ಬಿಜೆಪಿಯಿಂದ ಅನ್ಯಾಯ, ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧೆ: ಮುತಾಲಿಕ್ ಘೋಷಣೆ
- 2023 ರ ವಿಧಾನಸಭೆ ಚುಣಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ
- ರಾಜಕೀಯ ಶಕ್ತಿ ಇಲ್ಲದೆ ಹಿಂದುತ್ವ ವಿಚಾರಗಳನ್ನು ಜಾರಿಗೆ ತರಲು ಆಗೋದಿಲ್ಲ
- ಇದು ನನ್ನ ಕೊನೆಯ ಪ್ರಯತ್ನ ಎಂದ ಮುತಾಲಿಕ್
ಧಾರವಾಡ (ಅ.29) : 2023 ರ ವಿಧಾನಸಭೆ ಚುಣಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡುತ್ತೇನೆ ಎಂದು ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿಕೆ ನೀಡಿದ ಅವರು, ಇದು ನನ್ನ ಕೊನೆಯ ಪ್ರಯತ್ನ, ರಾಜಕೀಯ ಶಕ್ತಿ ಇಲ್ಲದೆ ಹಿಂದುತ್ವ ವಿಚಾರಗಳನ್ನು ಜಾರಿಗೆ ತರಲು ಆಗೋದಿಲ್ಲ. ಸಂಘಟನೆಗಳು ಕೇವಲ ಹೋರಾಟ ಮಾಡಬಹುದು. ಆಂದೋಲನ ಮಾಡಬಹುದೇ ಹೊರತು ಮತ್ತೇನೂ ಮಾಡಲು ಆಗುವುದಿಲ್ಲ. ರಾಜಕೀಯ ಶಕ್ತಿ ಬೇಕು. ಹೀಗಾಗಿ ಈ ಬಾರಿ ಕೊನೆ ಪ್ರಯತ್ನವಾಗಿ ಪಕ್ಷೇತರನಾಗಿ ಚುನಾವಣೆಗೆ ನಿಲ್ಲುತ್ತೇನೆ ಎಂದು ತಿಳಿಸಿದರು.
ಮುಸ್ಲಿಂರೊಂದಿಗೆ ವ್ಯಾಪಾರ ರದ್ದುಗೊಳಿಸಿ: ಪ್ರಮೋದ್ ಮುತಾಲಿಕ್
ಕೇವಲ ಸಂಘಟನೆ ಮೂಲಕ ಹೋರಟ ಹೊರತು ಏನನ್ನೂ ಮಾಡಲು ಸಾಧ್ಯವಾಗೋದಿಲ್ಲ. ಹೀಗಾಗಿ ನಾನು 2014 ರಿಂದ ಬಿಜೆಪಿ ಮೂಲಕ ಪ್ರಯತ್ನ ಮಾಡಿದೆ. ಆದರೆ ಬಿಜೆಪಿ ಅವರು ಸ್ಪಂದನೆ ಕೊಟ್ಟಿಲ್ಲ, ಬದಲಾಗಿ ಟಿಕೆಟ್ ನೀಡದೆ ಅವಮಾನ ಮಾಡಿದರು. ಈಗ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಅವರು ಬಂದ್ರು ನಾನು ಸ್ವಿಕಾರ ಮಾಡಿಕ್ಕೊಳ್ಳೋದಿಲ್ಲ ಎಂದು ಹೇಳಿದರು.
ಬಿಜೆಪಿಯವರು ಹಿಂದೂ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಅವರಿಗೆ ವೋಟು ಹಾಕಲು ಹಿಂದುಗಳು ಬೇಕು. ಆದರೆ ಹಿಂದುಗಳ ಹಿತಾಸಕ್ತಿ ಬಂದಾಗ ನಿರ್ಲಕ್ಷ್ಯ ಮಾಡುತ್ತಿದೆ. ಹೀಗಾಗಿ ಹಿಂದುಗಳ ಹಿತ ಕಾಯಲು ನನ್ನನ್ನು ಮುಂದಿನ ಬಾರಿ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಗೆ ಸ್ಪರ್ಧಿಸುತ್ತೇನೆ. ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ನಾನು ಚುನಾವಣೆಗೆ ಸ್ಪರ್ಧಿಸುವಂತೆ ಬೆಳಗಾವಿ ಉತ್ತರ, ದಕ್ಷಿಣ, ಧಾರವಾಡ, ಉಡುಪಿ, ಪುತ್ತೂರು ,ಕಾರ್ಕಳ, ಶೃಂಗೇರಿ, ಜಮಖಂಡಿ ತೆರದಾಳ ಇಷ್ಡು ಕ್ಷೇತ್ರಗಳ ಹಿಂದುಗಳಿಂದ, ಕಾರ್ಯಕರ್ತರಿಂದ ಒತ್ತಾಯವಿದೆ. ಡಿಸೆಂಬರ್ ಮೊದಲನೆಯ ವಾರದಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದನ್ನುಬಹಿರಂಗ ಪಡಿಸುತ್ತೇನೆ ಎಂದರು.
ಕರಾವಳಿಯಿಂದ ಚುನಾವಣಾ ಕಣಕ್ಕೆ ಇಳಿಯುತ್ತಾರಾ ಪ್ರಮೋದ್ ಮುತಾಲಿಕ್?
ನಾನು ಆ ಮೂರೂ ಪಕ್ಷಗಳಿಂದ ನಿಲ್ಲಲ್ಲ:
ಈಗಾಗಲೇ ಬಿಜೆಪಿಯಿಂದ ಟಿಕೆಟ್ ಕೇಳಿ ಅವಮಾನಿತನಾಗಿದ್ದೇನೆ. ಈಗಾಗಿ ಮುಂದಿನ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡುತ್ತೇನೆಂದರೂ ನಾನು ಸ್ವೀಕರಿಸುವುದಿಲ್ಲ ಎಂದಿರುವ ಮುತಾಲಿಕ್. ನನ್ನ ಮನೆ ಬಾಗಿಲಿಗೆ ಮೂರು ಪಕ್ಷದವರೂ ಬರೋದು ಬೇಡ. ನಾನೂ ಅವರ ಮನೆ ಬಾಗಿಲಿಗೆ ಹೋಗುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಬಿಜೆಪಿ ಪಕ್ಷ ನನಗೆ ಬಹಳ ಅನ್ಯಾಯ ಮಾಡಿದ್ದಾರೆ. ಅಷ್ಟೇ ಅಲ್ಲ, ಅವಮಾನ ಮಾಡಿದ್ದಾರೆ ಎಂದು ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ಕಿಡಿ ಕಾರಿದರು.