ಹಾವೇರಿ(ಏ.10): ಜನಧನ್‌ ಖಾತೆಗಳಿಗೆ ಜಮೆಯಾಗುತ್ತಿರುವ ಹಣವನ್ನು ಫಲಾನುಭವಿಗಳು ಹಿಂದಕ್ಕೆ ಪಡೆಯಲು ಕಾಲಮಿತಿ ನಿಗದಿ ಮಾಡಲಾಗಿಲ್ಲ. ಅವಶ್ಯಕತೆ ಇದ್ದಾಗ ಮಾತ್ರ ಗ್ರಾಹಕರು ಬ್ಯಾಂಕಿಗೆ ಭೇಟಿ ನೀಡಿ ಹಣ ಪಡೆಯಬಹುದು ಎಂದು ಜಿಲ್ಲಾ ಅಗ್ರಣೀಯ ಬ್ಯಾಂಕ್‌ ವ್ಯವಸ್ಥಾಪಕ ಪ್ರಭುದೇವ ತಿಳಿಸಿದ್ದಾರೆ. 

ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ಬ್ಯಾಂಕ್‌ಗಳ 269ಕ್ಕೂ ಅಧಿಕ ಗ್ರಾಹಕ ಸೇವಾ ಕೇಂದ್ರಗಳ ವ್ಯವಹಾರಗಳ ಪ್ರತಿನಿಧಿಗಳು(ಬಿಸಿ)ಗಳು ಕಾರ್ಯನಿರ್ವಹಿಸುತ್ತಿದ್ದಾರೆ. 

ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನಧನ್‌ ಖಾತೆ ಹಣ ತೆಗೆಯಲು ನೂಕುನುಗ್ಗಲು!

ಗ್ರಾಹಕರು ತಮ್ಮ ನಗದು ವ್ಯವಹಾರಗಳನ್ನು ಮನೆ ಹತ್ತಿರ ಅಥವಾ ಗ್ರಾಮ ಮಿತಿಯಲ್ಲಿರುವ ಸೇವಾ ಕೇಂದ್ರಗಳ ವ್ಯವಹಾರ ಪ್ರತಿನಿಧಿಗಳ (ಬಿಸಿಗಳ) ಮೂಲಕ ಮಾಡಿಕೊಳ್ಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ಮನೆಯಿಂದ ಬ್ಯಾಂಕ್‌ಗಳಿಗೆ ಬರದೆ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.