ಹಿರಿಯ ನಟನಾಗಿ ಉಪೇಂದ್ರ ಹೇಳಿದ್ದು ತಪ್ಪು: ಆಕ್ರೋಶ ಹೊರಹಾಕಿದ ಸಚಿವ ಪ್ರಿಯಾಂಕ್ ಖರ್ಗೆ
ಚಿತ್ರನಟ ಉಪೇಂದ್ರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದರು. ಓರ್ವ ಹಿರಿಯ ನಟನಾಗಿ ಉಪೇಂದ್ರ ಈ ರೀತಿ ಮಾತಾಡಿರುವುದು ತಪ್ಪು. ಎಲ್ಲ ಜಾತಿ ಜನಾಂಗದಲ್ಲಿ ಉಪೇಂದ್ರ ಅಭಿಮಾನಿಗಳಿದ್ದಾರೆ.
ಕಲಬುರಗಿ (ಆ.15): ಚಿತ್ರನಟ ಉಪೇಂದ್ರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದರು. ಓರ್ವ ಹಿರಿಯ ನಟನಾಗಿ ಉಪೇಂದ್ರ ಈ ರೀತಿ ಮಾತಾಡಿರುವುದು ತಪ್ಪು. ಎಲ್ಲ ಜಾತಿ ಜನಾಂಗದಲ್ಲಿ ಉಪೇಂದ್ರ ಅಭಿಮಾನಿಗಳಿದ್ದಾರೆ. ಅವರು ಕ್ಷಮೆ ಕೇಳಿದ್ದಾರೆ ನಿಜ. ಆದರೆ, ಯಾರು ಕ್ಷಮಿಸಬೇಕು ಅವರು ಕ್ಷಮಿಸುತ್ತಾರೆ. ಎಲ್ಲರಲ್ಲೂ ಕ್ಷಮಿಸುವಂತಹ ದೊಡ್ಡ ಗುಣ ಇರುವುದಿಲ್ಲ ಎಂದು ನಟ ಉಪೇಂದ್ರ ಹೇಳಿಕೆಯನ್ನು ಖರ್ಗೆ ಖಂಡಿಸಿದರು.
ಇನ್ನಾರು ತಿಂಗಳಲ್ಲಿ ಬಿಜೆಪಿನೇ ಉಳಿಯಲ್ಲ: ಇನ್ನಾರು ತಿಂಗಳಲ್ಲಿ ಭಾರತೀಯ ಜನತಾ ಪಕ್ಷವೇ ಉಳಿಯೋಲ್ಲ, ನಾನ್ ಗಾರಂಟಿ ಕೊಡ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಲಬುರಗಿಯ ಪ್ರವಾಸದಲ್ಲಿರುವ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನಾರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ, ಬಿಜೆಪಿಯದ್ದೇ ಸರ್ಕಾರ ಬರಲಿದೆ ಎಂಬ ಆ ಪಕ್ಷದ ಮುಖಂಡ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯಾತ್ನಾಳ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು.
ಸೇವಾ ಮನೋಭಾವದ ವೈದ್ಯರು ಸಂಖ್ಯೆ ಹೆಚ್ಚಾಗಲಿ: ಸಚಿವ ಪರಮೇಶ್ವರ್
ಬಿಜೆಪಿ 6 ತಿಂಗಳಲ್ಲಿ ಸರ್ಕಾರ ಮಾಡಲಿ ನೋಡೋಣ, ಬಹುಮತದ ಸರ್ಕಾರವಿದೆ, ಇಲ್ಲೇನ್ ರಾಷ್ಟ್ರಪತಿ ರೂಲ್ ತರ್ತಾರಾ? ಮಣಿಪುರದಂತೆ ಇಲ್ಲೇನು ಹೊತ್ತಿ ಉರಿಯುತ್ತಿದೆಯಾ? ಮೊದ್ಲು ನಿಮ್ಮ ಪಕ್ಷ ನೋಡಿಕೊಳ್ಳಿ, ಇದನ್ನು ಬಿಟ್ಟು ಬೇರೊಬ್ಬರ ಮನೆಯಲ್ಲೇ ಇಣುಕೋ ನಿಮ್ಮ ಹವ್ಯಾಸ ಬಿಟ್ಟುಬಿಡಿ. ನಿಮ್ಮ ಯೋಗತ್ಯೆಯೇ ಇಷ್ಟೆಎಂದು ತಿವಿದರು.
