ಎಲೆಕ್ಟ್ರಾನಿಕ್‌ ಸಿಟಿಗೆ ಮೆಟ್ರೋ ಮತ್ತಷ್ಟು ಕಾಲ ವಿಳಂಬ: ಯಾಕೆ ಗೊತ್ತಾ?

ಎಲೆಕ್ಟ್ರಾನಿಕ್‌ ಸಿಟಿಯ ಟೆಕ್ಕಿಗಳು ತಮ್ಮ ಕಚೇರಿಗಳಿಗೆ ಮೆಟ್ರೋ ಮೂಲಕ ತೆರಳಲು ಮತ್ತಷ್ಟು ಕಾಲ ಕಾಯುವುದು ಅನಿವಾರ್ಯವಾಗಿದೆ. ಬೆಂಗಳೂರು ಮೆಟ್ರೋ ರೈಲ್ವೆ ನಿಗಮಕ್ಕೆ ಚೀನಾದಿಂದ ಪೂರೈಕೆ ಆಗಬೇಕಿದ್ದ ಹೊಸ ಸ್ವರೂಪದ ಮೂಲ ಮಾದರಿಯ ಎರಡು ಸೆಟ್‌ ಬೋಗಿಗಳ ಪೂರೈಕೆ ವಿಳಂಬ.

Namma Metro to Electronic City delayed further gvd

ಬೆಂಗಳೂರು (ಆ.24): ಎಲೆಕ್ಟ್ರಾನಿಕ್‌ ಸಿಟಿಯ ಟೆಕ್ಕಿಗಳು ತಮ್ಮ ಕಚೇರಿಗಳಿಗೆ ಮೆಟ್ರೋ ಮೂಲಕ ತೆರಳಲು ಮತ್ತಷ್ಟು ಕಾಲ ಕಾಯುವುದು ಅನಿವಾರ್ಯವಾಗಿದೆ. ಬೆಂಗಳೂರು ಮೆಟ್ರೋ ರೈಲ್ವೆ ನಿಗಮಕ್ಕೆ ಚೀನಾದಿಂದ ಪೂರೈಕೆ ಆಗಬೇಕಿದ್ದ ಹೊಸ ಸ್ವರೂಪದ ಮೂಲ ಮಾದರಿಯ ಎರಡು ಸೆಟ್‌ ಬೋಗಿಗಳ ಪೂರೈಕೆ ವಿಳಂಬ ಆಗುತ್ತಿದ್ದು, ಈ ಕಾರಣದಿಂದ ಡಿಸೆಂಬರ್‌ಗೆ ಆರಂಭವಾಗ ಬೇಕಿದ್ದ ಆರ್‌.ವಿ.ರಸ್ತೆ-ಬೊಮ್ಮಸಂದ್ರ (ಹಳದಿ ಮಾರ್ಗ) ಮಾರ್ಗ 2024ರ ಮಾರ್ಚ್‌-ಏಪ್ರಿಲ್‌ಗೆ ಮುಂದೂಡಿಕೆಯಾಗಿದೆ. ಪರಿಣಾಮ ಕೆ.ಆರ್‌.ಪುರ-ವೈಟ್‌ಫೀಲ್ಡ್‌ನ ಬಳಿಕ ನಮ್ಮ ಮೆಟ್ರೋದ ಎರಡನೇ ಐಟಿ ಕಾರಿಡಾರ್‌ ಎನ್ನಿಸಿಕೊಳ್ಳಲಿರುವ ಎಲೆಕ್ಟ್ರಾನಿಕ್‌ ಸಿಟಿಗೆ ಮೆಟ್ರೋ ಸಂಪರ್ಕ ಮತ್ತಷ್ಟುವಿಳಂಬವಾಗುತ್ತಿದೆ. 

