ಹಾವೇರಿ(ಏ.19): ಇಲ್ಲಿಯ ಜಿಲ್ಲಾಸ್ಪತ್ರೆಗೆ ತಪಾಸಣೆಗೆಂದು ಬಂದಿದ್ದ ತುಂಬು ಗರ್ಭಿಣಿಯೊಬ್ಬರು ಊರಿಗೆ ಹೋಗಲು ವಾಹನ ಸಿಗದೇ ಬಿಸಿಲಲ್ಲಿ ಪರದಾಡಿದ ಘಟನೆ ಶನಿವಾರ ನಡೆದಿದೆ.

ತಾಲೂಕಿನ ಹಾಲಗಿ ಗ್ರಾಮದ ಗರ್ಭಿಣಿ ಸಂಗೀತಾ ಬುಳ್ಳಮ್ಮನವರ ಎಂಬಾಕೆಯನ್ನು ಶುಕ್ರವಾರ ರಾತ್ರಿ ಆಕೆಯ ಪಾಲಕರು ಜಿಲ್ಲಾಸ್ಪತ್ರೆಗೆ ತಪಾಸಣೆಗೆಂದು ಕರೆತಂದಿದ್ದರು. ವೈದ್ಯರ ಸಲಹೆ ಮೇರೆಗೆ ರಾತ್ರಿ ಜಿಲ್ಲಾಸ್ಪತ್ರೆಯಲ್ಲೇ ಉಳಿದಿದ್ದರು. 

'ATM ಮುಂದೆ ಮುಗಿಬೀಳಬೇಡಿ: ಜನಧನ್‌ ಖಾತೆ ಹಣ ಹಿಂಪಡೆಯಲು ಕಾಲಮಿತಿಯಿಲ್ಲ'

ಹೆರಿಗೆಗೆ ಇನ್ನೂ ಕೆಲವು ದಿನಗಳಾಗಬಹುದು. ಹೆರಿಗೆ ನೋವು ಕಾಣಿಸಿಕೊಂಡ ಮೇಲೆ ಬನ್ನಿ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ತಮ್ಮೂರಿಗೆ ಹೋಗಲು ವಾಹನಕ್ಕಾಗಿ ಗಂಟೆಗಟ್ಟಲೆ ಬಿಸಿಲಲ್ಲೇ ನಿಂತು ಕಾದಿದ್ದಾರೆ. ಆದರೆ, ಯಾವ ವಾಹನವೂ ಇಲ್ಲದ್ದರಿಂದ ಸುಸ್ತಾಗಿದ್ದಾರೆ. ಇದನ್ನು ಗಮನಿಸಿದ ಮಾಧ್ಯಮದವರು ನಗುಮಗು ವಾಹನಕ್ಕೆ ಕರೆ ಮಾಡಿದ್ದಾರೆ. ಅದು ಬೇರೆ ಕಡೆ ಹೋಗಿದ್ದರಿಂದ ಬೇರೊಂದು ವಾಹನದ ವ್ಯವಸ್ಥೆ ಮಾಡಿ ಗರ್ಭಿಣಿ ಮತ್ತು ಆಕೆಯ ಪೋಷಕರನ್ನು ಕಳಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.