ಪ್ರಮುಖ ಆರೋಪಿ ಮೊಹಮ್ಮದ್‌ ಶಾರೀಕ್‌, ಮಾಝ್‌ ಮುನೀರ್‌ ಹಾಗೂ ಸಾದಿಕ್‌ ಎಂಬವರ ಬಂಧನ| ಪೊಲೀಸ್‌ ಕಸ್ಟಡಿಯಲ್ಲಿದ್ದರೆ, ಸಾದಿಕ್‌ ನ್ಯಾಯಾಂಗ ಬಂಧನ| ವಿದೇಶಾಂಗ ಇಲಾಖೆ ಮೂಲಕ ಲುಕ್‌ ಔಟ್‌ ನೋಟಿಸ್‌ ಜಾರಿ| 

ಮಂಗಳೂರು(ಡಿ.18): ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳ ಜೊತೆ ನಂಟು ಹೊಂದಿರುವ ವಿದೇಶದಲ್ಲಿರುವ ವ್ಯಕ್ತಿಯನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಮಂಗಳೂರು ಪೊಲೀಸರು ಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಲು ತೀರ್ಮಾನಿಸಿದ್ದಾರೆ. 

ಈಗಾಗಲೇ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಮೊಹಮ್ಮದ್‌ ಶಾರೀಕ್‌, ಮಾಝ್‌ ಮುನೀರ್‌ ಹಾಗೂ ಸಾದಿಕ್‌ ಎಂಬವರನ್ನು ಬಂಧಿಸಲಾಗಿದೆ. ಇವರಲ್ಲಿ ಶಾರೀಕ್‌ ಮತ್ತು ಮಾಝ್‌ ಪೊಲೀಸ್‌ ಕಸ್ಟಡಿಯಲ್ಲಿದ್ದರೆ, ಸಾದಿಕ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. 

ಮಂಗಳೂರು ಉಗ್ರ ಗೋಡೆ ಬರಹ ಪ್ರಕರಣದ ಆರೋಪಿಗೆ ವಿದೇಶಿ ಹಣ?

ಕಸ್ಟಡಿ ವಿಚಾರಣೆ ವೇಳೆ ಶಾರೀಕ್‌ ನೀಡಿದ ಮಾಹಿತಿಯಂತೆ, ಇವರಿಬ್ಬರು ಗೋಡೆ ಬರಹ ಘಟನೆಗೂ ಮುನ್ನ ವಿದೇಶದಲ್ಲಿರುವ ವ್ಯಕ್ತಿಯೊಬ್ಬನ ಜೊತೆ ದೂರವಾಣಿ ಸಂಪರ್ಕದಲ್ಲಿದ್ದರು. ಆತನ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿದೇಶಾಂಗ ಇಲಾಖೆ ಮೂಲಕ ಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಬೇಕಾಗಿದೆ. ಈ ವಿಚಾರವನ್ನು ನಗರ ಪೊಲೀಸ್‌ ಕಮಿಷನರ್‌ ವಿಕಾಶ್‌ ಕುಮಾರ್‌ ತಿಳಿಸಿದ್ದಾರೆ.