Asianet Suvarna News Asianet Suvarna News

ಸ್ಥಾನಮಾನಕ್ಕಾಗಿ ಕೋಟ ಹಾಗೂ ಸುನೀಲ್ ಸಮುದಾಯವನ್ನು ಬಲಿ ಕೊಟ್ಟಿದ್ದಾರೆ: ಪ್ರಣವಾನಂದ ಸ್ವಾಮೀಜಿ

ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನೀಲ್ ಕುಮಾರ್ ಅವರು ತಮ್ಮ ಸ್ಥಾನಮಾನ‌‌ ಉಳಿಸಲು ಸಮುದಾಯವನ್ನು ಬಲಿ ಕೊಟ್ಟಿದ್ದಾರೆ. ಈಡಿಗ, ಬಿಲ್ಲವ ಸಮಾಜಕ್ಕೆ ರಿಸರ್ವೇಶನ್ ಒದಗಿಸಲು ಧ್ವನಿ ಎತ್ತುವಲ್ಲಿ ಸಮುದಾಯದ ಸಚಿವರು ಹಾಗೂ ಇತರ ಶಾಸಕರು ವಿಫಲರಾಗಿದ್ದಾರೆ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ಅಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. 

Pranavananda Swamiji Outraged Against Ministers Kota Srinbivas Poojary and V Sunil Kumar gvd
Author
First Published Nov 28, 2022, 10:29 PM IST

ಉತ್ತರ ಕನ್ನಡ (ನ.28): ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನೀಲ್ ಕುಮಾರ್ ಅವರು ತಮ್ಮ ಸ್ಥಾನಮಾನ‌‌ ಉಳಿಸಲು ಸಮುದಾಯವನ್ನು ಬಲಿ ಕೊಟ್ಟಿದ್ದಾರೆ. ಈಡಿಗ, ಬಿಲ್ಲವ ಸಮಾಜಕ್ಕೆ ರಿಸರ್ವೇಶನ್ ಒದಗಿಸಲು ಧ್ವನಿ ಎತ್ತುವಲ್ಲಿ ಸಮುದಾಯದ ಸಚಿವರು ಹಾಗೂ ಇತರ ಶಾಸಕರು ವಿಫಲರಾಗಿದ್ದಾರೆ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ಅಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. 

ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಮಾತನಾಡಿದ ಶ್ರೀ ಪ್ರಣವಾನಂದ ಸ್ವಾಮೀಜಿ, ಬಿಜೆಪಿ ಸರಕಾರದ ಯಾವ ಕೊಡುಗೆ  ಕೂಡಾ ಈಡಿಗ, ಬಿಲ್ಲವ ಸಮುದಾಯದ ಮೇಲಿಲ್ಲ.‌ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹಲವೆಡೆ ನಾರಾಯಣ ಗುರು ವಸತಿ ಶಾಲೆ ಪ್ರಾರಂಭಿಸಿದ್ದೇವೆ ಅಂತಾರೆ. ಆದರೆ, ಈ ವಸತಿ ಶಾಲೆಗಳಲ್ಲಿ ಈಡಿಗ ಸಮುದಾಯ ಮಕ್ಕಳಿಗೂ ಶಿಕ್ಷಣಕ್ಕೆ ರಿಸರ್ವೇಶನ್ ಇಲ್ಲ. ರಾಜ್ಯದಲ್ಲಿರುವ ಈಡಿಗ, ಬಿಲ್ಲವ ಸಮುದಾಯದ ಶಾಸಕರಿಂದ ಯಾವುದೇ ನ್ಯಾಯ ಸಿಗುತ್ತದೆಂಬ ನಂಬಿಕೆಯಿಲ್ಲ. ಈ ಸಮುದಾಯದ ಯುವಕರು, ಮಹಿಳೆಯರು ಬೀದಿಗೆ ಬರುತ್ತಿದ್ದಾರೆ. 

Uttara Kannada: ಮಿನಿ ಬಿಹಾರವಾಗಿದೆ ಶಿರವಾಡದ ರೆಸಾರ್ಟ್: ಸ್ಥಳೀಯರಿಗೆ ಆತಂಕ

ನಮ್ಮ ಸಮುದಾಯದ ರಾಜಕಾರಣಿಗಳಿಂದಲೇ ನಮಗೆ ಅನ್ಯಾಯವಾಗಿದೆ. ನಾರಾಯಣ ಗುರು ನಿಗಮವನ್ನು ಘೋಷಣೆ ಮಾಡುವುದರಲ್ಲಿ ಸಮುದಾಯದ ಶಾಸಕರ ನಿಲುವೇನು ?‌ ಅವರ ಸ್ವಾರ್ಥ ರಾಜಕಾರಣಕ್ಕಾಗಿ ಸಮುದಾಯವನ್ನು ಬಳಸುತ್ತಿದ್ದಾರೆ. ಗೌಡ ಸಮುದಾಯದ ರಾಜಕಾರಣಿಗಳು ಸರಕಾರಕ್ಕೆ ಸೌಲಭ್ಯಕ್ಕಾಗಿ ಒತ್ತಾಯಿಸಿದ್ದಾರೆ.‌ ಆದರೆ, ಈಡಿಗ, ಬಿಲ್ಲವ ಸಮುದಾಯದ ನಾಯಕರಿಗೆ ನಾಚಿಗೆಯಾಗಬೇಕು. ಸುನೀಲ್ ಕುಮಾರ್ ಅವರಂತೂ ಒಮ್ಮೆಯೂ ವಿಧಾನಸಭೆಯಲ್ಲಿ ಸಮುದಾಯದ ಪರ ಧ್ವನಿ ಎತ್ತಿಲ್ಲ. 2023ರಲ್ಲಿ ನಡೆಯುವ ಚುನಾವಣೆ ವೇಳೆ ಸಮುದಾಯದ ಮತ‌‌ ನಿಮಗೆ ಬೇಡವೆಂದಲ್ಲಿ ಹೇಳಿಬಿಡಿ. 

ಕಾರವಾರದಲ್ಲಿ ವಿಶೇಷ ಈ ದಿಂಡಿ ಜಾತ್ರೆ: ಗಮನ ಸೆಳೆದ ದೈವ ನರ್ತಕ, ಪಂಜುರ್ಲಿ

ಈ ಕಾರಣಗಳಿಂದಲೇ ಮುಂದಿನ ಜ.6ರಂದು ಮಂಗಳೂರು-ಬೆಂಗಳೂರು ಪಾದಯಾತ್ರೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಈಡಿಗ, ಬಿಲ್ಲವ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ನಮ್ಮ ಒತ್ತಾಯವಿದೆ.‌ ಮೀಸಲಾತಿ, ಕುಲಕಸುಬು, ನಿಗಮ ನಡೆಸುವಲ್ಲಿ ಸಮುದಾಯಕ್ಕೆ ವಂಚನೆಯಾಗಿದೆ. ರಾಜ್ಯ ಸರಕಾರ ಹಿಂದುಳಿದ ವರ್ಗದಲ್ಲಿರುವ ಈಡಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಬೇಕು.‌ ಇಲ್ಲವಾದಲ್ಲಿ ಮುಂದಿನ‌ ಚುನಾವಣೆ ವೇಳೆ‌ ಪರಿಣಾಮ ಎದುರಿಸಬೇಕಾದೀತು ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದ್ದಾರೆ.

Follow Us:
Download App:
  • android
  • ios