ಗೋಕಾಕ/ಹುನಗುಂದ: ಕ್ವಾರಂಟೈನ್‌ನಿಂದ ಎಸ್ಕೇಪ್‌ ಆದ​ವರ ಪತ್ತೆ, ಮತ್ತೆ ಕ್ವಾರಂಟೈ​ನ್‌

ಪರಾರಿಯಾಗಿದ್ದ ಮಹಿಳೆ ಸೇರಿ ಇಬ್ಬರನ್ನು ಪತ್ತೆ ಹಚ್ಚಿದ ಪೊಲೀಸರು| ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಕ್ವಾರಂಟೈನ್‌ ಕೇಂದ್ರಗಳಿಂದ ಪರಾರಿಯಾಗಿದ್ದ ಇಬ್ಬರು ವ್ಯಕ್ತಿಗಳು| ಮತ್ತೆ ಕ್ವಾರಂಟೈನ್‌ಗೆ ಹಾಕಿದ ಪೊಲೀಸರು| 

Police successful in Locating the two missing Quarantine Persons

ಗೋಕಾಕ/ಹುನಗುಂದ(ಮೇ.25): ಪ್ರತ್ಯೇಕ ಪ್ರಕರಣಗಳಲ್ಲಿ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಕ್ವಾರಂಟೈನ್‌ ಕೇಂದ್ರಗಳಿಂದ ಪರಾರಿಯಾಗಿದ್ದ ಮಹಿಳೆ ಸೇರಿ ಇಬ್ಬರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅವರನ್ನು ಕ್ವಾರಂಟೈನ್‌ ಮಾಡಿದ್ದಾರೆ. 

ಮಹಾರಾಷ್ಟ್ರದಿಂದ ಪೆರೋಲ್‌ ಮೇಲೆ ಬಿಡುಗಡೆಯಾಗಿದ್ದ ಗಂಡನನ್ನು ನೋಡಲು ಗೋಕಾಕಿನ ಕ್ವಾರೈಂಟನ್‌ ಕೇಂದ್ರದಿಂದ ಪರಾರಿಯಾಗಿದ್ದ ಗೋಕಾಕ ತಾಲೂಕಿನ ಪಂಜಾನಟ್ಟಿಯ ಮಹಿಳೆಯನ್ನು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದದಲ್ಲಿ ಪತ್ತೆ ಹಚ್ಚಿದ ಪೊಲೀಸರು ಮಗು, ಪತಿ ಸಮೇತ ಕ್ವಾರಂಟೈನ್‌ ಮಾಡಿದ್ದಾರೆ. 

ಬೆಳಗಾವಿ: ಹೋಂ ಕ್ವಾರಂಟೈನ್ ಮಾಡದಿದ್ದರೆ ಆತ್ಮಹತ್ಯೆ ಬೆದರಿಕೆ, ತಬ್ಬಿಬ್ಬಾದ ಅಧಿಕಾರಿಗಳು..!

ಇನ್ನು ಬಾಗಲಕೋಟೆಯ ಹುನಗುಂದದ ಕ್ವಾರಂಟೈನ್‌ ಕೇಂದ್ರದಿಂದ ನಾಪತ್ತೆಯಾಗಿದ್ದ ವ್ಯಕ್ತಿಯಲ್ಲಿ ವಿಜಯಪುರ ಜಿಲ್ಲೆಯ ಕನಕಲ್ಲ ಗ್ರಾಮದಲ್ಲಿ ಪತ್ತೆ ಹಚ್ಚಿದ ಪೊಲೀಸ್‌ರು ಮತ್ತೆ ಕ್ವಾರಂಟೈನ್‌ ಮಾಡಿ ಪ್ರಕರಣ ದಾಖಲಿಸಿದ್ದಾರೆ.
 

Latest Videos
Follow Us:
Download App:
  • android
  • ios