ದಾವಣಗೆರೆ, [ಡಿ.03]: ಬಂದ್ ವೇಳೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಆರೋಪದ ಮೇಲೆ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನ ಪೊಲೀಸರು ಬಂಧಿಸಿದ್ದಾರೆ.

ಸಮರ್ಪಕ ಮರಳು ಪೂರೈಕೆ ಹಾಗೂ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳನ್ನು ಬರ ಪೀಡಿತವನ್ನಾಗಿ ಘೋಷಣೆ ಮಾಡುವಂತೆ ರೇಣುಕಾಚಾರ್ಯ  ಅವರು ಇಂದು [ಸೋಮವಾರ]  ಮತಿ ಹಾಗೂ ಹೊನ್ನಾಳಿ ಬಂದ್ ಗೆ ಕರೆ ನೀಡಿದ್ದರು. 

ಅಲ್ಲದೇ ಶನಿವಾರ ನ್ಯಾಮತಿ ತಾಲೂಕಿನಲ್ಲಿ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿತ್ತು. ಹೀಗಾಗಿ ಸೋಮವಾರ  ಸಮರ್ಪಕ‌ ಮರಳು ಪೂರೈಕರ ಹಾಗೂ ಅವಳಿ ತಾಲ್ಲೂಕನ್ನು ಬರ ಪೀಡಿತ ಘೋಷಣೆ ಮಾಡುವಂತೆ ಆಗ್ರಹಿಸಿ ಹೊನ್ನಾಳಿ ಬಂದ್‍ಗೆ ಕರೆ ಕೊಟ್ಟಿದ್ದರು.

ಆದ್ರೆ ಬಂದ್ ವೇಳೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರಿಂದ ರೇಣುಕಾಚಾರ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡರು.