Asianet Suvarna News Asianet Suvarna News

ಮಧ್ಯರೈಲ್ವೆಯ ಕಳಪೆ ಕಾಮಗಾರಿ: ಜೀವ ಬಲಿಗಾಗಿ ಕಾದಂತಿವೆ ಕಬ್ಬಿಣದ ತಂತಿಗಳು!

ರೈಲ್ವೆ ಅಂಡರ್‌ ಪಾಸ್‌ನಲ್ಲಿ ನಿರ್ಮಿಸಿರುವ ಸಿಸಿ ರಸ್ತೆಯಲ್ಲಿ ಹಾಕಲಾಗಿರುವ ಕಬ್ಬಿಣದ ತಂತಿ(ರಾಡ್‌)ಗಳು ಹೊರ ಬಂದು ಜೀವ ಬಲಿಗಾಗಿ ಕಾದಂತೆ ಭಾಸವಾಗುತ್ತಿದ್ದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

poor work of Central Railway Iron wires are waiting for life sacrifice! at kalaburgi rav
Author
First Published May 19, 2023, 4:46 AM IST

ರಾಹುಲ್‌ ದೊಡ್ಮನಿ ಬಡದಾಳ

ಚವಡಾಪುರ (ಮೇ.19) : ರೈಲ್ವೆ ಅಂಡರ್‌ ಪಾಸ್‌ನಲ್ಲಿ ನಿರ್ಮಿಸಿರುವ ಸಿಸಿ ರಸ್ತೆಯಲ್ಲಿ ಹಾಕಲಾಗಿರುವ ಕಬ್ಬಿಣದ ತಂತಿ(ರಾಡ್‌)ಗಳು ಹೊರ ಬಂದು ಜೀವ ಬಲಿಗಾಗಿ ಕಾದಂತೆ ಭಾಸವಾಗುತ್ತಿದ್ದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ಅಫಜಲ್ಪುರ ತಾಲೂಕಿನ ಅರ್ಜುಣಗಿ ಗ್ರಾಮ(Arjunagai village)ದಲ್ಲಿರುವ ರೈಲ್ವೆ ಅಂಡರ್‌ಪಾಸ್‌(Railway Underpass)ನಲ್ಲಿ ಕಳೆದ ವರ್ಷ ರೈಲ್ವೆ ಹಳಿ ಡಬ್ಲಿಂಗ್‌ ಮತ್ತು ವಿದ್ಯುದೀಕರಣದ ವೇಳೆ ನಿರ್ಮಿಸಿರುವ ಸಿಸಿ ರಸ್ತೆ ಸಂಪೂರ್ಣವಾಗಿ ಕಳಪೆ ಗುಣಮಟ್ಟದ್ದಾಗಿದ್ದು ಸಿಸಿ ರಸ್ತೆಯಲ್ಲಿ ಹಾಕಲಾಗಿರುವ ಕಬ್ಬಿಣದ ತಂತಿಗಳು(Iron wires) ಸಂಪೂರ್ಣವಾಗಿ ಹೊರಬಂದು ಸಾಕಷ್ಟುಅವಗಢಗಳಿಗೆ ಕಾರಣವಾಗಿವೆ.

ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ: 4 ಶಾಸಕರ ಪೈಕಿ ಯಾರಿಗೆ ಸಿಗಲಿದೆ ಪಟ್ಟ, ಚರ್ಚೆ ಜೋರು !

ಮಧ್ಯ ರೈಲ್ವೆಯ ಕಳಪೆ ಕಾಮಗಾರಿಗೆ(Poor work) ವಾಹನ ಸವಾರರು ಹೈರಾಣು: ಭಾರತೀಯ ರೈಲ್ವೆಯ ಮಧ್ಯ ರೈಲ್ವೆ ವಿಭಾಗದಲ್ಲಿ ಬರುವ ಸೊಲ್ಲಾಪುರ ವಾಡಿ ನಡುವೆ ಮಧ್ಯ ರೈಲು ಹಳಿ ಡಬ್ಲಿಂಗ್‌ ಕಾರ್ಯ ಹಾಗೂ ವಿದ್ಯುದೀಕರಣ ಕೆಲಸ ಕಳೆದ ಎರಡ್ಮೂರು ವರ್ಷಗಳಿಂದ ಮಾಡಲಾಗುತ್ತಿದ್ದು ಈಗ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಈ ಮಾರ್ಗಮಧ್ಯ ಬರುವ ಹಳ್ಳಿಗಳಲ್ಲಿ ಅಂಡರ್‌ಪಾಸ್‌ ರಸ್ತೆ ವ್ಯವಸ್ಥೆ ಮಾಡಿಸಲಾಗಿದೆ. ಹೀಗೆ ಮಾಡಿಸಿರುವ ರಸ್ತೆಗಳಲ್ಲಿ ಅರ್ಜುಣಗಿ ಗ್ರಾಮದ್ದೂ ಒಂದಾಗಿದೆ. ಆದರೆ ಇಲ್ಲಿ ನಿರ್ಮಿಸಿರುವ ರೈಲ್ವೆ ಅಂಡರ್‌ಪಾಸಿನ ಸಿಸಿ ಕಾಮಗಾರಿ ಕಳಪೆಯಾಗಿದ್ದರಿಂದ ಇಲ್ಲಿ ಸಂಚರಿಸುವ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಜೀವಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ. ಇದನ್ನು ಮಧ್ಯ ರೈಲ್ವೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಸರಿಪಡಿಸುವ ಕೆಲಸ ಮಾಡಬೇಕಾಗಿದೆ.

ಅರ್ಜುಣಗಿಯಿಂದ ಅಫಜಲ್ಪುರಕ್ಕೆ ಹೋಗಲು ಇದೊಂದೆ ಮಾರ್ಗ: ಇನ್ನೂ ಅರ್ಜುಣಗಿ ಗ್ರಾಮ ಅಫಜಲ್ಪುರ ತಾಲೂಕಿನ ಕೊನೆಯ ಗ್ರಾಮವಾಗಿದೆ. ಈ ಗ್ರಾಮದಿಂದ ಅಫಜಲ್ಪುರ ತಾಲೂಕು ಕೇಂದ್ರಕ್ಕೆ ಹೋಗಲು ಇದೊಂದೆ ಮಾರ್ಗವಾಗಿದೆ. ಹೀಗಾಗಿ ಇಲ್ಲಿನ ಜನ ಇದೇ ಮಾರ್ಗವಾಗಿ ಅಫಜಲ್ಪುರ ಪಟ್ಟಣ, ರೇವೂರ(ಬಿ), ಮಹಾರಾಷ್ಟ್ರ ರಾಜ್ಯದ ಗ್ರಾಮ, ನಗರ ಪಟ್ಟಣಗಳಿಗೆ ಹೋಗುತ್ತಾರೆ. ಹೀಗಾಗಿ ಅರ್ಜುಣಗಿ ಗ್ರಾಮಸ್ಥರಿಗೆ ಈ ಅಂಡರ್‌ಪಾಸ್‌ ಅಚ್ಚುಕಟ್ಟಾಗಿರಬೇಕಾದುದ್ದು ಬಹಳ ಅವಶ್ಯಕ ಮತ್ತು ಅನಿವಾರ್ಯವಾಗಿದೆ. ಆದರೆ ಕಳಪೆ ಕಾಮಗಾರಿಯಿಂದಾಗಿ ಅಂಡರ್‌ಪಾಸ್‌ ಸಿಸಿ ರಸ್ತೆ ಹಾಳಾಗಿದ್ದು ಈಗ ಗ್ರಾಮಸ್ಥರಿಗೆ ಭಾರಿ ಸಮಸ್ಯೆ ಆಗುತ್ತಿದೆ.

ರೈತರು, ಶಾಲಾ ಮಕ್ಕಳಿಗೂ ಆತಂಕ:

ಅರ್ಜುಣಗಿ ತಾಂಡಾದಿಂದ 5ನೇ ತರಗತಿ ಮುಗಿಸಿದ ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಅರ್ಜುಣಗಿ ಗ್ರಾಮಕ್ಕೆ ಹೋಗಬೇಕಾದರೆ ಇದೇ ಅಂಡರ್‌ಪಾಸ್‌ ನಿಂದಲೇ ಹೋಗಬೇಕು. ಅಲ್ಲದೆ ಗ್ರಾಮದ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಬೇಕಾದರೂ ಇದೇ ಅಂಡರ್‌ಪಾಸ್‌ನಿಂದಲೇ ಹೋಗಿ ಬರಬೇಕು. ಆದರೆ ಅಂಡರ್‌ಪಾಸ್‌ ರಸ್ತೆ ಹಾಳಾಗಿ ಕಬ್ಬಿಣದ ರಾಡ್‌ಗಳು ಹೊರಬಂದು ಜೀವ ಬಲಿಗಾಗಿ ಕಾದಂತೆ ಕಾಣುತ್ತಿರುವಾಗ ರೈತರು, ಶಾಲಾ ಮಕ್ಕಳು ತಮ್ಮ ಜೀವ ಕೈಯಲ್ಲಿ ಹಿಡಿದು ನಿತ್ಯ ಹೋಗಿ ಬರುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಏನಾದರೂ ಅವಗಢ ಸಂಭವಿಸಬಹುದಾಗಿದೆ. ಹೀಗಾಗಿ ಸಂಬಂಧ ಪಟ್ಟವರು ಕೂಡಲೇ ಇದನ್ನು ಸರಿಪಡಿಸಿ ಜೀವಗಳ ರಕ್ಷಣೆ ಮಾಡಬೇಕಾಗಿದೆ.

ಕಲಬುರಗಿಯಲ್ಲಿ ಕಣದಲ್ಲಿದ್ದ 69 ಅಭ್ಯರ್ಥಿಗಳಿಗೆ ನೋಟಾಕ್ಕಿಂತ ಕಮ್ಮಿ ಮತ..!

ಮಧ್ಯ ರೈಲ್ವೆ ವಿಭಾಗದವರ ಕಳಪೆ ಕಾಮಗಾರಿಯಿಂದಾಗಿ ಇಲ್ಲಿ ನಿತ್ಯ ದ್ವಿಚಕ್ರ, ತ್ರಿಚಕ್ರ ವಾಹನಗಳು ಅವಗಢಕ್ಕೀಡಾಗುತ್ತಿವೆ. ನಾನು ಕೂಡ ಇಲ್ಲಿ ಬಿದ್ದು ಗಂಭೀರ ಗಾಯ ಮಾಡಿಕೊಂಡಿದ್ದೇನೆ. ಕೂಡಲೇ ಸಂಬಂಧ ಪಟ್ಟಅಧಿಕಾರಿಗಳು ನಮ್ಮ ಶಾಸಕರು ಈ ಸಮಸ್ಯೆ ಬಗ್ಗೆ ನೀಗಾ ವಹಿಸಿ ಸಮಸ್ಯೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ

- ಮಹೇಶ ಮಂಗಳೂರ, ದ್ವಿಚಕ್ರ ವಾಹನ ಸವಾರ

Follow Us:
Download App:
  • android
  • ios