ಶಂಕಿತ ಉಗ್ರರು: ಬಂಡೀಪುರ ಚೆಕ್ ಪೋಸ್ಟ್‌ನಲ್ಲಿ ತೀವ್ರ ತಪಾಸಣೆ
ಗುಂಡ್ಲುಪೇಟೆ ತಾಲೂಕಿನ ಮದ್ದೂರು ಹಾಗೂ ಬಂಡೀಪುರ ತಪಾಸಣಾ ಕೇಂದ್ರದಲ್ಲಿ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ. ಕೇರಳ ಹಾಗೂ ತಮಿಳುನಾಡು ಕಡೆಯಿಂದ ಬರುವ ಎಲ್ಲ ವಾಹನಗಳ ತಪಾಸಣೆ ಹಾಗೂ ಎಲ್ಲಿಂದ ಬಂದಿರಿ, ಎಲ್ಲಿಗೆ ಹೋಗುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
ಚಾಮರಾಜನಗರ(ಜ.17): ಕೇರಳದಲ್ಲಿ ಸಂಕ್ರಾಂತಿ ಹಬ್ಬ ಮುನ್ನಾ ದಿನ ನಕ್ಸಲರು ರೆಸಾರ್ಟ್ ಮೇಲೆ ದಾಳಿ ನಡೆಸಿದ್ದು ಹಾಗೂ ಶಂಕಿತ ಉಗ್ರರೊಂದಿಗೆ ಒಡನಾಟ ಇದೆ ಎಂಬ ಮಾಹಿತಿ ಹಿನ್ನೆಲೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಹಾಗೂ ಬಂಡೀಪುರ ತಪಾಸಣಾ ಕೇಂದ್ರದಲ್ಲಿ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ.
ಬಂಡೀಪುರ ಕ್ಯಾಂಪಸ್ ಹಾಗೂ ತಾಲೂಕಿನ ಮದ್ದೂರು ಬಳಿಯ ಪೊಲೀಸ್ ತಪಾಸಣಾ ಕೇಂದ್ರಗಳಲ್ಲಿ ತಪಾಸಣೆಯನ್ನು ಪೊಲೀಸ್ ಸಿಬ್ಬಂದಿ ಆರಂಭಿಸಿದ್ದಾರೆ. ಕೇರಳ ಹಾಗೂ ತಮಿಳುನಾಡು ಕಡೆಯಿಂದ ಬರುವ ಎಲ್ಲ ವಾಹನಗಳ ತಪಾಸಣೆ ಹಾಗೂ ಎಲ್ಲಿಂದ ಬಂದಿರಿ, ಎಲ್ಲಿಗೆ ಹೋಗುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
ತಮಿಳುನಾಡಲ್ಲಿ ತಪ್ಪಿಸಿಕೊಂಡ ಉಗ್ರರು ಉಡುಪಿಯಲ್ಲಿ ಅರೆಸ್ಟ್
ಗುಂಡ್ಲುಪೇಟೆ ಠಾಣೆಯ ಸಬ್ ಇಸ್ಸ್‌ಪೆಕ್ಟರ್ ಲತ್ತೇಶ್ ಕುಮಾರ್ ಎರಡು ತಪಾಸಣಾ ಕೇಂದ್ರಗಳಗೆ ಭೇಟಿ ನೀಡಿ ತಪಾಸಣೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಹೊರ ರಾಜ್ಯದಿಂದ ಬರುವ ವಾಹನಗಳ ತಪಾಸಣೆ ಹಾಗೂ ಜನರ ಬಗ್ಗೆ ಅನುಮಾನ ಬಂದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.
ಕಿಚ್ಚು ಹಾಯಿಸುವಾಗ ಬೇಕಾಬಿಟ್ಟಿ ಓಡಿದ ಗೂಳಿ, ಜನರ ಗೋಳು ಕೇಳಿ..!