Asianet Suvarna News Asianet Suvarna News

ಪಾಕ್  ಜತೆ ಟಿ-ಟ್ವೆಂಟಿ  ಪಂದ್ಯಕ್ಕೆ ಮುತಾಲಿಕ್ ವಿರೋಧ, ಸರ್ಕಾರಕ್ಕೆ ಧಿಕ್ಕಾರ!

* ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಶ್ರೀರಾಮಸೇನೆ ವಿರೋಧ
* ದೇಶದ ಸೈನಿಕರನ್ನು ಹತ್ಯೆ ಮಾಡುತ್ತಿರುವವರ ಜತೆ ಪಂದ್ಯ ಬೇಕೆ?
* ಯಾವ ಆಧಾರದಲ್ಲಿ ಸರ್ಕಾರ ಇದಕ್ಕೆಲ್ಲ ಅವಕಾಶ ನೀಡಿದೆ?

Pramod muthalik unhappy with T 20 world cup 2021 India VS Pakistan  match mah
Author
Bengaluru, First Published Oct 17, 2021, 9:31 PM IST
  • Facebook
  • Twitter
  • Whatsapp

ಗದಗ(ಅ. 17) ಟಿ-20 ವಿಶ್ವಕಪ್ ಗೆ ವೇದಿಕೆ ಸಿದ್ಧವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ವರ್ಷಗಳ ನಂತರ ಕ್ರಿಕೆಟ್ ಪಂದ್ಯ ನಡೆಯಲಿದ್ದು ಎರಡು ತಂಡಗಳು ಮುಖಾಮುಖಿಯಾಗಲಿವವೆ.

ಭಾರತ ಪಾಕಿಸ್ತಾನ ಟಿ20 ಕ್ರಿಕೆಟ್ ಪಂದ್ಯಕ್ಕೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಲ್ಲಿ ಸೈನಿಕರ, ನಾಗರಿಕರ ನಿರಂತರ ಹತ್ಯೆಯಾಗ್ತಿರುವುದು ಸರ್ಕಾರಕ್ಕೆ ಗೊತ್ತಿಲ್ವಾ? ನಮ್ಮ ಜೊತೆ ಆಟ ಆಡಿ ಕೋಟಿ ಹಣಗಳಿಸಿ ನಮ್ಮ ವಿರುದ್ಧ ಮದ್ದು ಗುಂಡು ಹಾರಿಸೋದು ಗೊತ್ತಾಗ್ತಿಲ್ವೆ? ಆಟವಾಡಲು ಅನುಮತಿ ಕೊಟ್ಟಿದ್ದೇ ತಪ್ಪು.. ಸರ್ಕಾರಕ್ಕೆ ಧಿಕ್ಕಾರವಿರಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಪಾಕಿಸ್ತಾನ ಜಗತ್ತಿಗೆ ಕಂಟಕವಾಗಿದೆ.. ತಾಲಿಬಾನ್ ಗೆ ಸಪೋರ್ಟ್ ಮಾಡುವ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡ್ತಿರಾ..? ರಾಕ್ಷಸರು ರಾಕ್ಷಸರೇ.. ಭಯೋತ್ಪಾದಕರು ಭಯೋತ್ಪಾದಕರೆ.. ಅವರಿಗೆ ಅಮೃತ ಕುಡಿಸಿದ್ರೂ ವಿಷವನ್ನೇ ಕೊಡ್ತಾರೆ..  ಅವರ ಜೊತೆ ಕ್ರಿಕೆಟ್ ಆಡೋದು ಸ್ವಾಭಿಮಾನದ ಶೂನ್ಯತೆ ತೋರುತ್ತೆ ಎಂದಿದ್ದಾರೆ.

ಕಪ್ ಗೆದ್ದು ಕೊಟ್ಟು ಸೈಡ್ ನಲ್ಲಿ ನಿಂತುಕೊಂಡ ಎಂಎಸ್ ಧೋನಿ!

ಕ್ರಿಕೆಟ್ ಆಟಗಾರರಿಗೆ ದೇಶದ ಸೈನಿಕರ ಬಗ್ಗೆ ಕರುಣೆ ಇದೆಯಾ..? ಭಯೋತ್ಪಾದನೆ ನಿಲ್ಲುವವರೆಗೂ ಆಟ ಆಡೋದಿಲ್ಲ ಅಂತಾ ಹೇಳ್ಬೇಕಿತ್ತು.. ಶ್ರೀರಾಮ ಸೇನೆ ಭಾರತ ಪಾಕ್ ಮ್ಯಾಚ್ ಆಡಿಸೋ ನಿರ್ಧಾರವನ್ನ ಖಂಡಿಸುತ್ತದೆ ಎಂದರು.

ಐಪಿಎಲ್ ಪಂದ್ಯಾವಳಿ ಅಂತ್ಯವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.  ಐಪಿಎಲ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಆಟಗಾರರಿಗೆ ಅವಕಾಶ ಇಲ್ಲ.  2019  ಏಕದಿನ ವಿಶ್ವಕಪ್ ನಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದು ಭಾರತ ಗೆದ್ದು ಬೀಗಿತ್ತು.  ಅಕ್ಟೋಬರ್ 24  ರಂದು ಪಂದ್ಯ ನಡೆಯಲಿದ್ದು ಭಾರತ- ಮತ್ತು ಪಾಕಿಸ್ತಾನ ಸೆಣೆಸಲಿವೆ. 

Follow Us:
Download App:
  • android
  • ios