Asianet Suvarna News Asianet Suvarna News

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ, ಬರೋಬ್ಬರಿ 700 ಮಹಿಳೆಯರಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ

ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಲ್ಲ ಎರಡಲ್ಲ ಬರೋಬ್ಬರಿ  700ಜನ ಮಹಿಳೆಯರಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ರವಾನೆಯಾಗಿದೆ.

seven hundred women wrote letter to National women Commission over Prajwal Revanna obscene videos case gow
Author
First Published May 4, 2024, 12:23 PM IST

ಬೆಂಗಳೂರು (ಮೇ.4): ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಲ್ಲ ಎರಡಲ್ಲ ಬರೋಬ್ಬರಿ  700ಜನ ಮಹಿಳೆಯರಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ರವಾನೆಯಾಗಿದೆ. ವಿವಿಧ ಮಹಿಳಾ ಒಕ್ಕೂಟ, ಸಂಘಟನೆಗಳ 700ಜನ ಮಹಿಳೆಯರು ಪತ್ರ ಬರೆದಿದ್ದಾರೆ.

ಹೆಚ್ ಡಿ ರೇವಣ್ಣರನ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಮನವಿ ಮಾಡಿದ್ದಾರೆ. ಅಖಿಲ ಭಾರತ ಸ್ತ್ರೀ ವಾದಿ ಒಕ್ಕೂಟ, ವುಮೆನ್ ಓಅರ್ ಡೆಮಾಕ್ರಸಿ ಸೇರಿ ಹಲವು ಸಂಘಟನೆಗಳು ಒಗ್ಗೂಡಿ ಪತ್ರ ಬರೆದಿದೆ. ಕೂಡಲೇ ಪ್ರಜ್ವಲ್ ರೇವಣ್ಣ ಹಾಗೂ  ಹೆಚ್ ಡಿ ರೇವಣ್ಣ ವಿರುದ್ಧ ಕ್ರಮಕ್ಕೆ ಮನವಿ ಮಾಡಿದೆ.

ಪ್ರಜ್ವಲ್ ರೇವಣ್ಣ ವಿರುದ್ದ ಜಾರಿಯಾಗುತ್ತಾ ರೆಡ್ ಕಾರ್ನರ್ ನೊಟೀಸ್?

ಅಧಿಕಾರ ಬಳಸಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ತಮ್ಮ ಹುದ್ಧೆ ಮತ್ತು ಪ್ರಭಾವ ಬಳಸಿ ಈ ರೀತಿ ಮಾಡಲಾಗಿದ್ದು, ಈ ವಿಚಾರದಲ್ಲಿ ಪ್ರಧಾನಿಗಳ ಮೌನ ನೋಡಿ ಆಶ್ಚರ್ಯ ಆಗಿದೆ. ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಈರೀತಿ ಹಲವು ಹೈ ಪ್ರೊಫೈಲ್ ಕೇಸ್ ಗಳು ನಡೆದಿವೆ. ಎನ್ ಡಿಎ, ಬಿಜೆಪಿ ಮತ್ತು ಇತರ ಮೈತ್ರಿ ಪಕ್ಷಗಳ ಸದಸ್ಯರ ವಿರುದ್ಧ ಅನೇಕ ಕೇಸ್ ಗಳು ಇದೆ.  ಈ ಪ್ರಕರಣಗಳಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ತೆಗೆದುಕೊಂಡಿದ್ದು ದುರ್ಬಲ ಕ್ರಮ. ಈಗ ಪ್ರಜ್ವಲ್ ರೇವಣ್ಣ ವಿರುದ್ಧ ಹಲವು ಆರೋಪಗಳಿವೆ. ಸುಮಾರು 2,976 ವಿಡಿಯೋಗಳಿವೆ ಎನ್ನಲಾಗ್ತಿದೆ. ಸಾಕಷ್ಟು ಪೆಂಡ್ರೈವ್ ಗಳ ಬಗ್ಗೆ ವಿಚಾರ ಬರ್ತಿದೆ.

ಗನ್‌ ಪಾಯಿಂಟ್‌ ಇಟ್ಟು ನನ್ನನ್ನು ರೇಪ್‌ ಮಾಡಿದ್ದಾರೆ, ಪ್ರಜ್ವಲ್ ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯೆ ದೂರು

ಇಷ್ಟೆಲ್ಲಾ ಆಗ್ತಿದ್ರೂ ರಾಷ್ಟ್ರೀಯ ಮಹಿಳಾ ಆಯೋಗ ಮೌನವೇಕೆ? ರಾಜತಾಂತ್ರಿಕ ಪಾಸ್ ಪೋರ್ಟ್ ಬಳಸಿ ಪ್ರಜ್ವಲ್ ವಿದೇಶಕ್ಕೆ ಹೋಗಿದ್ಹೇಗೆ? ಪ್ರಜ್ವಲ್ ರೇವಣ್ಣ ಬಗ್ಗೆ 2023ರಲ್ಲೇ ದೇವರಾಜೇಗೌಡ ಅವರು ದೂರು ಕೊಟ್ಟರೂ ಸಹ ಅವರಿಗೆ ಟಿಕೆಟ್ ಹೇಗೆ ಕೊಡಲಾಗಿದೆ? ಇಂತವರ ಪರ ಪ್ರಚಾರ ಮಾಡಿ ಪ್ರಧಾನಿ, ಗೃಹ ಸಚಿವರು ಏನು ಸಂದೇಶ ನೀಡಿದ್ದಾರೆ? ಕೂಡಲೇ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಿ. ರೇವಣ್ಣರನ್ನ ಶಾಸಕ ಸ್ಥಾನದಿಂದ ಅನರ್ಹ ಮಾಡಿ ಎಂದು ಒತ್ತಾಯಿಸಿದ್ದಾರೆ.

ಸಂತ್ರಸ್ಥೆಯರಿಗೆ ರಕ್ಷಣೆ, ಕಾನೂನು ನೆರವು ಕೊಡಬೇಕು ಎಂದು ಮನವಿ ಮಾಡಿ 700 ಜನ ಮಹಿಳೆಯರು ಸಹಿ ಹಾಕಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

Latest Videos
Follow Us:
Download App:
  • android
  • ios