ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಅಧಿಕಾರ : ಕಾಳಯ್ಯ
ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಪ. ಜಾತಿ ವಿಭಾಗದ ಸಂಚಾಲಕ ಕಾಳಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರು : ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಪ. ಜಾತಿ ವಿಭಾಗದ ಸಂಚಾಲಕ ಕಾಳಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕೆಪಿಸಿಸಿ ಪ.ಜಾತಿ ವಿಭಾಗದ ಅಧ್ಯಕ್ಷರೂ ಆದ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಧರ್ಮಸೇನ ಅವರು ವರದಾನಪೆಟ್ ಕ್ಷೇತ್ರದ ವೀಕ್ಷಕರಾಗಿ ಎಐಸಿಸಿ ನೇಮಿಸಿದೆ. ಅವರೊಂದಿಗೆ ಕ್ಷೇತ್ರಾದ್ಯಂತ ಪ್ರವಾಸ ಮಾಡಿ, ಜನತೆ ಕಾಂಗ್ರೆಸ್ ಪರವಾಗ ಒಲವು ಹೊಂದಿರುವುದು ವ್ಯಕ್ತವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಗೆಲುವು ಗ್ಯಾರಂಟಿ
ಹೈದರಾಬಾದ್ (ನವೆಂಬರ್ 18, 2023): ಈಗಾಗಲೇ 6 ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಪಕ್ಷ, ಶುಕ್ರವಾರ ತೆಲಂಗಾಣ ಚುನಾವಣೆ ನಿಮಿತ್ತ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಈ ಹಿಂದೆ ಘೋಷಣೆ ಮಾಡಿದ್ದ 6 ಗ್ಯಾರಂಟಿಗಳು ಹಾಗೂ ಇತರ ಘೋಷಣೆಗಳಿವೆ. ‘ಅಭಯ ಹಸ್ತಂ’ ಎಂಬ 42 ಪುಟಗಳ ಪ್ರಣಾಳಿಕೆಯನ್ನು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದರು.
ಏನೇ ಆಗಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಜನರು ಮನಸ್ಸು ಮಾಡಿದ್ದಾರೆ. ಪ್ರಣಾಳಿಕೆಯು ನಮಗೆ ಗೀತಾ, ಕುರಾನ್ ಅಥವಾ ಬೈಬಲ್‌ನಂತಿದೆ. ನಾವು ಕರ್ನಾಟಕದಲ್ಲಿ ಈ ಭರವಸೆಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ. ಇಲ್ಲೂ ಅವುಗಳನ್ನು ಈಗ ಜಾರಿಗೆ ತರಲಾಗುತ್ತಿದೆ ಎಂದರು.
ಇದನ್ನು ಓದಿ: ಈ ರಾಜ್ಯದಲ್ಲಿ 450 ರೂ. ಗೆ ಸಿಗುತ್ತೆ ಗ್ಯಾಸ್ ಸಿಲಿಂಡರ್: ಬಿಜೆಪಿ ಘೋಷಣೆ
