ಕರ್ನಾಟಕದಲ್ಲಿ ಮುಸ್ಲಿಂರ ವಿರುದ್ಧ ಮತ್ತೊಂದು ಮೆಗಾ ಅಭಿಯಾನ?: ಮುತಾಲಿಕ್ ಹೇಳಿದ್ದಿಷ್ಟು
* ವಕ್ಫ್ ಬೋರ್ಡ್ ನಿಷೇಧಿಸಲು ಪ್ರಮೋದ್ ಮುತಾಲಿಕ್ ಆಗ್ರಹ
* ವಕ್ಫ್ ಬೋರ್ಡ್ ನಲ್ಲಿ ಬಹಳ ದೊಡ್ಡ ಹಗರಣವಾಗಿದೆ
* ಹಿಂದೂ ಸಮಾಜ ಜಾಗೃತವಾಗಿದೆ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಏ.09): ಹಿಜಾಬ್(Hijab) ಕೇಸರಿ ಶಾಲು ವಿವಾದ, ಹಲಾಲ್ ಕಟ್ ವರ್ಸಸ್ ಜಟ್ಕಾ ಕಟ್, ದೇವಸ್ಥಾನಗಳಲ್ಲಿ ಮುಸ್ಲಿಂ ವರ್ತಕರಿಗೆ ಆರ್ಥಿಕ ನಿರ್ಬಂಧ, ದೇವಸ್ಥಾನಕ್ಕೆ ತೆರಳುವ ವೇಳೆ ಭಕ್ತರು ಮುಸ್ಲಿಂ ವ್ಯಕ್ತಿಗೆ ಸೇರಿದ ವಾಹನದಲ್ಲಿ ಪ್ರಯಾಣಿಸಬಾರದು ಅಭಿಯಾನ ಬಳಿಕ ಮತ್ತೊಂದು ಮೆಗಾ ಅಭಿಯಾನಕ್ಕೆ ಹಿಂದೂಪರ ಸಂಘಟನೆಗಳು ಸಿದ್ಧತೆ ನಡೆಸಿವೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ಬ್ಯಾನ್, ಮತ್ತು ವಕ್ಫ್ ಬೋರ್ಡ್ ಕಾನೂನು ರದ್ದು ಮಾಡುವಂತೆ ಹೋರಾಟ ಮಾಡುವುದಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod Mutalik) ಘೋಷಣೆ ಮಾಡಿದ್ದಾರೆ.
ಬೆಳಗಾವಿಯಲ್ಲಿ(Belagavi) ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, 1991ರಲ್ಲಿ ಕಾಂಗ್ರೆಸ್(Congress) ಪ್ರಾರಂಭ ಮಾಡಿದ ವಕ್ಫ್ ಬೋರ್ಡ್ ಕಾನೂನು ಇಡೀ ದೇಶದಲ್ಲಿ ವಕ್ಫ್ ಬೋರ್ಡ್ ಆಸ್ತಿ ಇರೋದು ನಂಬರ್ ಟೂ. ರೇಲ್ವೆ ಮತ್ತು ಮಿಲಿಟರಿ ವಿಭಾಗದ ಆಸ್ತಿ ನಮ್ಮ ದೇಶದಲ್ಲಿ ನಂಬರ್ ಒನ್ ಇದೆ. ಎರಡನೇ ಸ್ಥಾನದಲ್ಲಿ ಇರೋದು ವಕ್ಫ್ ಬೋರ್ಡ್ ಆಸ್ತಿ. ವಕ್ಫ್ ಬೋರ್ಡ್ ಕಾನೂನು ಎಷ್ಟು ಹೋಪ್‌ಲೆಸ್ ಇದೆ ಅಂದ್ರೇ, ವಕ್ಫ್‌ಬೋರ್ಡ್ ಇವತ್ತು ಮನಸ್ಸು ಮಾಡಿದ್ರೆ ಯಾವುದೋ ಒಂದು ಕಟ್ಟಡ ಇದು ವಕ್ಫ್‌ಬೋರ್ಡ್‌ಗೆ ಸೇರಬೇಕು ಅಂತಾ ಹಾಕಿಬಿಟ್ರೆ ಅಲ್ಲಿ ಫೈಟ್ ಸ್ಟಾರ್ಟ್ ಆಗುತ್ತೆ. ವಕ್ಫ್ ಬೋರ್ಡ್ ಅದನ್ನು ತನ್ನ ಅಧಿನಕ್ಕೆ ತೆಗೆದುಕೊಳ್ಳಬಹುದು. ಇಂತಹ ಭಯಾನಕ ಕಾನೂನು ವಕ್ಫ್‌ಬೋರ್ಡ್ ಇದೆ.
Belagavi: ಕಲರ್ ಕಲರ್ ಸೀರೆ ನೇಯುವ ನೇಕಾರರ ಬದುಕು ಮಾತ್ರ ಬ್ಲ್ಯಾಕ್ & ವೈಟ್!
