ರಾಜ್ಯದಲ್ಲಿ ಸುಮಾರು 70 ಲಕ್ಷದಷ್ಟು ಇರುವ ಈ ಸಮುದಾಯವನ್ನು ಕಡೆಗಣಿಸಿದರೆ ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಶಾಸ್ತಿ ನಿಶ್ಚಿತ ಎಂದ ಪ್ರಣವಾನಂದ ಶ್ರೀಗಳು 

ಕಲಬುರಗಿ(ಆ.18): ಈಡಿಗ ಸಮುದಾಯದ ಸೇರಿದಂತೆ ಅತೀ ಹಿಂದುಳಿದವರನ್ನು ರಾಜಕೀಯವಾಗಿ ಕಡೆಗಣಿಸಲಾಗುತ್ತಿದೆ. ಇದೇ ಕ್ರಮ ಮುಂದುವರಿಸಿದರೆ ಪ್ರಮುಖ ರಾಜಕೀಯ ಪಕ್ಷಗಳಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡುತ್ತೇವೆಂದು ಸಮಾಜದ ಪ್ರಣವಾನಂದ ಶ್ರೀಗಳು ಗುಡುಗಿದರು.

ಕಲಬುರಗಿಯಲ್ಲಿ ಈಡಿಗ ಮಹಾಮಂಡಲ ಮತ್ತು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ನೇತೃತ್ವದಲ್ಲಿ ನಡೆದ ಜಿಲ್ಲಾ ಚಿಂತನ ಶಿಬಿರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 70 ಲಕ್ಷದಷ್ಟು ಇರುವ ಈ ಸಮುದಾಯವನ್ನು ಕಡೆಗಣಿಸಿದರೆ ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಶಾಸ್ತಿ ನಿಶ್ಚಿತ ಎಂದರು.

ನಿರ್ಲಕ್ಷಿಸಿದರೆ ಮತ್ತೆ ಲೆಟರ್‌: ಕಾಂಗ್ರೆಸ್‌ ಶಾಸಕ ಬಿ.ಆರ್‌.ಪಾಟೀಲ್‌

ರಾಜ್ಯದಲ್ಲಿ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ನಿಗಮ ಘೋಷಣೆಯಾದರೂ ಹಣ ಬಿಡುಗಡೆ ಮಾಡಲಿಲ್ಲ. ಸಮುದಾಯದ ಎರಡು ಸಚಿವ ಸ್ಥಾನಗಳನ್ನು ನೀಡದೆ ಕೇವಲ ಒಂದನ್ನು ಮಾತ್ರ ಕೊಡಲಾಗಿದ್ದು ಸಮುದಾಯದ ಹಿರಿಯ ನಾಯಕರನ್ನು ಕಡೆಗಣಿಸುವ ಕುತಂತ್ರ ನಡೆಯುತ್ತಿದೆ. ಇದಕ್ಕಾಗಿ ಅತಿ ಹಿಂದುಳಿದ (ಎಂಸಿಬಿ- ಮೋಸ್ವ್‌ ಬ್ಯಾಕ್ವರ್ಡ್‌ ಕಮ್ಯುನಿಟಿ) ಒಕ್ಕೂಟ ರಚನೆ ಮಾಡಿ ರಾಜಕೀಯ ಶಕ್ತಿ ಪಡೆದು ಅತಿ ಹಿಂದುಳಿದವರ ಅಭಿವೃದ್ಧಿಗಾಗಿ ಕಂಕಣ ಬದ್ಧವಾಗಲು ಸೆ.9ರಂದು ಬೆಂಗಳೂರಿನ ಅರಮನೆ ಮೈದಾನದ ಪೆಟಲ್‌ ಗೇಟ್‌ನಲ್ಲಿ ವಿಶೇಷ ಚಿಂತನ ಸಭೆ ನಡೆಯಲಿದೆ. ಇದರಲ್ಲಿ ಈಡಿಗ- ಬಿಲ್ಲವ ಸೇರಿದಂತೆ 26 ಪಂಗಡಗಳು ಇದರ ನೇತೃತ್ವ ವಹಿಸಲಿದೆ. ಎಲ್ಲ ಅತಿ ಹಿಂದುಳಿದ ಕಾಯಕ ಸಮಾಜದ ಸ್ವಾಮೀಜಿಗಳು ಒಗ್ಗಟ್ಟಿನಿಂದ ಪಾಲ್ಗೊಳ್ಳಲಿದ್ದಾರೆ ಎಂದರು.

ಕೇಂದ್ರ ಸಚಿವರಾದ ಶ್ರೀಪಾದ ಯಸ್ಸೋ ನಾಯಕ್‌, ತೆಲಂಗಣಾದ ಶ್ರೀನಿವಾಸ ಗೌಡ, ಕೇರಳದ ಶಶಿಂದ್ರನ್‌ ಹಾಗೂ ಚೆನ್ನೈ, ಗೋವಾ ಮುಂತಾದ ರಾಜ್ಯದ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶವನ್ನು ಆಂಧ್ರಪ್ರದೇಶದ ವಸತಿ ಖಾತೆಯ ಸಚಿವರಾದ ಈಡಿಗ ಸಮುದಾಯದ ಜೋಗಿ ರಮೇಶ್‌ ಉದ್ಘಾಟಿಸಲಿದ್ದಾರೆ. ಗುಜರಾತ…, ರಾಜಸ್ಥಾನ್‌ ಮುಂತಾದಡಗಳಿಂದ ಸಮುದಾಯದ ನಾಯಕರು, ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಹಿರಿಯ ನಟನಾಗಿ ಉಪೇಂದ್ರ ಹೇಳಿದ್ದು ತಪ್ಪು: ಆಕ್ರೋಶ ಹೊರಹಾಕಿದ ಸಚಿವ ಪ್ರಿಯಾಂಕ್‌ ಖರ್ಗೆ

ಕಾಂಗ್ರೆ​ಸ್‌ನ ಕೇಂದ್ರ ನಾಯಕರಾದ ಬಿ.ಕೆ.ಹರಿಪ್ರಸಾದ್‌ ಅವರನ್ನು ಮೂಲೆಗುಂಪು ಮಾಡಲು ನಡೆಯುತ್ತಿರುವ ಹುನ್ನಾರದ ವಿರುದ್ಧ ಸಮಾಜ ಧ್ವನಿ ಎತ್ತಿದೆ. ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿ ಎಸ್‌.ಆರ್‌ ಜಾಲಪ್ಪ, ಜನಾರ್ಧನ ಪೂಜಾರಿ ಮುಂತಾದ ನಾಯಕರನ್ನು ಮೂಲೆಗುಂಪು ಮಾಡಲಾಗಿದೆ. ಯಾವುದೇ ಪಕ್ಷದ ನಮ್ಮ ಸಮುದಾಯದ ನಾಯಕರಿಗೆ ಇನ್ನು ಮುಂದೆ ಅನ್ಯಾಯವಾದರೆ ರಾಜ್ಯಾದ್ಯಂತ ಒಕ್ಕೊರಲಿನಿಂದ ಧ್ವನಿ ಎತ್ತಿ ಪ್ರತಿಭಟಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟ​ಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್‌ ಗುತ್ತೇದಾರ್‌, ಮಹಾದೇವ ಗುತ್ತೇದಾರ್‌. ಈಡಿಗ ಮಹಾಮಂಡಲದ ಕಲಬುರಗಿ ಜಿಲ್ಲಾಧ್ಯಕ್ಷರಾದ ಸುರೇಶ್‌ ಗುತ್ತೇದಾರ್‌, ಅಂಬಿಕಾ ಮಾಧವಾರ್‌, ವೆಂಕಟೇಶ ಕಡೇಚೂರ್‌ ಇದ್ದರು.

ಚಿಂಚೋಳಿ ಸೇಡಂ ಚಿತ್ತಾಪುರ ಅಳಂದ ಜೇವರ್ಗಿ ಕಲಬುರ್ಗಿ ಅಫ್ಜಲ್ಪುರ ತಾಲೂಕುಗಳ ಅಧ್ಯಕ್ಷರುಗಳು ಚಿಂತನ ಸಭೆಯಲ್ಲಿ ಸಲಹೆ ಸೂಚನೆ ನೀಡಿದರು. ಸಮುದಾಯದ ಡಾ. ಸದಾನಂದ ಪೆಲರ್‌, ಕಾಶಿನಾಥ್‌ ಗುತ್ತೇದಾರ್‌ ನಿರೂಪಿಸಿದರು. ನೂತನ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರು ಮತ್ತು ಸದಸ್ಯರಾಗಿ ನೂ​ತ​ನ​ವಾಗಿ ನೇಮಕ ಹೊಂದಿದವರಿಗೆ ಗೌರವಿಸಲಾಯಿತು.