ನಕಲಿ ಪತ್ರಗಳನ್ನು ಹುಟ್ಟು ಹಾಕೋದರಲ್ಲೇ ಕಾಲಹರಣ ಮಾಡುವ ಬಿಜೆಪಿಗೆ ವಿರೋಧ ಪಕ್ಷ ನಾಯಕನನ್ನ ನೇಮಕ ಮಾಡಲಾಗಿಲ್ಲ. ಇವರ ಯೋಗ್ಯತೆ ಏನೆಂದು ಜನ ಅರಿತಿದ್ದಾರೆ. ಅದಕ್ಕೇ ಅವರನ್ನು ತಿರಸ್ಕರಿಸಿ ನಮ್ಮನ್ನು ಬೆಂಬಲಿಸಿದ್ದಾರೆ. ನಮಗೂ ರಾಜಕೀಯ ಮಾಡುವುದಕ್ಕೆ ಬರುತ್ತದೆ. ಅವರೊಬ್ಬರಿಗೆ ಮಾತ್ರ ಬರುತ್ತದೆಯಾ? ನಮಗೆ ಬರುವುದಿಲ್ಲವೇ? ನಾವೂ 140 ವರ್ಷಗಳಿಂದ ಪಕ್ಷವನ್ನು ಕಟ್ಟಿಕೊಂಡು ಬರುತ್ತಿದ್ದೇವೆ ಎಂದರು.
ನಮ್ಮ ಸರ್ಕಾರದ್ದು ಬಿಡಿ, ಇನ್ನು ಆರು ತಿಂಗಳಲ್ಲಿ ಬಿಜೆಪಿಯಲ್ಲಿ ಎಷ್ಟು ಜನ ಉಳಿದುಕೊಳ್ಳುತ್ತಾರೆ ನೋಡಿ ಎಂದು ಮರು ಸವಾಲು ಹಾಕಿದರು. ಈ ವೇಳೆ ಎಷ್ಟು ಜನ ಬಿಜೆಪಿಯವರು ನಿಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನನಗೆ ಗೊತ್ತಿಲ್ಲ. ಬಿಜೆಪಿಯವರನ್ನು ಕೇಳಿ. ಎಷ್ಟುಜನ ಅಸಮಾಧಾನಿತರು ಇದ್ದಾರೆ ಎಂಬುದನ್ನು ಅವರನ್ನೇ ಕೇಳಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಈ ಬಾರಿಯೂ ಅದ್ಧೂರಿ ದಸರಾ ಉತ್ಸವ ಆಚರಣೆ: ಸಚಿವ ಮಹದೇವಪ್ಪ
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದೇನು?: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಆರೇಳು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿ, ನಮ್ಮ ಸರ್ಕಾರ ಬರುತ್ತದೆ ಎಂದಿದ್ದರು. ಆರೇಳು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತದೆ. ಅಲ್ಲಿಯವರೆಗೆ ನೀವೆಲ್ಲಾ ಸಮಾಧಾನದಿಂದ ಇರಬೇಕು. ಕಾಂಗ್ರೆಸ್ ಶಾಸಕರಿಗೇ ಕೊಡುವುದಕ್ಕೆ ರೊಕ್ಕ ಇಲ್ಲ, ಅನುದಾನ ಕೇಳಬೇಡಿ ಎನ್ನುತ್ತಿದ್ದಾರೆ. ಅವರ ಶಾಸಕರೇ ಅಳುತ್ತಿದ್ದಾರೆ. ಹೀಗಿರುವಾಗ ವಿರೋಧ ಪಕ್ಷದ ನಮಗೆ ಎಲ್ಲಿಂದ ಅನುದಾನ ಕೊಡ್ತಾರೆ? ಅದಕ್ಕೆ ನೀವು ಕೆಲ ದಿನಗಳ ಕಾಲ ರೆಸ್ಟ… ಮಾಡಿ ಎಂದು ತಮ್ಮ ಭಾಷಣದಲ್ಲಿ ಯತ್ನಾಳ್ ಹೇಳಿದ್ದರು.