Asianet Suvarna News Asianet Suvarna News

Hubballi: ಮಂಗಳೂರು ಸ್ಪೋಟದ ಬಳಿಕ ಅವಳಿ‌ ನಗರದಲ್ಲಿ ಹೈ ಅಲರ್ಟ್ ಆದ ಖಾಕಿ ಪಡೆ!

ಮಂಗಳೂರು ಸ್ಪೋಟದ‌ ಬಳಿಕ ಹುಬ್ಬಳ್ಳಿ-ಧಾರವಾಡ ಅವಳಿ‌ನಗರದ ಖಾಕಿ ಪಡೆ ಹೈ ಅಲರ್ಟ್ ಆಗಿದೆ. ನಂಬರ್ ಪ್ಲೇಟ್ ಇಲ್ಲದ, ಅನುಮಾನಸ್ಪದ ವಾಹನಗಳ ಕಾರ್ಯಾಚರಣೆಯನ್ನು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಮುಂದುವರೆಸಿದ್ದು, ರಸ್ತೆಗಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. 

Police on high alert in Hubballi Dharwad after Mangaluru bomb blast gvd
Author
First Published Nov 26, 2022, 1:30 AM IST

ಹುಬ್ಬಳ್ಳಿ (ನ.26): ಮಂಗಳೂರು ಸ್ಪೋಟದ‌ ಬಳಿಕ ಹುಬ್ಬಳ್ಳಿ-ಧಾರವಾಡ ಅವಳಿ‌ನಗರದ ಖಾಕಿ ಪಡೆ ಹೈ ಅಲರ್ಟ್ ಆಗಿದೆ. ನಂಬರ್ ಪ್ಲೇಟ್ ಇಲ್ಲದ, ಅನುಮಾನಸ್ಪದ ವಾಹನಗಳ ಕಾರ್ಯಾಚರಣೆಯನ್ನು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಮುಂದುವರೆಸಿದ್ದು, ರಸ್ತೆಗಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. 

ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ ನೇತೃತ್ವದಲ್ಲಿ ಮೂವತ್ತು ಜನರ ತಂಡವಾಗಿ ಪರಿಶೀಲನೆ ನಡೆಸಲು ಮುಂದಾಗಿದೆ. ತಡರಾತ್ರಿ ವೇಳೆಯಲ್ಲಿ 100ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಕೇಶ್ವಾಪುರ, ದಕ್ಷಿಣ, ಉತ್ತರ ಸಂಚಾರ, ಹಳೇ ಹುಬ್ಬಳ್ಳಿ, ಉಪನಗರ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಜಪ್ತಿ ಮಾಡಲಾಗಿದ್ದು, ವಾಹನಗಳಲ್ಲಿ ಸ್ಫೋಟಕ ವಸ್ತುಗಳ ಕುರಿತು ಸಹ ಪರಿಶೀಲನೆ ನಡೆಸಲಾಗುತ್ತಿದೆ. 

ಮಂಗಳೂರು ಸ್ಫೋಟದಿಂದ ಮಹಾನಗರದಲ್ಲೂ ಕಟ್ಟೆಚ್ಚರ!

ಒಟ್ಟಿನಲ್ಲಿ ನಗರದಲ್ಲಿ ಪೊಲೀಸ್ ಹೈ ಅಲರ್ಟ್ ಆಗಿದ್ದು, ವಿವಿಧ ಪೊಲೀಸ್ ಠಾಣಾ ಸ್ಥಳಗಳಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ನಂಬರ್ ಪ್ಲೇಟ್ ಅಷ್ಟೇ ಅಲ್ಲದೆ, ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲದೆ ಓಡಾಡುತ್ತಿದ್ದ ಅಂತಹ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲೂ ತಪಾಸಣೆ ನಡೆಸಲಾಗುತ್ತಿದ್ದು,‌ ನಗರದ ಪ್ರಮುಖ‌ ರಸ್ತೆ ಹಾಗೂ ಸರ್ಕಲ್‌ಗಳಲ್ಲಿ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆದಿದೆ. ವಿಶೇಷವಾಗಿ ಜನಸಂದಣಿಯ ಪ್ರದೇಶದಲ್ಲಿ ತೀವ್ರ ನಿಗವಹಿಸಲಾಗುತ್ತಿದೆ.