ವಕ್ಫ್‌ಬೋರ್ಡ್ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ವಿಷ್ಣು ಜೈನ್ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ. ಅದು ನಡೀತಿದೆ. ಈ ರೀತಿ ಇನ್ನೂ ಬೇಕಾದಷ್ಟು ಪ್ರಕರಣಗಳು ಇದಾವೆ. ಹಿಂದೂ(Hindu) ಸಮಾಜ ಜಾಗೃತವಾಗಿದೆ. ಮುಸ್ಲಿಂ(Muslim) ಮಾನಸಿಕತೆ ನೀವು ಬದಲಾವಣೆ ಆಗಲಿಲ್ಲ ಅಂತಾ ಅಂದ್ರೆ ಇದು ದೊಡ್ಡ ಪ್ರಮಾಣದಲ್ಲಿ ಅನಾಹುತವರೆಗೆ ಹೋಗುತ್ತದೆ ಅನ್ನೋದನ್ನ ಹೇಳುತ್ತಿದೀನಿ. ಲೌಡ್‌ಸ್ಪೀಕರ್ ಇನ್ನೂವರೆಗೂ ನಿಲ್ಲಿಸಿಲ್ಲ. ಎಷ್ಟೋ ಆಸ್ಪತ್ರೆ, ಶಾಲಾ ಕಾಲೇಜುಗಳ, ಕಚೇರಿ, ಕೋರ್ಟ್ ಪಕ್ಕದಲ್ಲಿ ಲೌಡ್‌ಸ್ಪೀಕರ್‌ಗಳು ಎಷ್ಟು ಅನಾಹುತಗೊಳಿಸುತ್ತಿವೆ. ಇನ್ನೂ ನಿಲ್ಲಿಸಲ್ಲ ನೀವು. ಈ ರೀತಿಯ ಮಾನಸಿಕತೆ ನಿಲ್ಲಿಸುವವರೆಗೂ ನಮ್ಮ ಜಾಗೃತಿ, ಹೋರಾಟ ಅಭಿಯಾನ ನಡೆಯೋದು ಅಂತಾ ತಿಳಿಸಿದ್ದಾರೆ.
ವಕ್ಫ್ ಬೋರ್ಡ್ ಬಗ್ಗೆ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ದೊಡ್ಡಮಟ್ಟದಲ್ಲಿ ದಾಖಲೆ ಸಂಗ್ರಹಿಸಿ ಬಿಡುಗಡೆ ಮಾಡ್ತೀನಿ. ಯಾವ ಜಿಲ್ಲೆಯಲ್ಲಿ ಯಾವ್ಯಾವದ್ದು ವಕ್ಫ್ ಬೋರ್ಡ್‌ಗೆ ಸೇರಿಕೊಂಡಿದೆ ಆರ್‌ಟಿಐ ನಲ್ಲಿ ದಾಖಲೆ ತೆಗೆದುಕೊಂಡಿದ್ದು ಇದರ ಬಗ್ಗೆ ದೊಡ್ಡ ಅಭಿಯಾನ ತಗೋಳ್ತೆವಿ. ವಕ್ಫ್ ಬೋರ್ಡ್ ಕಾನೂನು ಹಿಂಪಡೆಯುವಂತೆ ಒತ್ತಾಯ ಮಾಡುತ್ತೇವೆ. ವಕ್ಫ್ ಬೋರ್ಡ್ ಕಾನೂನು ಭಯಾನಕ ಇದೆ. ವಕ್ಫ್ ಬೋರ್ಡ್ ಗೆ ಯಾರೆಲ್ಲಾ ಲಿಂಕ್ ಇದ್ದಾರೆ ಅಧಿಕೃತವಾಗಿ ಮಾಹಿತಿ ತಗೆಯುತ್ತಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ(BJP Government) ಇದ್ದ ಸಮಯದಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷರಿದ್ದ ಸಮಯದಲ್ಲಿ ಎರಡು ಲಕ್ಷ ಕೋಟಿಯಷ್ಟು ಹಗರಣವನ್ನು ಹೊರತಗೆದಿದ್ರು. ಅದು ಇನ್ನೂ ಕೋರ್ಟ್‌ನಲ್ಲಿ ನಡೆಯುತ್ತಿದೆ. ವಕ್ಫ್ ಬೋರ್ಡ್ ನಲ್ಲಿ ಬಹಳ ದೊಡ್ಡ ಹಗರಣವಾಗಿದೆ.
ಬಿಜೆಪಿಯವರು ಸಹ ಆ ಇಸ್ಯೂ ಹಾಗೇ ಇಟ್ಟಿದ್ದಾರೆ. ಅದಕ್ಕೆ ಬಿಜೆಪಿಯವರು ಸಹ ಪೂರ್ಣ ಬೆಂಬಲ ಕೊಡಲಿಲ್ಲ. ಡಾಕ್ಯುಮೆಂಟ್ ಕೋರ್ಟ್‌ಗೆ ಹಾಕಿ ಫೈಟ್ ಮಾಡ್ತಿದ್ದಾರೆ. ಆ ವ್ಯಕ್ತಿ ಹೆಸರು ಮರೆತು ಹೋಗಿದೆ. ಇನ್ನೂ ಬಿಜೆಪಿಯಲ್ಲಿದ್ದಾರೆ ಪಾಪ ಅವರನ್ನು ಒಂಟಿಯಾಗಿ ಮಾಡಿಬಿಟ್ರು. ಕಾಂಗ್ರೆಸ್ ನವರು ಸೇರಿದಂತೆ ಎಲ್ಲರೂ ಇದಾರೆ. ವಕ್ಫ್ ಬೋರ್ಡ್ ಮಾಹಿತಿ ಅರ್ಧ ಸಿಕ್ಕಿದೆ ಇನ್ನೂ ಅರ್ಧ ತಗೆಯುತ್ತಿದ್ದೇವೆ. ವಕ್ಫ್ ಬೋರ್ಡ್ ಸರ್ಕಾರ ಕೈಬಿಡಬೇಕು ಇಲ್ಲವಾದ್ರೇ ವಕ್ಫ್ ಬೋರ್ಡ್ ಆಸ್ತಿ ನಂಬರ್ ಒನ್ ಆದ್ರೆ ದೇಶದ ಪರಿಸ್ಥಿತಿ ಕಂಟ್ರೋಲ್ ಉಳಿಯುವುದಿಲ್ಲ' ಅಂತಾ ತಿಳಿಸಿದ್ದಾರೆ.