ಹಿಂದೂ ಹುಡುಗಿಯರೇ ನಿಮಗೆ ಪ್ರಜ್ಞೆ ಇಲ್ಲವಾ? ಪ್ರಮೋದ್ ಮುತಾಲಿಕ್ ಕೆಂಡಾಮಂಡಲ
ಹಿಂದೂ ಹುಡುಗಿಯರೇ ಯಾಕೆ ನಿಮಗೆ ಪ್ರಜ್ಞೆ ಇಲ್ಲವಾ? ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹುಡುಗಿಯರನ್ನು ಬಳಸಿಕೊಂಡು ಅತ್ಯಾಚಾರ ಮಾಡುತ್ತಿದ್ದರೂ ಎಚ್ಚೆತ್ತುಕೊಳ್ಳುತ್ತಿಲ್ಲವಲ್ಲ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು (ಮೇ 04): ಹುಬ್ಬಳ್ಳಿಯಲ್ಲಿ ನೇಹಾ ಕೊಲೆಯ ನಂತರ ಮತ್ತೊಬ್ಬ ಮುಸ್ಲಿಂ ಯುವಕ ಹಿಂದೂ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹಿಂದೂ ಹುಡುಗಿಯರೇ ಯಾಕೆ ನಿಮಗೆ ಪ್ರಜ್ಞೆ ಇಲ್ಲವಾ? ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹುಡುಗಿಯರನ್ನು ಬಳಸಿಕೊಂಡು ಅತ್ಯಾಚಾರ ಮಾಡುತ್ತಿದ್ದರೂ ಎಚ್ಚೆತ್ತುಕೊಳ್ಳುತ್ತಿಲ್ಲವಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಹುಬ್ಬಳ್ಳಿ ಹಿಂದೂ ಅಪ್ತಾಪ್ತ ಯುವತಿ ಮೇಲೆ ಅನ್ಯಕೋಮಿನ ಯುವಕನಿಂದ ಅತ್ಯಾಚಾರ ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೇಹಾ ಹಿರೇಮಠ್ ಕೊಲೆ, ಲವ್ ಜಿಹಾದ್ ಚರ್ಚೆಯಲ್ಲಿ ಇರುವ ಸಂದರ್ಭದಲ್ಲೆ ಹುಬ್ಬಳ್ಳಿ ನವನಗರದಲ್ಲಿ ಇನ್ನೊಂದು ಘಟನೆ ಆಗಿದೆ. ಸದ್ದಾಂ ಹುಸೇನ್ ಎನ್ನುವ ಯುವಕ, ಹಿಂದೂ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದು, ಆಕೆ ಗರ್ಭಿಣಿ ಆಗಿದ್ದಾಳೆ. ಈ ಅನ್ಯಕೋಮಿನ ಅತ್ಯಾಚಾರಿಗಳಿಗೆ ಹಾಗೂ ಲವ್ ಜಿಹಾದ್ ಮಾಡುವ ಮುಸ್ಲಿಂ ಯುವಕರಿಗೆ ಭಯನೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್, ರೇಪ್ ಆರೋಪ
ಇಸ್ಲಾಮಿಕ್ ಗುರುಗಳಾಗಲಿ, ಜಮಾತ್ ಇಸ್ಲಾಂ ಆಗಲಿ ಯಾಕೆ ಇಂತಹ ಆರೋಪಿಗಳನ್ನು ಹಾಗೂ ಅಂಥವರ ಕುಟುಂಬಗಳಿಗೆ ಬಹಿಷ್ಕಾರ ಹಾಕಲ್ಲ. ಅಂಥವರ ವಿರುದ್ಧ ಯಾಕೆ ಪತ್ವ ಹೊರಡಿಸಲ್ಲ. ಇಂತಹ ಆರೋಪಿಗಳ ಕುಟುಂಬಗಳು ಹಾಗೂ ಮನೆಯ ನಿವಾಸಿಗಳಿಗೆ ಮಸೀದಿಗಳಿಗೆ ಪ್ರವೇಶ ಇಲ್ಲ ಅಂತಾ ಯಾಕೆ ಫತ್ವಾ ಹೊರಡಿಸಲ್ಲ. ಸುಮ್ಮನೆ ಸಮಾಜದ ಸ್ವಾಸ್ಥ್ಯ ಕಾಪಾಡುವುದಾಗಿ ಮುಸ್ಲಿಂ ಧರ್ಮದ ನಾಯಕರು ನಾಟಕ ಮಾಡ್ತಾ ಇದ್ದಾರೆ. ಹಿಂದೂ ವಿರೋಧಿಗಳನ್ನ ಬೆಳೆಸುವುದಕ್ಕಾಗಿ ಜಮಾತ್ ಇಸ್ಲಾಂ ಅವರು ನೇರವಾಗಿ ಹೊಣೆ ಆಗಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿಯ ಘಟನೆಯ ಬಗ್ಗೆ ನನಗೆ ಬಂದ ಮಾಹಿತಿ ಪ್ರಕಾರ ಅತ್ಯಾಚಾರ ಆರೋಪಿಯನ್ನು ಬಂಧಿಸಲು ತೆರಳಿದಾದ ಆತ ತಪ್ಪಿಸಿಕೊಳ್ಳಲು ಮುಂದಾಗಿದ್ದು, ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದಾರೆ. ಯಾಕೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದರು, ಗುಂಡು ಹೊಡೆಯಲು ಆರೋಪಿಯ ಎದೆ ಅಥವಾ ತಲೆ ಸಿಗಲಿಲ್ಲವಾ? ನೀವು ಎಲ್ಲರೂ ನಾಟಕ ಮಾಡ್ತಾ ಇದೀರಾ? ಪೊಲೀಸರು ಇಂತಹ ಆರೋಪಿಗಳ ಎದೆಗೆ ಗುಂಡು ಹೊಡೆಯಿರಿ ಕರ್ನಾಟಕ ಹೊಗಳುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಲವ್ ಜಿಹಾದ್ ಪ್ರಕರಣ ಜಾಸ್ತಿ ಆಗಲು ಕಾರಣವಾಗಿದೆ. ಸರ್ಕಾರದಿಂದ ಮುಸ್ಲಿಂರಿಗೆ ತುಷ್ಟೀಕರಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಹುಸಂಖ್ಯಾತ ಹಿಂದೂಗಳನ್ನು ಕಂಡರೆ ಅವರಿಗೆ ಯಾವುದೇ ಭಯ ಇಲ್ಲ. ವೋಟ್ ಬ್ಯಾಂಕ್ ಹಿಡಿದಿಟ್ಟುಕೊಳ್ಳುವುದಕ್ಕಾಗಿ ಸರ್ಕಾರದಿಂದಲೇ ಮುಸ್ಲಿಮರಿಗೆ ಪ್ರೇರಣೆ ಮಾಡಲಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆರೋಪಿಸಿದರು.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ, ಬರೋಬ್ಬರಿ 700 ಮಹಿಳೆಯರಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ
ಇನ್ನು ರಾಜ್ಯದಲ್ಲಿ ಪದೆ ಪದೇ ಹಿಂದೂ ಅನ್ಯಕೋಮಿನ ಯುವಕರು ಹಿಂದೂ ಯುವತಿಯರನ್ನು ಬುಟ್ಟಿಗೆ ಬೀಳಿಸಿಕೊಂಡು ಲವ್ ಜಿಹಾದ್‌ಗೆ ಒಳಪಡಿಸುತ್ತಿದ್ದಾರೆ. ಯಾಕೆ ಹಿಂದೂ ಹುಡುಗಿಯರೇ ನಿಮಗೆ ಪ್ರಜ್ಞೆ ಇಲ್ಲವಾ? ಮೇಲಿಂದ ಮೇಲೆ ಈ ರೀತಿಯ ಘಟನೆಗಳು ನಡೆಯುತ್ತಿದ್ದರೂ ನೀವು ಎಚ್ಚರಿಕೆ ವಹಿಸುತ್ತಿಲ್ಲ? ಇಂತಃ ಘಟನೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಅನ್ನೋ ಪ್ರಜ್ಞೆ ಇಲ್ಲವಾ? ಇನ್ನು ತಂದೆ ತಾಯಿಗಳು ಕೂಡ ಮಗಳು ಲವ್ ಜಿಹಾದ್ ಪಾಶಕ್ಕೆ ಬಿದ್ದು ಗರ್ಭಿಣಿ ಆದ ಮೇಲೆ ಎಚ್ಚೆತ್ತುಕೊಳ್ಳುತ್ತಿದ್ದಾರೆ. ನಮ್ಮ ಹುಡುಗಿ ಎಲ್ಲಿ ಹೋದಳು? ಎಲ್ಲಿ ಬಂದಳ? ಅನ್ನೋದನ್ನ ಪತ್ತೆಹಚ್ಚಿ ಭಯದಿಂದ ಇಟ್ಟಿಕೊಳ್ಳೊಕೆ ಆಗಲ್ಲವೇ? ಮೊದಲು ಹೆಣ್ಣು ಮಕ್ಕಳಿಗೆ ಬುದ್ಧಿ ಹೇಳದೇ ಫ್ರೀಯಾಗಿ ಬಿಟ್ಟು, ಗರ್ಭಿಣಿ ಆದ ಮೆಲೆ ದೂರು ಕೊಟ್ಟು ಪಶ್ಚಾತಾಪ ಪಡ್ತೀರಾ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.