ಬಸ್‌ ತಡೆದು ಸಾರ್ವಜನಿಕರ ಪ್ರತಿಭಟನೆ: ಸಾರಿಗೆ ಬಸ್‌ ಸರಿಯಾಗಿ ಬರುತ್ತಿಲ್ಲ, ಬಂದರೂ ಕೂಡಾ ರಾಷ್ಟ್ರೀಯ ಹೆದ್ದಾರಿ ಮೇಲೆ ನಿಲ್ಲುವದು, ಸ್ಟೇಜ್‌ ಹೆಚ್ಚಿನ ಬೆಲೆ ನೀಡಬೇಕಾಗಿದೆ. ವಿದ್ಯಾರ್ಥಿಗಳು ಕೈ ಮಾಡಿದರೂ ಬಸ್‌ ನಿಲ್ಲುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಕಡಹಳ್ಳಿ ಕ್ರಾಸ್‌ನಲ್ಲಿ ವಿದ್ಯಾರ್ಥಿಗಳು, ಪಾಲಕರು ಬಸ್‌ ತಡೆದು ಪ್ರತಿಭಟಿಸಿದರು. ಕಡಹಳ್ಳಿ ಕ್ರಾಸ್‌ದಿಂದ ಶಿಗ್ಗಾಂವಿಗೆ ಹೋಗಲು ಸರಿಯಾದ ಬಸ್‌ ವ್ಯವಸ್ಥೆ ಇಲ್ಲ, ಅಲ್ಲದೆ ನಮ್ಮಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುವುದುನ್ನು ತಡೆಯಬೇಕು, ಮಾಡುತ್ತಿದ್ದನ್ನು ತಡೆಯಬೇಕು, ಸ್ಟೇಜ್‌ ದರವನ್ನು ನಿಗದಿಯಾಗಬೇಕು, ಗ್ರಾಮೀಣ ಪ್ರದೇಶವಾಗಿದ್ದರಿಂದ ಹೆಚ್ಚಿನ ಬಸ್ಸಿನ ವ್ಯವಸ್ಥೆಯನ್ನು ಮಾಡಬೇಕು.

ಬಸ್‌ ಯಾವಾಗಲೂ 5-10 ನಿಮಿಷಗಳು ತಡವಾಗುವುದನ್ನು ಸಹಿಸಬಹುದು ಆದರೆ ಮೊದಲೆ ಬಸ್‌ ಬಿಡುತ್ತಿದ್ದಾರೆ. ಬಸ್‌ ಸರಿಯಾದ ವೇಳೆಗೆ ಮುಂಚಿತವಾಗಿ ಬಿಡುವುದನ್ನು ಪ್ರಶ್ನಿಸಿದ್ದಕ್ಕೆ ಅಸಭ್ಯವಾಗಿ ಸಾರಿಗೆ ನಿರ್ವಾಹಕರು ವರ್ತಿಸಿ ವಿದ್ಯಾರ್ಥಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತಕ್ಷಣ ಹೆದ್ದಾರಿಯಂದ ಕೆಳಗೆ ಬಂದು ಬಸ್‌ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಕಡಹಳ್ಳಿ ಕ್ರಾಸ್‌ನಲ್ಲಿ ಸಾಕಷ್ಟುಎತ್ತರವಾದ ಬ್ರಿಜ್‌ ಇದ್ದುದರಿಂದ ಸರ್ವಿಸ್‌ ಲೈನ್‌ನಲ್ಲಿ ಬರಬೇಕೆಂದು ಇದರಿಂದ ಸಾಕಷ್ಟುಪ್ರಮಾಣದಲ್ಲಿ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ನಿವಾರಿಸಿದಂತಾಗುತ್ತದೆ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.

Hubballi: ರೈಲಿನಲ್ಲಿ ಆಂಧ್ರ ವ್ಯಕ್ತಿಯ ಬರ್ಬರ ಹತ್ಯೆ: ಎರಡು ವಾರ ಕಳೆದರೂ ಪತ್ತೆಯಾಗದ ಹಂತಕರ ಸುಳಿವು

ಜಿಲ್ಲಾಧಿಕಾರಿಗಳ ನಡೆ ಕಾರ್ಯಕ್ರಮದಲ್ಲಿ ಸಾರಿಗೆ ಬಸ್‌ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಜೊತೆಗೆ ಇದರ ವಿಚಾರಾಗಿ ಸಾರಿಗೆ ಅಧಿಕಾರಿಗಳಿಗೆ ಸಾಕಷ್ಟುಬಾರಿ ಮನವಿ ಹಾಗೂ ಮೌಖಿಕವಾಗಿ ವಿನಂತಿಸಿದರೂ ಪ್ರಯೋಜನವಾಗಿಲ್ಲ ಎಂದು ಆಗ್ರಹಿಸಿದ ವಿದ್ಯಾರ್ಥಿಗಳು, ಜಿಲ್ಲಾಧಿಕಾರಿಗಳು ಸಂಪರ್ಕ ಸಭೆಯನ್ನು ಯಾಕೆ ಮಾಡಬೇಕು, ಮನವಿಯನ್ನು ಯಾಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದರು.

Follow Us:
Download App:
  • android
  • ios