ಹಿಂದುತ್ವ ಟೀಕಿಸುವವರು ಸೂರ್ಯನಿಗೆ ಉಗಿದ ಹಾಗೆ: ಮುತಾಲಿಕ್
ಇನ್ನೊಬ್ಬರ ವೋಲೈಕೆಗಾಗಿ ಮಾತನಾಡುವವರು ಹಿಂದು ವಿರೋಧಿಗಳು ಅಂತವರ ಮಾತಿಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ: ಮುತಾಲಿಕ್
ಹೊನ್ನಾಳಿ(ನ.09): ಶಾಸಕ ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರಶೇಖರ ಸಾವು ಮೇಲ್ನೋಟಕ್ಕೆ ಕೊಲೆ ಎಂದೇ ಕಾಣಿಸುತ್ತಿದೆ,ಅಲ್ಲದೆ ಶಾಸಕರ ಕುಟುಂಬವೂ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೊಲೆ ಎಂದೇ ಹೇಳುತ್ತಿರುವುದರಿಂದ ಸರ್ಕಾರ ಸಮಗ್ರ ತನಿಖೆ ನಡೆಸಿ ವರದಿ ಬಹಿರಂಗಗೊಳಿಸಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸರ್ಕಾರವನ್ನು ಆಗ್ರಹಿಸಿದರು.
ಚಂದ್ರು ಸಾವಿನ ಹಿನ್ನೆಲೆಯಲ್ಲಿ ಶಾಸಕರ ನಿವಾಸಕ್ಕೆ ಮಂಗಳವಾರ ಸಂಜೆ ಅಗಮಿಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿ ಚಂದ್ರುವಿನ ಸಾವಿನಲ್ಲಿ ಬಹಳ ನಿಗೂಢತೆ ಇದೆ,ಇದನ್ನು ಸುಲಭವಾಗಿ ಅಪಘಾತ ಎಂದು ಹೇಳಲು ಬರುವುದಿಲ್ಲ, ಅಪಘಾತ ಸ್ಥಳ ಸೂಕ್ಷ್ಮವಾಗಿ ಗಮನಿಸಿದರೆ ಇದು ಅಪಘಾತ ಎಂದು ಯಾರೂ ಹೇಳುವುದಿಲ್ಲ, ಇದೊಂದು ಪೂರ್ವಯೋಜಿತ ಕೊಲೆ ಎಂದು ಹೇಳಬಹುದು, ಆದ್ದರಿಂದ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಪ್ರಾಮಾಣಿಕ ತನಿಖೆ ನಡೆಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬಿಜೆಪಿಯಿಂದ ಅನ್ಯಾಯ, ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧೆ: ಮುತಾಲಿಕ್ ಘೋಷಣೆ
ಶಾಸಕ ಎಂ.ಪಿ.ರೇಣುಕಾಚಾರ್ಯ, ಚಂದ್ರು ತಂದೆ ಎಂ.ಪಿ. ರಮೇಶ್, ರಾಜು, ದೊಡ್ಡೇರಿ ರಾಜಣ್ಣ,ನೆಲಹೊನ್ನೆ ಮಂಜುನಾಥ್, ಅರಕೆರೆ ನಾಗರಾಜ್, ಕೆ.ಎಸ್.ಡಿಎಲ್ ನಿರ್ದೇಶಕ ಶಿವುಹುಡೇದ್ ಹಾಗೂ ಇತರರಿದ್ದರು.
ಹಿಂದುತ್ವ ಟೀಕಿಸುವವರು ಸೂರ್ಯನಿಗೆ ಉಗಿದ ಹಾಗೆ: ಮುತಾಲಿಕ್
ಕೆಲವರು ಅಲ್ಪಸಂಖ್ಯಾತರ ವೋಲೈಕೆ ಹಾಗೂ ಮತಗಳಿಕೆಗೆ ಹಿಂದು ಧರ್ಮ ಹಾಗೂ ಹಿಂದುತ್ವ ಟೀಕೆ ಮಾಡುತ್ತಾರೆ, ಅಂತಹವರು ಸೂರ್ಯನಿಗೆ ಉಗಿದಹಾಗೆ ಎಂದು ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ, ಬಿ.ಟಿ.ಲಲಿತಾನಾಯ್ಕ್‌ರನ್ನು ಪ್ರಮೋದ್ ಮುತಾಲಿಕ್ ತರಾಟೆಗೆ ತೆಗೆದುಕೊಂಡರು.
ಇನ್ನೊಬ್ಬರ ವೋಲೈಕೆಗಾಗಿ ಮಾತನಾಡುವವರು ಹಿಂದು ವಿರೋಧಿಗಳು ಅಂತವರ ಮಾತಿಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ ಎಂದ ಅವರು ಸರ್ವೋಚ್ಚ ನ್ಯಾಯಾಲಯವೇ ಹಿಂದುತ್ವದ ಬಗ್ಗೆ ತೀರ್ಪು ನೀಡಿ ಹಿಂದುತ್ವ ಒಂದು ಜೀವನ ಪದ್ಧತಿ ಎಂದು ಹಿಂದುತ್ವದ ಬಗ್ಗೆ ವ್ಯಾಖ್ಯಾನ ನೀಡಿದ್ದಾರೆ ಎಂದು ತಿಳಿಸಿದರು.
ಮುಸಲ್ಮಾನರಲ್ಲಿ ರಾಷ್ಟ್ರೀಯತೆ ಬೆಳೆಯುತ್ತೆ ಎಂಬ ನಂಬಿಕೆ ಶೇ.99ರಷ್ಟು ನನಗಿಲ್ಲ; ಮುತಾಲಿಕ್
ಸತೀಶ್ ಜಾರಕಿಹೋಳಿಯ ಹಿಂದೂ ಎಂಬ ಪದ ಅಶ್ಲೀಲ ಅರ್ಥ ನೀಡುತ್ತದೆ ಎಂಬ ಹೇಳಿಕೆಗೆ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಸುರ್ಜೆವಾಲ ಕೂಡ ಇದು ಅವರ ವೈಯಕ್ತಿಕ ಅದನ್ನು ನಾವು ಒಪ್ಪಲ್ಲ ಎಂದು ಹೇಳಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನು ಒಬ್ಬ ಹಿಂದು ಆಗಿ ಸತೀಶ್ ಜಾರಕಿಹೊಳಿ ಹೇಳಿಕೆ ಒಪ್ಪಲ್ಲ ಎಂದಿದ್ದಾರೆ ಎಂದರು.
ಸತೀಶ್ ನಾನೊಬ್ಬ ನಾಸ್ತಿಕ ಎಂದು ತೋರಿಸಿಕೊಳ್ಳಲು ಅಮಾವಾಸ್ಯೆ ದಿನ ಮದುವೆ ಮಾಡೋದು, ಹುಟ್ಟಿದ ದಿನ ಆಚರಿಸುವುದು ಹೀಗೆ ಹಿಂದು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇಂತಹವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.