ತುಷ್ಟೀಕರಣ ರಾಜಕಾರಣದಿಂದ ದೇಶದಲ್ಲಿ ಕಾಂಗ್ರೆಸ್‌ ಧೂಳಿಪಟ: ಮುತಾಲಿಕ್‌

*  ಅನ್ಯಕೋಮಿನವರ ಪುಂಡಾಟಿಕೆ ಸದೆಬಡೆಯಿರಿ
*  ಭ್ರಷ್ಟತೆ ವಿರುದ್ಧ ಹೋರಾಡಿ
*  ಹಿಂದೂ ಧರ್ಮಕ್ಕೆ, ಗೋಮಾತೆಗೆ ಗೌರವ ನೀಡಿ 
 

Pramod Mutalik Slams on Congress grg

ಸವಣೂರು(ಏ.14):  ಪ್ರತಿಯೊಬ್ಬ ಹಿಂದುಗಳು(Hindu) ಜಾತಿ, ಮತ, ಪಂಥಗಳನ್ನು ಮನೆಯಲ್ಲಿ ಕಟ್ಟಿಟ್ಟು ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎನ್ನುವಂತೆ ತೋರಿಸಿ ಅನ್ಯಕೋಮಿನವರ ಪುಂಡಾಟಿಕೆಗಳನ್ನು ಸದೆಬಡೆಯಬೇಕು ಎಂದು ಶ್ರೀರಾಮ ಸೇನೆಯ(Sri Ram Sene) ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌(Pramod Mutalik) ಕರೆನೀಡಿದರು. ತಾಲೂಕಿನ ಚಿಲ್ಲೂರ- ಬಡ್ನಿ ಗ್ರಾಮದಲ್ಲಿ ಮಾರುತಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಜರುಗಿದ ಹಿಂದೂ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮತ ಹಾಕಿದ ಮತದಾರರ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಭಿವೃದ್ಧಿ ಕಾರ್ಯದ ಮಧ್ಯದಲ್ಲಿ ಮಂದಿರ(Temple), ಮಸೀದಿ(Masjid), ಚರ್ಚ್‌(Church) ಯಾವುದೇ ಬಂದರೂ ತೆರವುಗೊಳಿಸಲು ಸುಪ್ರೀಂ ಕೋರ್ಟ್‌ ಆದೇಶವಿದೆ. ಆದರೆ, ಬಂಕಾಪುರ ರಸ್ತೆ ಅಗಲೀಕರಣದ ಮಧ್ಯೆ ಗೋರಿ ಬಂದಿರುವುದನ್ನು ಇದುವರೆಗೂ ತೆರವುಗೊಳಿಸಿ ಅಭಿವೃದ್ಧಿಗೆ ಮುಂದಾಗಿಲ್ಲ. ನಿಮಗೆ ತೆರವುಗೊಳಿಸಲು ಆಗದಿದ್ದರೆ ಶ್ರೀರಾಮಸೇನೆ ಮಾಡಿತೋರಿಸುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.

ಕರ್ನಾಟಕದಲ್ಲಿ ಮುಸ್ಲಿಂರ ವಿರುದ್ಧ ಮತ್ತೊಂದು ಮೆಗಾ ಅಭಿಯಾನ?: ಮುತಾಲಿಕ್ ಹೇಳಿದ್ದಿಷ್ಟು

ದೇಶದಲ್ಲಿ ಮುಸಲ್ಮಾನ(Muslim) ರಾಜರ ಬೆದರಿಕೆಗೆ ಮತಾಂತರವಾಗಿರುವ ಮುಸ್ಲಿಂಮರು ಮೂಲತಃ ಪುಕ್ಕಲು ಹಿಂದೂಗಳಾಗಿದ್ದಾರೆ(Hindu). ಈಗ ಕಾಲ ಬದಲಾಗಿದೆ, ಮರಳಿ ಹಿಂದೂ ಧರ್ಮಕ್ಕೆ ಬನ್ನಿ. ಒಂದು ವೇಳೆ ಬರದಿದ್ದರೂ ಸಹ ನಿಮ್ಮ ಮೂಲ ಧರ್ಮವಾದ ಹಿಂದೂ ಧರ್ಮಕ್ಕೆ, ಗೋಮಾತೆಗೆ ಗೌರವ ನೀಡಿ ಎಂದರು.

ಆಕಳು ಗೊಡ್ಡು ಎಂದು ಕಟುಕರಿಗೆ ಮಾರಬೇಡಿ, ಗೊಡ್ಡು ಗೋವಿನಿಂದಲೂ ಸಹ ಮಾನವನ ಜೀವನಾಂಶಕ್ಕೆ ಬೇಕಾಗಿರುವ ಅನೇಕ ಉಪಯೋಗಗಳಿವೆ ಎಂದು ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ರೈತರಿಗೆ ತರಬೇತಿ ನೀಡುತ್ತಿದ್ದು, ಹಿಂದೂಗಳಿಗೆ ತರಬೇತಿಯ ಕೊಡಿಸಲು ಯತ್ನಿಸುತ್ತಿರುವುದಾಗಿ ಹೇಳಿದರು.

ಭ್ರಷ್ಟತೆ ವಿರುದ್ಧ ಹೋರಾಡಿ:

ಬಡವರಿಗೆ ಕುಡಿಯಲು ನೀರಿಲ್ಲ, ವಾಸಿಸಲು ಮನೆಯಿಲ್ಲ, ಹೊಟ್ಟೆ ಹೊರೆಯಲು ಕಷ್ಟಪಡಬೇಕಾಗಿದೆ. ಇಂತಹ ಪರಿಸ್ಥತಿಯಲ್ಲಿ ಭ್ರಷ್ಟಅಧಿಕಾರಿಗಳು, ರಾಜಕಾರಣಿಗಳು ಅಕ್ರಮ ಹಣ, ಆಸ್ತಿ ಮಾಡುತ್ತಿದ್ದು, ನಾವೆಲ್ಲರೂ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಬೇಕಿದೆ. ಕಾಂಗ್ರೆಸ್‌(Congress) ಪಕ್ಷದ ತುಷ್ಟೀಕರಣದ ರಾಜಕಾರಣದಿಂದ ದೇಶದಲ್ಲಿ ಧೂಳಿಪಟವಾಗಿದೆ. ಹಿಂದೂಗಳನ್ನು ತುಳಿದು ಅಲ್ಪಸಂಖ್ಯಾತ ತುಷ್ಟೀಕರಣಕ್ಕೆ ಮುಂದಾದ ಯಾವ ಪಕ್ಷಗಳು, ರಾಜಕಾರಣಿಗಳಿಗೆ ಉಳಿಗಾಲವಿಲ್ಲ, ಹಿಂದೂಗಳು ಇಂದು ಜಾಗೃತರಾಗಿದ್ದಾರೆ ಎಂದು ಹೇಳಿದರು.

ಚೈತ್ರಾ ಕುಂದಾಪುರ ಸಮಾವೇಶದಲ್ಲಿ ಮಾತನಾಡಿದರು. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಗದಿಗೆಪ್ಪ ಕುರವತ್ತಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ವಿಹಿಂಪ ಮುಖಂಡ ಎಸ್‌.ಆರ್‌. ಹೆಗಡೆ ಹಾಗೂ ಹಿಂದೂ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು. ಚಿದಂಬರ ಕಾಯತ, ಗಂಗಾಧರಯ್ಯ ಹಿರೇಮಠ ಕಾರ್ಯಕ್ರಮವನ್ನು ನಿರ್ವಹಿಸಿದರು.
 

Latest Videos
Follow Us:
Download App:
  • android
  • ios