ಮಂಗಳೂರಿಗೆ 3 ನೇ ವಿಮಾನ: 20ರಂದು ಮಸ್ಕತ್‌ನಿಂದ ಕನ್ನಡಿಗರು ತವರಿಗೆ
ವಂದೇ ಭಾರತ್ ಮಿಷನ್ ಕಾರ್ಯಾಚರಣೆಯಲ್ಲಿ ಇದುವರೆಗೆ ಮಂಗಳೂರಿಗೆ ದುಬೈನಿಂದ ಎರಡು ವಿಮಾನಗಳು ಅಗಮಿಸಿದ್ದು, ಅಲ್ಲಿರುವ ಕನ್ನಡಿಗರನ್ನು ಕರೆತರಲಾಗಿದೆ. ಇನ್ನು ಮೇ 20ರಂದು ಕಾರ್ಯಾಚರಣೆಯ ಮೂರನೇ ಏರ್‌ಇಂಡಿಯಾ ವಿಮಾನ ಮಸ್ಕತ್‌ನಿಂದ ಮಂಗಳೂರಿಗೆ ಆಗಮಿಸಲಿದೆ.
ಮಂಗಳೂರು(ಮೇ 19): ವಂದೇ ಭಾರತ್ ಮಿಷನ್ ಕಾರ್ಯಾಚರಣೆಯಲ್ಲಿ ಇದುವರೆಗೆ ಮಂಗಳೂರಿಗೆ ದುಬೈನಿಂದ ಎರಡು ವಿಮಾನಗಳು ಅಗಮಿಸಿದ್ದು, ಅಲ್ಲಿರುವ ಕನ್ನಡಿಗರನ್ನು ಕರೆತರಲಾಗಿದೆ. ಇನ್ನು ಮೇ 20ರಂದು ಕಾರ್ಯಾಚರಣೆಯ ಮೂರನೇ ಏರ್‌ಇಂಡಿಯಾ ವಿಮಾನ ಮಸ್ಕತ್‌ನಿಂದ ಮಂಗಳೂರಿಗೆ ಆಗಮಿಸಲಿದೆ. ಬಳಿಕ ಮೇ 22ರಂದು ದೋಹಾದಿಂದ ನಾಲ್ಕನೇ ವಿಮಾನ ಆಗಮಿಸುವ ಸಂಭವ ಇದೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
ಮಂಗಳೂರಿನ ಗಗನಸಖಿ
ಪ್ರಥಮ ಬಾರಿಗೆ ದುಬೈನಿಂದ ಮಂಗಳೂರಿಗೆ ಆಗಮಿಸಿದ ಏರ್‌ಇಂಡಿಯಾ ವಿಮಾನದ ಪೈಲಟ್ ಸಹಿತ ಯಾವುದೇ ಸಿಬ್ಬಂದಿ ಕನ್ನಡಿಗರಿರಲಿಲ್ಲ. ಈ ಬಾರಿಯ ಏರ್‌ಇಂಡಿಯಾ ವಿಮಾನದಲ್ಲಿ ನಾಲ್ಕು ಮಂದಿ ಗಗನ ಸಖಿಯರ ಪೈಕಿ ಒಬ್ಬಾಕೆ ಮಂಗಳೂರಿನವರು.
ಮಂಗಳೂರಿನ ದೀಪಾ ಎಂಬಾಕೆ ತನ್ನ ಹುಟ್ಟೂರಿನ ಅನಿವಾಸಿ ಕನ್ನಡಿಗರನ್ನು ಕರೆತರುವುದಕ್ಕೆ ಸಾಕ್ಷಿಯಾಗಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯ ಕ್ಯಾಪ್ಟನ್ ರಾರಯಂಗಲ್ ಲೋಬೋ ಮತ್ತು ಸಹ ಪೈಲಟ್ ಅಭಿಷೇಕ್ ರೇ ಹಾಗೂ ನಾಲ್ಕು ಮಂದಿ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಈ ಬಾರಿಯೂ ಸಾರ್ವಜನಿಕರಿಗೆ ನಿರ್ಬಂಧ
ವಿದೇಶದಿಂದ ಸಂಬಂಧಿಕರು, ಕುಟುಂಬಸ್ಥರು ಬರುತ್ತಿದ್ದರೂ ಅವರನ್ನು ಕರೆತರಲು ಈ ಬಾರಿಯೂ ಸಾರ್ವಜನಿಕರಿಗೆ ಅವಕಾಶ ಇಲ್ಲ. ಪ್ರಯಾಣಿಕರೆಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಬೇಕಾಗುವುದರಿಂದ ಸಾರ್ವಜನಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು. ಅಲ್ಲದೆ ಜನಪ್ರತಿನಿಧಿಗಳು ಕೂಡ ವಿಮಾನ ನಿಲ್ದಾಣಕ್ಕೆ ಆಗಮಿಸದೆ ಜಿಲ್ಲಾಡಳಿತದ ನಿಯಮವನ್ನು ಪಾಲಿಸಿದರು.
ದುಬೈ-ಮಂಗಳೂರು 2ನೇ ವಿಮಾನ, 35 ಮಂದಿ ಗರ್ಭಿಣಿಯರು ಸೇರಿ 178 ಜನ ಆಗಮನ
ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ, ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್ ಇದ್ದರು.