ಪ್ರಣಾಳಿಕೆಯಲ್ಲಿ ಏನಿದೆ?:
- ಮಹಾಲಕ್ಷ್ಮೀ ಯೋಜನೆ ಅಡಿ ಮಹಿಳೆಯರಿಗೆ ತಿಂಗಳಿಗೆ 2,500 ರೂ. ಆರ್ಥಿಕ ನೆರವು
- ಮಹಿಳೆಯರಿಗೆ 500 ರೂ.ಗೆ ಗ್ಯಾಸ್ ಸಿಲಿಂಡರ್
- ‘ಮಹಾಲಕ್ಷ್ಮೀ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ
- ‘ಗೃಹ ಜ್ಯೋತಿ’ ಅಡಿಯಲ್ಲಿ ಎಲ್ಲ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್
- ಸ್ವಂತ ಮನೆ ಇಲ್ಲದ ಕುಟುಂಬಗಳಿಗೆ ವಸತಿ ನಿವೇಶನ
-‘ಇಂದಿರಮ್ಮ ಇಂಡ್ಲು’ ಯೋಜನೆಯಡಿ ಮನೆ ನಿರ್ಮಾಣಕ್ಕೆ ₹ 5 ಲಕ್ಷ ನೆರವು
- ‘ಯುವ ವಿಕಾಸಂ’ ಯೋಜನೆಯಡಿ ವಿದ್ಯಾರ್ಥಿಗಳಿಗೆ ₹ 5 ಲಕ್ಷ ಸಹಾಯ
- ತೆಲಂಗಾಣ ಚಳವಳಿ ಹೋರಾಟಗಾರರಿಗೆ 250 ಚದರ ಗಜಗಳ (ಸ್ಕ್ವೇರ್ ಯಾರ್ಡ್) ವಸತಿ ನಿವೇಶನ
ಇದನ್ನೂ ಓದಿ: ಭಾರತದ ರೈಲ್ವೆ ಕೇಂದ್ರಬಿಂದುವಾಗಲಿದೆ ಈ ನಗರ: ಸಾವಿರಾರು ಕೋಟಿ ರೂ. ಯೋಜನೆ ಘೋಷಿಸಿದ ಅಶ್ವಿನಿ ವೈಷ್ಣವ್
- ರೈತ ಭರೋಸಾ ಅಡಿಯಲ್ಲಿ, ಪಕ್ಷವು ರೈತರಿಗೆ ಪ್ರತಿ ವರ್ಷ 5,000 ರೂ.
- ಭೂರಹಿತ ರೈತ ಕಾರ್ಮಿಕರಿಗೆ ವಾರ್ಷಿಕ 12,000 ರೂ. ನೆರವು
- ಸಾಮಾಜಿಕ, ಆರ್ಥಿಕ ಹಿಂದುಳಿದ ಮಹಿಳೆಯರಿಗೆ ಮಾಸಿಕ 4000 ರೂ. ಪಿಂಚಣಿ
- ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರು, ಬೀಡಿ ಕಾರ್ಮಿಕರು, ಒಂಟಿ ಮಹಿಳೆಯರು, ಸೇಂದಿ ಇಳಿಸುವವರು, ನೇಕಾರರು, ಏಡ್ಸ್ ಮತ್ತು ಫೈಲೇರಿಯಾ ರೋಗಿಗಳು ಮತ್ತು ಡಯಾಲಿಸಿಸ್‌ಗೆ ಒಳಪಡುವ ಕಿಡ್ನಿ ರೋಗಿಗಳಿಗೆ ತಿಂಗಳಿಗೆ ₹ 4,000 ಪಿಂಚಣಿ ಹಾಗೂ 10 ಲಕ್ಷ ಆರೋಗ್ಯ ವಿಮಾ ರಕ್ಷಣೆ
- ರೈತರಿಗೆ 2 ಲಕ್ಷ ರೂ. ಬೆಳೆ ಸಾಲ ಮನ್ನಾ ಮತ್ತು ವಾರ್ಷಿಕ 3 ಲಕ್ಷ ರೂ.ವರೆಗೆ ಬಡ್ಡಿರಹಿತ ಬೆಳೆಸಾಲ
- ಯುವತಿಯರಿಗೆ ಮದುವೆಗೆ 1 ಲಕ್ಷ ರೂ. ನೆರವು, ‘ಇಂದಿರಮ್ಮ’ ಉಡುಗೊರೆಯಾಗಿ 10 ಗ್ರಾಂ ಚಿನ್ನ ಬಳಕೆಗೆ 24 ಗಂಟೆ ಉಚಿತ ವಿದ್ಯುತ್.
- 18 ವರ್ಷ ವಯಸ್ಸಿನ ಎಲ್ಲಾ ಓದುತ್ತಿರುವ ಹುಡುಗಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್.