Asianet Suvarna News Asianet Suvarna News

‘ಹಾಸನ ಆಕಸ್ಮಿಕ ಗೆಲುವಿನ ಹೇಳಿಕೆಗೆ ಕೆ.ಆರ್ ಪೇಟೆ ಗೆಲುವು ಉತ್ತರವಾಯ್ತು’

ರಾಜ್ಯದಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 15 ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಆದರೆ ಜೆಡಿಎಸ್ ಒಂದು ಸ್ಥಾನ ಪಡೆಯಲೂ ವಿಫಲವಾಗಿದೆ.

Preetham Gowda Taunt Devegowda Family On Karnataka By Poll Result
Author
Bengaluru, First Published Dec 9, 2019, 3:31 PM IST

ಹಾಸನ [ಡಿ.09]: ರಾಜ್ಯದಲ್ಲಿ ನಡೆದ ಉಪ ಚುನಾವಣಾ ಫಲಿತಾಂಶ ಪ್ರಕಟವಾಗಿದೆ.  15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಇನ್ನೆರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದ್ದರೆ ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ. ಜೆಡಿಎಸ್ ಶೂನ್ಯ ಫಲಿತಾಂಶ ದಾಖಲಿಸಿದೆ. 

ರಾಜ್ಯದ ಉಪ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಜೆಡಿಎಸ್ ಸೋಲಿನ ಹಿನ್ನೆಲೆ ಗೌಡರ ಕುಟುಂಬಕ್ಕೆ ಟಾಂಟ್ ನೀಡಿದ್ದಾರೆ. 

ನಾವು ನಾವು ಎಂದು ಮೆರೆದವರು ಮಣ್ಣಾಗಿ ಹೋಗಿದ್ದಾರೆ. ಹಳೇ ಮೈಸೂರಿನ ಕೆಲವು ಕ್ಷೇತ್ರಗಳು ಒಂದು ಕುಟುಂಬಕ್ಕೆ ಸೀಮಿತ ಅಲ್ಲ ಎನ್ನುವುದು ಮತ್ತೊಮ್ಮೆ ಪ್ರೂವ್ ಆಗಿದೆ ಎಂದರು. 

ನಾನು ಹಾಸನದಲ್ಲಿ ಗೆದ್ದಾಗ ಆಕಸ್ಮಿಕ ಶಾಸಕ ಎಂದು ಕರೆದಿದ್ದರು. ಈಗ ಕೆ.ಆರ್. ಪೇಟೆ ಕ್ಷೇತ್ರದ ಗೆಲುವು ಇದಕ್ಕೆ ಉತ್ತರವಾಗಿದೆ ಎಂದು ಪ್ರೀತಂ ಗೌಡ ಹೇಳಿದರು. 

ಚುನಾವಣೆಯ ಕ್ಷಣ ಕ್ಷಣದ ಅಪ್‌ಡೇಟ್‌ಗಳಿಗೆ ಇಲ್ಲಿ ಕ್ಲಿಕ್ಕಿಸಿ

ಇನ್ನು ಚುನಾವಣೆಯಲ್ಲಿ ಹಣಬಲದಿಂದ ನಾವು ಗೆಲುವು ಸಾಧಿಸಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಜನ ನಮ್ಮನ್ನು ಬೆಂಬಲಿಸಿದ್ದಾರೆ. ಇದರಿಂದ ಕೆ.ಆರ್.ಪೇಟೆಯಲ್ಲಿ ನಾರಾಯಣ ಗೌಡರಿಗೆ ಗೆಲುವಾಗಿ. ಜೆಡಿಎಸ್ ಭದ್ರಕೋಟೆ ಈಗ ಚಿದ್ರವಾಗಿದೆ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿದರು. 

'ಲಕ್ಷ್ಮಿ ಹೆಬ್ಬಾಳ್ಕರ್ ವಿಷಕನ್ಯೆ, ಅವಳಿಂದ ಕಾಂಗ್ರೆಸ್ ಪಕ್ಷ ಹಾಳಾಗಿದೆ'...

ಇದೇ ಡಿಸೆಂಬರ್ 5 ರಂದು ನಡೆದ ಉಪ ಚುನಾವಣೆಯ ಫಲಿತಾಂಶವು ಇಂದು ಪ್ರಕಟವಾಗಿದೆ. ಈ ಚುನಾವಣೆಯಲ್ಲಿ 12 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ.

Follow Us:
Download App:
  • android
  • ios