Asianet Suvarna News Asianet Suvarna News

PM Modi Birthday; ಉಡುಪಿಯಲ್ಲಿ ಮೋದಿ ಅಭಿಮಾನಿಯಿಂದ ದೇಹ ದಾನಕ್ಕೆ ಸಹಿ

  ಉಡುಪಿಯ ಅಭಿಮಾನಿ ಶಿಲ್ಪಾ ಅವರು ಮೋದಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದೇಹವನ್ನೇ ದಾನ ಮಾಡಿದ್ದಾರೆ. ಮಣಿಪಾಲ ಕೆಎಂಸಿ ವೈದ್ಯಕೀಯ ವಿಭಾಗಕ್ಕೆ ತನ್ನ ದೇಹ ದಾನ ಮಾಡುವುದಾಗಿ ಸಹಿ ಹಾಕಿದ್ದಾರೆ.

PM Modi birthday special Udupi female Fan  Shilpa signed for Body donation gow
Author
First Published Sep 17, 2022, 8:00 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.17): ಇಂದು ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿಯ ಹುಟ್ಟುಹಬ್ಬದ್ದೇ ಮೋಡಿ. ಅದರಲ್ಲೂ ಕರ್ನಾಟಕ ಕರಾವಳಿ ಜಿಲ್ಲೆ ಅಂದ್ರೆ ಕೇಳಬೇಕೇ? ಬಿಜೆಪಿಯ ಭದ್ರಕೋಟೆಯಾಗಿರುವ ಉಡುಪಿ ಜಿಲ್ಲೆಯಲ್ಲಿಯಂತೂ ವರ್ಣರಂಜಿತವಾಗಿ ಪ್ರಧಾನಿ ಮೋದಿ ಅವರ ಹುಟ್ಟಿದ ದಿನವನ್ನು ಆಚರಿಸಲಾಗುತ್ತಿದೆ. ಅಲ್ಲಲ್ಲಿ ರಕ್ತದಾನ ಶಿಬಿರಗಳು , ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಸ್ವಚ್ಛತಾ ಅಭಿಯಾನಗಳು ಏರ್ಪಟ್ಟಿವೆ. ಪ್ರಧಾನಿ ಮೋದಿಗೆ ಅಭಿಮಾನಿಗಳಿಗೇನು ಕೊರತೆ ಇಲ್ಲ.  ಮೋದಿ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಿದ್ದಾರೆ. ಉಡುಪಿಯ ಅಭಿಮಾನಿ ಶಿಲ್ಪಾ ಅವರು ಮೋದಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದೇಹವನ್ನೇ ದಾನ ಮಾಡಿದ್ದಾರೆ. ಪ್ರಧಾನಿ ಮೋದಿ ಹುಟ್ಟುಹಬ್ಬ ದೇಶದಲ್ಲಿ ಒಂದು ವಾರ ಆಚರಣೆಯಾಗಲಿದೆ. ಪ್ರಧಾನಿ ಮೋದಿಗೆ ದೇಶಾದ್ಯಂತ ಹುಚ್ಚು ಅಭಿಮಾನಿಗಳಿದ್ದಾರೆ. ಈ ನಡುವೆ ಉಡುಪಿಯ ಅಪ್ಪಟ ಅಭಿಮಾನಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ದಿನ ತನ್ನ ದೇಹವನ್ನು ದಾನ ಮಾಡಿದ್ದಾರೆ. ಮಣಿಪಾಲ ಕೆಎಂಸಿ ವೈದ್ಯಕೀಯ ವಿಭಾಗಕ್ಕೆ ತನ್ನ ದೇಹ ದಾನ ಮಾಡುವುದಾಗಿ ಸಹಿ ಹಾಕಿದ್ದಾರೆ.

ದೇಹ ದಾನಕ್ಕೆ ಅನೇಕ ಕಟ್ಟುನಿಟ್ಟಿನ ನಿಯಮಗಳಿವೆ. ಪ್ರಧಾನಿ ನರೇಂದ್ರ ಮೋದಿಯ ದೊಡ್ಡ ಅಭಿಮಾನಿಯಾಗಿರುವ ಶಿಲ್ಪಾ ಸಾಲಿಯಾನ್ ದೇಹ ದಾನಕ್ಕೆ ನಿರ್ಧಾರ ಮಾಡಿದಾಗ ಸಾಕಷ್ಟು ನಿಯಮಗಳು ಅಡ್ಡ ಬಂದವು. ಗಂಡ ತಂದೆ ತಾಯಿ ಮತ್ತು ಕುಟುಂಬಸ್ಥರ ಸಹಿ ಇಲ್ಲದೆ ದೇಹ ದಾನ ಮಾಡಲು ಸಾಧ್ಯವಿಲ್ಲ ಎಂದು ಕೆಎಂಸಿಯ ವೈದ್ಯರು ಹೇಳಿದ್ದಾರೆ. ಇಡೀ ಕುಟುಂಬವನ್ನು ಒಪ್ಪಿಸಿ ದೇಹ ದಾನದಿಂದ ಮುಂದೆ ವೈದ್ಯಕೀಯ ