ಗುಂಡ್ಲುಪೇಟೆಯಲ್ಲಿ ಅಡಗಿದ್ದಾರಾ ಉಗ್ರರು, ತರಬೇತಿಗೆ ಸ್ಥಳೀಯರ ಬಳಕೆ..?
ಗುಂಡ್ಲುಪೇಟೆಯಲ್ಲಿ ಸಂಶಯಾಸ್ಪದವಾಗಿ ಇಬ್ಬರು ಪತ್ತೆಯಾಗಿದ್ದು, ತಮಿಳುನಾಡು, ಕೇರಳದಿಂದ ಉಗ್ರರು ಜಿಲ್ಲೆಗೆ ನುಸುಳಿದ್ದಾರಾ ಎಂಬ ಬಗ್ಗೆ ಆತಂಕ ವ್ಯಕ್ತವಾಗಿದೆ. ಉಗ್ರ ತರಬೇತಿಗೆ ಸ್ಥಳೀಯರನ್ನೇ ಬಳಸಿಕೊಳ್ಳುವ ಬಗ್ಗೆಯೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ(ಜ.17): ಗುಂಡ್ಲುಪೇಟೆಯಲ್ಲಿ ಸಂಶಾಯಸ್ಪದ ಇಬ್ಬರು ವ್ಯಕ್ತಿಗಳು ಪತ್ತೆಯಾಗಿರುವುದರಿಂದ ಗಡಿ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರ ಸಂಘಟನೆಯೊಂದು ಗುಂಡ್ಲುಪೇಟೆ ಸುತ್ತಮುತ್ತ ಜಮೀನು ಖರೀದಿಸಿ, ತರಬೇತಿ ಶಿಬಿರವನ್ನು ನಡೆಸುವ ಹುನ್ನಾರ ನಡೆಸಿತ್ತು. ಇದಕ್ಕಾಗಿ ಸ್ಥಳೀಯರಿಬ್ಬರನ್ನು ಬಳಸಿಕೊಂಡಿತ್ತು.
ಶಂಕಿತ ಉಗ್ರರು: ಬಂಡೀಪುರ ಚೆಕ್ ಪೋಸ್ಟ್‌ನಲ್ಲಿ ತೀವ್ರ ತಪಾಸಣೆ
ಆ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಅವರಿಗೆ ಜಮೀನು ಖರೀದಿ ವಿಚಾರ ಬಿಟ್ಟರೆ ಬೇರೆನೂ ಗೊತ್ತಿಲ್ಲ, ಆದ್ದರಿಂದ ಅವರನ್ನು ಬಿಡುಗಡೆಗೊಳಿಸಲಾಗಿದೆ. ಜಿಲ್ಲೆ ಕೇರಳ, ತಮಿಳುನಾಡು ಗಡಿ ಹೊಂದಿರುವುದರಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಚೆಕ್‌ಪೋಸ್ಟ್‌ಗಳಲ್ಲಿ ಹೋಗಿ ಬರುವ ವಾಹಗಳನ್ನು ತಪಾಸಣೆ ಮಾಡಲಾಗುತ್ತದೆ. ಅನುಮಾನಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ. ಸಾರ್ವಜನಿಕರು ಸಹ ಅನುಮಾಸ್ಪದ ವ್ಯಕ್ತಿಗಳು ಕಂಡು ಬಂದರೆ ಠಾಣೆಗೆ ತಿಳಿಸುವಂತೆ ಮನವಿ ಮಾಡಿದರು.
ತಮಿಳುನಾಡಲ್ಲಿ ತಪ್ಪಿಸಿಕೊಂಡ ಉಗ್ರರು ಉಡುಪಿಯಲ್ಲಿ ಅರೆಸ್ಟ್