Asianet Suvarna News Asianet Suvarna News

ಧಾರವಾಡ‌: ವಾಹನ ಚಾಲನೆ ಮಾಡುವಾಗಲೇ ಹೃದಯಾಘಾತ, ಕರ್ತವ್ಯನಿರತ ಪೊಲೀಸ್ ಪೇದೆ ಸಾವು

ವಾಹನ ಚಾಲನೆ ಮಾಡುವಾಗಲೇ ಎದೆನೋವು ಕಾಣಿಸಿಕೊಂಡಿತ್ತು.  ತಕ್ಷಣ ವಾಹನವನ್ನ ರಸ್ತೆ ಪಕ್ಷ ನಿಲ್ಲಿಸಿದ್ದರು ಬಸವರಾಜ. ವಾಹನ ನಿಲ್ಲಿಸುತಿದ್ದಂತೆ ತೀವ್ರ ಹೃದಯಾಘಾತದಿಂದ ಬಸವರಾಜ ಮೃತಪಟ್ಟಿದ್ದಾರೆ. 

police constable Dies due to Heart attack in Dharwad grg
Author
First Published Aug 31, 2024, 10:35 PM IST | Last Updated Aug 31, 2024, 10:35 PM IST

ಧಾರವಾಡ‌(ಆ.31):  ಹೃದಯಾಘಾತದಿಂದ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ ಘಟನೆ ನಗರದ ಜಿಲ್ಲಾ  ನ್ಯಾಯಾಲಯದ ಬಳಿ ಇಂದು(ಶನಿವಾರ) ನಡೆದಿದೆ. ಬಸವರಾಜ ವಿಠ್ಠಲಾಪುರ ಸಾವನ್ನಪ್ಪಿದ ದುರ್ದೈವಿ. 

ಗದಗ ಸಶಸ್ತ್ರ ಮೀಸಲು ಪಡೆ ಪೊಲೀಸ್ ವಾಹನ ಚಾಲಕರಾಗಿದ್ದ ಬಸವರಾಜ ವಿಠ್ಠಲಾಪುರ ಅವರು ಗದಗನಿಂದ ಧಾರವಾಡಕ್ಕೆ ಕೈದಿ ಬಿಡಲು ಬಂದಿದ್ದರು. 

ಉಪ್ಪು, ಸಕ್ಕರೆ ಎರಡನ್ನೂ ಅವೈಡ್ ಮಾಡಿದರೆ ಹಾರ್ಟ್ ಅಟ್ಯಾಕ್ ಅಪಾಯ ತಗ್ಗಿಸಬಹುದು ನೋಡಿ!

ವಾಹನ ಚಾಲನೆ ಮಾಡುವಾಗಲೇ ಎದೆನೋವು ಕಾಣಿಸಿಕೊಂಡಿತ್ತು.  ತಕ್ಷಣ ವಾಹನವನ್ನ ರಸ್ತೆ ಪಕ್ಷ ನಿಲ್ಲಿಸಿದ್ದರು ಬಸವರಾಜ. ವಾಹನ ನಿಲ್ಲಿಸುತಿದ್ದಂತೆ ತೀವ್ರ ಹೃದಯಾಘಾತದಿಂದ ಬಸವರಾಜ ಮೃತಪಟ್ಟಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos
Follow Us:
Download App:
  • android
  • ios