂದ ಪತಿಯೊಂದಿಗೆ ಬಸ್‌ನಲ್ಲಿ ಕುಂದಾಪುರಕ್ಕೆ ಬಂದಿದ್ದರು. ತಕ್ಷಣ ಅವರಿಬ್ಬರನ್ನು ಕುಂದಾಪುರದಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು.

ದಿನ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟದ ದಿನ!

ಆಕೆ ಗರ್ಭಿಣಿಯಾಗಿದ್ದು, ಹೈರಿಸ್ಕ್ ವರ್ಗಕ್ಕೆ ಸೇರುವುದರಿಂದ ಆಕೆಯ ಗಂಟಲದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ಆಕೆಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ. ತಕ್ಷಣ ಆಕೆಯ ಪತಿಯ ಗಂಟಲದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ಪತಿ ಪತ್ನಿ ಇಬ್ಬರನ್ನೂ ಉಡುಪಿಯ ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಯ ಐಸೋಲೇಶನ್‌ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ಮಂಗಳೂರಿಗೆ 3 ನೇ ವಿಮಾನ: 20ರಂದು ಮಸ್ಕತ್‌ನಿಂದ ಕನ್ನಡಿಗರು ತವರಿಗೆ

ಅವರು ಮುಂಬೈಯಿಂದ ಬಂದ ಬಸ್‌ನಲ್ಲಿ ಒಟ್ಟು 25 ಮಂದಿ ಇದ್ದರು. ಅವರನ್ನೆಲ್ಲರೂ ಕ್ವಾರಂಟೈನ್‌ನಲ್ಲಿದ್ದು, ಅವರನ್ನು ಗುರುತಿಸಲಾಗಿದೆ. ಅವರ ಗಂಟಲ ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

3 ಗುಣಮುಖ, 1 ನಿಧನ

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 11 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಅವುಗಳಲ್ಲಿ 8 ಮಂದಿ ದುಬೈಯಿಂದ ಬಂದವರು, ಇಬ್ಬರು ಮುಂಬೈ ಮತ್ತು ಒಬ್ಬರು ಕೇರಳದಿಂದ ಬಂದವರಾಗಿದ್ದಾರೆ. ದುಬೈಯಿಂದ ಬಂದ 3 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಒಬ್ಬರು ಮುಂಬೈಯಿಂದ ಬಂದವರು ಮೃತಪಟ್ಟಿದ್ದಾರೆ. ಉಳಿದ 7 ಮಂದಿ ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

Follow Us:
Download App:
  • android
  • ios