ಅಂದುಕೊಂಡಂತೆ ಆಗಿದ್ದರೆ 18.2 ಕಿ.ಮೀ. ಈ ಮಾರ್ಗದಲ್ಲಿ ವರ್ಷಾಂತ್ಯದಿಂದಲೇ ಮೆಟ್ರೋ ಸೇವೆ ಶುರುವಾಗಬೇಕಿತ್ತು. 2021ರಿಂದ ಹಳದಿ ಮಾರ್ಗ ಕಾರ್ಯಾರಂಭ ನಿಗದಿತ ಅವಧಿ ಮುಂದೂಡಿಕೆ ಆಗುತ್ತಲೇ ಇದ್ದು, ಈಗ ಮತ್ತೊಮ್ಮೆ ಡೆಡ್‌ಲೈನ್‌ ಮೀರಿದೆ. ಡೆಡ್‌ಲೈನ್‌ ಪ್ರಕಾರ ಒಪ್ಪಂದವಾದ 173 ವಾರಗಳಲ್ಲಿ ಸಿಆರ್‌ಆರ್‌ಸಿ ಬೋಗಿಗಳನ್ನು ಪೂರೈಸಬೇಕಿತ್ತು. ಆದರೆ, ಕೋವಿಡ್‌, ಎಫ್‌ಡಿಐ ಪಾಲಿಸಿ, ವ್ಯಾಪಾರ ನಿರ್ಬಂಧ, ಉಪಗುತ್ತಿಗೆ ಕಂಪನಿಯ ಹುಡುಕಾಟ ಸೇರಿ ಹಲವು ಕಾರಣಗಳಿಂದ ಇದು ಸಾಧ್ಯವಾಗಿಲ್ಲ. ಈ ಸೆಪ್ಟೆಂಬರ್‌ಗೂ ಬೋಗಿಗಳು ಬರುವ ನಿರೀಕ್ಷೆ ಹುಸಿಯಾಗಿದ್ದು, ಮುಂದಿನ ಅಕ್ಟೋಬರ್‌ ಎರಡನೇ ವಾರದ ಬಳಿಕ ಮೊದಲ ಸೆಟ್‌ನ ಬೋಗಿಗಳು ಚೀನಾದಿಂದ ಬರುತ್ತಿವೆ.

ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಯತ್ನ: ಕುಖ್ಯಾತ ರೌಡಿಗಳ ವಿರುದ್ಧ ಎಫ್ಐಆರ್

ಈ ಬೋಗಿಗಳು ಬಂದ ನಂತರ ಸುರಕ್ಷತಾ ಮಾರ್ಗಸೂಚಿ ಅನ್ವಯ ವಿವಿಧ ತಪಾಸಣೆ ಹಾಗೂ ಪ್ರಾಯೋಗಿಕ ಸಂಚಾರ ಆಗಲೇಬೇಕು. ಆರಂಭದಲ್ಲಿ ಲಕ್ನೋದಲ್ಲಿರುವ ರೈಲ್ವೇ ಇಲಾಖೆಯ ಆರ್‌ಡಿಎಸ್‌ಒ ( ರಿಸಚ್‌ರ್‍, ಡಿಸೈನ್‌ ಆ್ಯಂಡ್‌ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್‌) ಇದರ ತಪಾಸಣೆ ನಡೆಸಲಿದೆ. ಇದಕ್ಕೆ ಕನಿಷ್ಠ 3 ತಿಂಗಳು ಕಾಲಾವಧಿ ಹಿಡಿಯಲಿದೆ. ಹೀಗಾಗಿ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಡಿಸೆಂಬರ್‌ನಿಂದ ಆರಂಭವಾಗುವುದು ಕಷ್ಟಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಬೋಗಿಗಳ ಶೇ.35ರಷ್ಟುವಿವಿಧ ಬಿಡಿ ಭಾಗಗಳು ಬೇರೆಡೆಯಿಂದಲೇ ತರಿಸಿಕೊಳ್ಳಬೇಕಾಗುತ್ತದೆ. ಈ ಕಾರಣದಿಂದಲೂ ರೈಲ್ವೇ ಬೋಗಿಗಳ ಪೂರೈಕೆ ವಿಳಂಬವಾಗುತ್ತಿದೆ. ಈ ಮೊದಲು ಆಲ್ಯುಮಿನಿಯಂ ಬೋಗಿ ಗಳನ್ನು ತೀತಾಘರ್‌ ವ್ಯಾಗನ್‌ ಕಂಪನಿ ನಿರ್ಮಿಸುತ್ತಿತ್ತು. ಇದೀಗ ಸ್ಟೀಲ್‌ ಬೋಗಿಗಳನ್ನು ರೂಪಿಸುತ್ತಿದೆ.

