ಯಾದಗಿರಿ: ಅಕ್ಕಿ ಅಕ್ರಮಕ್ಕೆ ಖಾಕಿ ಕಾವಲು?
"ಅಕ್ಕಿ ಅಕ್ರಮದಲ್ಲಿ ಕೇಳಿಬಂದಿರುವ ವ್ಯಕ್ತಿಗೆ ಪೊಲೀಸ್ ಸನ್ಮಾನ" ಶೀರ್ಷಿಕೆಯಡಿ ಪ್ರಕಟಗೊಂಡ ಸುದ್ದಿ ಪೊಲೀಸ್ ವಲಯದಲ್ಲಿ ಭಾರಿ ಮುಜುಗರ ಮೂಡಿಸಿದ್ದರೆ, ಸಾರ್ವಜನಿಕ ವಲಯದಲ್ಲಿ ಖಾಕಿಪಡೆಯ ಕಾರ್ಯವೈಖರಿ ವ್ಯಾಪಕ ಟೀಕೆಗೊಳಗಾಗಿತ್ತು.
ಯಾದಗಿರಿ(ಡಿ.05): ಜಿಲ್ಲೆಯಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ ಹಾಗೂ ಶಹಾಪುರದ ಸರ್ಕಾರಿ ಗೋದಾಮಿನಿಂದ ಸುಮಾರು 2 ಕೋಟಿ ರು.ಗಳ ಅನ್ನಭಾಗ್ಯ ಅಕ್ಕಿ ದಾಸ್ತಾನು ನಾಪತ್ತೆ ಪ್ರಕರಣದ ಕುರಿತು ಡಿ.4 ರಂದು "ಕನ್ನಡಪ್ರಭ"ದಲ್ಲಿ ಪ್ರಕಟಗೊಂಡ ವರದಿ ಸಂಚಲನ ಮೂಡಿಸಿತ್ತು.
"ಅಕ್ಕಿ ಅಕ್ರಮದಲ್ಲಿ ಕೇಳಿಬಂದಿರುವ ವ್ಯಕ್ತಿಗೆ ಪೊಲೀಸ್ ಸನ್ಮಾನ" ಶೀರ್ಷಿಕೆಯಡಿ ಪ್ರಕಟಗೊಂಡ ಸುದ್ದಿ ಪೊಲೀಸ್ ವಲಯದಲ್ಲಿ ಭಾರಿ ಮುಜುಗರ ಮೂಡಿಸಿದ್ದರೆ, ಸಾರ್ವಜನಿಕ ವಲಯದಲ್ಲಿ ಖಾಕಿಪಡೆಯ ಕಾರ್ಯವೈಖರಿ ವ್ಯಾಪಕ ಟೀಕೆಗೊಳಗಾಗಿತ್ತು.
ಅನ್ನಭಾಗ್ಯ ಅಕ್ಕಿ ಅಕ್ರಮದಲ್ಲಿ ಕೇಳಿಬಂದಿರೋ ವ್ಯಕ್ತಿಗೆ ಪೊಲೀಸ್ ಸನ್ಮಾನ: ಫೋಟೋ ವೈರಲ್!
ಅಕ್ಕಿ ಅಕ್ರಮದಲ್ಲಿ ಕೇಳಿಬಂದಿರುವ ವ್ಯಕ್ತಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸನ್ಮಾನಿಸಿರುವ ಫೋಟೋ ವೈರಲ್ ಆಗಿ, ಅಕ್ಕಿ ಕಳ್ಳತನ ಪ್ರಕರಣದ ಕುರಿತು ಖಾಕಿಪಡೆಯನ್ನೇ ಅನುಮಾನದಿಂದ ನೋಡುವಂತಾಗಿದೆ ಎಂದು ಜನರು ಪ್ರತಿಕ್ರಿಯಿಸಿದ್ದರು. ಫೋಟೋದಲ್ಲಿದ್ದವರು ಅಕ್ಕಿ ಅಕ್ರಮದ ಪ್ರಕರಣದ ತನಿಖೆಯನ್ನು ಅದ್ಹೇಗೆ ನಡೆಸುತ್ತಾರೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದವು.
