Hubballi: ರೈಲಿನಲ್ಲಿ ಆಂಧ್ರ ವ್ಯಕ್ತಿಯ ಬರ್ಬರ ಹತ್ಯೆ: ಎರಡು ವಾರ ಕಳೆದರೂ ಪತ್ತೆಯಾಗದ ಹಂತಕರ ಸುಳಿವು
ಗುಂತಕಲ್ಲ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನಲ್ಲಿ ನವೆಂಬರ್ 10ರಂದು ಆಂಧ್ರಪ್ರದೇಶ ಮೂಲದ ವ್ಯಕ್ತಿಯ ಬರ್ಬರ ಹತ್ಯೆ ಮಾಡಿದ್ದ ಹಂತಕರ ಸುಳಿವು ಇನ್ನೂ ರೈಲ್ವೆ ಪೊಲೀಸರಿಗೆ ಪತ್ತೆಯಾಗಿಲ್ಲ. ಪ್ರಕರಣ ದಾಖಲಾಗಿ ಎರಡು ವಾರ ಕಳೆದರೂ ಹಂತಕರ ಸುಳಿವು ಮಾತ್ರ ಸಿಗದೇ ಇರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ (ನ.25): ಗುಂತಕಲ್ಲ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನಲ್ಲಿ ನವೆಂಬರ್ 10ರಂದು ಆಂಧ್ರಪ್ರದೇಶ ಮೂಲದ ವ್ಯಕ್ತಿಯ ಬರ್ಬರ ಹತ್ಯೆ ಮಾಡಿದ್ದ ಹಂತಕರ ಸುಳಿವು ಇನ್ನೂ ರೈಲ್ವೆ ಪೊಲೀಸರಿಗೆ ಪತ್ತೆಯಾಗಿಲ್ಲ. ಪ್ರಕರಣ ದಾಖಲಾಗಿ ಎರಡು ವಾರ ಕಳೆದರೂ ಹಂತಕರ ಸುಳಿವು ಮಾತ್ರ ಸಿಗದೇ ಇರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ನೇಕಾರಿಕೆ ಮಾಡಿಕೊಂಡಿದ್ದ ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆ ಅದೋನಿಯ ಹನುಮಾನ ನಗರ ನಿವಾಸಿ ಆಂಜನೇಯ ಲಕ್ಷ್ಮಣ ಸಾಂದೋಪ (50) ಎಂಬುವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರು.
ನವೆಂಬರ್. 10ರಂದು ಗುಂತಕಲ್-ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೇಶನ್ (07338) ರೈಲಿನ ಸಾಮಾನ್ಯ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದ ಇವರನ್ನು ಹಂತಕರು ರಾತ್ರಿ ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ್ದರು. ಇನ್ನೂ ಹತ್ಯೆಗೆ ಸಂಬಂಧಿಸಿ ಪ್ರತ್ಯೇಕ ಎರಡು ತಂಡಗಳಲ್ಲಿ ತನಿಖೆ ನಡೆಸುತ್ತಿರುವ ರೈಲ್ವೆಯ ಪೊಲೀಸ್ ತನಿಖಾಧಿಕಾರಿಗಳು, ಕೊಲೆಯಾದ ಆಂಜನೇಯ ಅವರ ನಿವಾಸಕ್ಕೂ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಅವರ ಕುಟುಂಬದ ಮೂಲಗಳ ಪ್ರಕಾರ ಇವರೊಂದಿಗೆ ವೈಯಕ್ತಿಕವಾಗಿ ಯಾರ ದ್ವೇಷ, ಹಗೆತನ ಇರಲಿಲ್ಲ.
ಎಡಿಜಿಪಿ ಅಲೋಕ್ ಕುಮಾರ್‌ಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ ಹಾಗೂ ಮುರುಘಾ ಶ್ರೀ ಆಪ್ತ ಜಿತೇಂದ್ರ
ಯಾರು ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದು ನಮಗೂ ತಿಳಿಯುತ್ತಿಲ್ಲವೆಂದು ಎಂದು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ತನಿಖಾ ತಂಡ ಈಗಾಗಲೇ ಅದೋನಿಯಿಂದ ಬಳ್ಳಾರಿ ಹಾಗೂ ಗುಂತಕಲ್ಲದಿಂದ ಹುಬ್ಬಳ್ಳಿ ವರೆಗಿನ ಮಾರ್ಗಮಧ್ಯದಲ್ಲಿನ ಎಲ್ಲ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿನ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಹಾಗೂ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಸಿದ್ದರಾಮಯ್ಯ ಅಡ್ರೆಸ್ ಇಲ್ಲದಂತಾಗುತ್ತಾರೆ: ಬಿಎಸ್‌ವೈ
ಆದರೆ ಇದುವರೆಗೂ ಹಂತಕರ ಕುರಿತು ಖಚಿತ ಸುಳಿವು ದೊರೆತಿಲ್ಲ ಹಾಗೂ ಅಷ್ಟೇ ಅಲ್ಲದೆ ಕೊಲೆಗೆ ನಿಖರ ಕಾರಣ ಸಹ ತಿಳಿದು ಬಂದಿಲ್ಲ. ಆರೋಪಿಗಳ ಪತ್ತೆ ಹಚ್ಚುವುದು ರೈಲ್ವೆ ಇಲಾಖೆಗೆ ದೊಡ್ಡ ಸವಾಲಿ ಕೆಲಸವಾಗಿದೆ. ಸಾವಿರಾರು ಜನ ಪ್ರಯಾಣಿಕರು ಇರುವ ರೈಲ್ವಿನಲ್ಲಿಯೇ ಇಷ್ಟೊಂದು ಭೀಕರವಾಗಿ ಕೊಲೆ ನಡೆದ್ರು ಪತ್ತೆ ಹಚ್ಚಲು ಆಗದಿದ್ದರೆ ಪ್ರಯಾಣಿಕರ ಸುರಕ್ಷತೆ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.