ಒಟ್ಟಾರೆ, 216 ಬೋಗಿಗಳ ಪೈಕಿ 126 ಬೋಗಿಗಳನ್ನು (21 ರೈಲು) ನೇರಳೆ ಹಾಗೂ ಹಸಿರು ಮಾರ್ಗಕ್ಕೆ ಬಳಸಲಾಗುತ್ತಿದೆ. ಉಳಿದ 90 ಬೋಗಿಗಳನ್ನು (15 ರೈಲು) ಹಳದಿ ಮಾರ್ಗಕ್ಕೆ ಬಳಸಲು ನಿರ್ಧಾರವಾಗಿದೆ. ಆರಂಭಿಕ ಹಂತದಲ್ಲಿ ತೀತಾಘರ್‌ ವ್ಯಾಗನ್‌ ಕಂಪನಿ ಸುಮಾರು 8-10 ರೈಲುಗಳನ್ನು ಹಳದಿ ಮಾರ್ಗಕ್ಕಾಗಿ ನೀಡಲಿದೆ. 2024ರ ಜುಲೈ ಅಂತ್ಯದೊಳಗೆ ಎಲ್ಲಾ ಬೋಗಿಗಳು ಪೂರೈಕೆಯಾಗುವ ಸಾಧ್ಯತೆಯಿದೆ. ಇನ್ನು, ಹೊಸ ಹಳದಿ ಮಾರ್ಗದ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮೆಟ್ರೋದ 16 ನಿಲ್ದಾಣಗಳ ನಿರ್ಮಾಣ ಸೇರಿ ಕಾಮಗಾರಿ ಶೇ.98ರಷ್ಟುಪೂರ್ಣಗೊಂಡಿದ್ದು, ಸಿವಿಲ್‌ ಕಾಮಗಾರಿಗಳು ಸೆಪ್ಟೆಂಬರ್‌ ಒಳಗೆ ಪೂರ್ಣ ಗೊಳ್ಳಲಿವೆ. ಬಳಿಕ ಸಿಗ್ನಲಿಂಗ್‌, ಹಳಿ ಜೋಡಣೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಆಂಧ್ರದಿಂದ ಬೆಂಗಳೂರಿಗೆ ಬಂದು ಸೀರೆ ಕದಿಯುತ್ತಿದ್ದ ಗ್ಯಾಂಗ್‌ ಅರೆಸ್ಟ್!

ಉಪಗುತ್ತಿಗೆ ಪಡೆದ ಕಲ್ಕತ್ತಾ ಕಂಪನಿನಿಂದ ಪೂರೈಕೆ: 2019ರಲ್ಲಿ ಸಿಆರ್‌ಆರ್‌ಸಿ (ಚೈನಾ ರೈಲ್ವೇ ರೋಲಿಂಗ್‌ ಸ್ಟಾಕ್‌ ಕಾರ್ಪೋರೆಷನ್‌) ನಾನ್ಜಿಂಗ್‌ ಪುಜೆನ್‌ ಕಂಪನಿ ಜೊತೆಗೆ ನಮ್ಮ ಮೆಟ್ರೋ 216 ಬೋಗಿಗಳ (36 ರೈಲು) ಪೂರೈಸುವ ಒಪ್ಪಂದವಾಗಿತ್ತು. ಮೂಲ ಮಾದರಿಯ ಆರು ಬೋಗಿಗಳ ಎರಡು ಸೆಟ್‌ನ್ನು ಚೀನಾ ಕಳಿಸಿದ ಬಳಿಕ ಸಿಆರ್‌ಆರ್‌ಸಿಯಿಂದ ಉಪಗುತ್ತಿಗೆ ಪಡೆದ ಕಲ್ಕತ್ತಾದ ಉತ್ತರಪುರ ಬಳಿಯ ತೀತಾಘರ್‌ ವ್ಯಾಗನ್‌ ಕಂಪನಿಯು 204 ಬೋಗಿಗಳನ್ನು (34 ರೈಲು) ಅದೇ ಮಾದರಿಯಲ್ಲಿ ನಿರ್ಮಿಸಿ ಪೂರೈಸಬೇಕಿದೆ.

Latest Videos
Follow Us:
Download App:
  • android
  • ios