ಫೋಟೋದಲ್ಲಿ ಕಂಡುಬಂದಂತೆ, ಮಲ್ಲಿಕ್ ಎಂಬಾತನನ್ನು ಸನ್ಮಾನಿಸಿದ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ ಟೀಕಿಸಿದ್ದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಈ ಹಿಂದಿನ ಹಾಗೂ ಇತ್ತೀಚಿನ ಅಕ್ಕಿ ಅಕ್ರಮದ ಸಂಪೂರ್ಣ ತನಿಖೆಯನ್ನು ಸಿಐಡಿ ವಹಿಸುವಂತೆ ಆಗ್ರಹಿಸಿದ್ದರು. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.
ಅಕ್ಕಿ ಅಕ್ರಮದ ಹಿಂದೆ ಮಲ್ಲಿಕ್ ಎಂಬಾತನ ಕೈವಾಡದ ಜೊತೆಗೆ, ಆಹಾರ ಇಲಾಖೆಯ ಉಪ ನಿರ್ದೇಶಕ ಭೀಮರಾಯ ಎನ್ನುವವರ ಪಾತ್ರವೂ ಇದೆಯೆಂದು ಇಲಾಖೆಯ ಆಯುಕ್ತರಿಗೆ ದೂರಿದ್ದ ಪ್ರಾಂತ ರೈತ ಸಂಘದ ಚೆನ್ನಪ್ಪ ಆನೆಗುಂದಿ ಹಾಗೂ ಎಸ್ . ಎಂ. ಸಾಗರ್, ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದರೆ ತನಿಖಾಧಿಕಾರಿಗಳು ಸೇರಿದಂತೆ ಫೋಟೋದಲ್ಲಿ ಕಂಡುಬಂದಿರುವವರನ್ನು ದೂರವಿಟ್ಟು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಯಾದಗಿರಿ: ವಸತಿ ಶಾಲೆಯ 350ಕ್ಕೂ ಹೆಚ್ಚು ಮಕ್ಕಳಿಗೆ ವಿಚಿತ್ರ ಚರ್ಮರೋಗ, ಕಾರಣ ನಿಗೂಢ?
ಗಣ್ಯರ ಜೊತೆಗಿನ ಫೋಟೋಗಳೂ ವೈರಲ್..!
ಈ ಮಧ್ಯೆ, ಪೊಲೀಸರಿಂದ ಸನ್ಮಾನಿತಗೊಂಡ ವ್ಯಕ್ತಿಯ ಜೊತೆಗೆ ರಾಜಕೀಯ ಗಣ್ಯರು, ಪ್ರಭಾವಿಗಳು, ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಅನೇಕರನ್ನೊಳಗೊಂಡ ಹತ್ತಾರು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರವೂ ಹಂಚಿಕೆಯಾಗತೊಡಗಿದ್ದವು.
ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಆಯಕಟ್ಟಿನ ಸ್ಥಾನಗಳಿಗೆ ವರ್ಗಾವಣೆಯ ಭಾಗ್ಯ ಮಾಡಿಸುವಲ್ಲಿ ಈ ಪ್ರಭಾವಿ "ಕೈ" ಮೇಲುಗೈ ಎಂಬ ಮಾತುಗಳಿವೆ. ಹೀಗಾಗಿ, ಅಧಿಕಾರಿಗಳೊಡನೆ ಇವರ ಸಖ್ಯದಿಂದಾಗಿ ಇಂತಹ ಪ್ರಕರಣಗಳು ತನಿಖೆಯ ಬದಲು, ಅಲ್ಲಿಯೇ ಕೊನೆಗೊಳ್ಳುತ್ತವೆ ಎಂಬ ಆರೋಪಗಳಿವೆ.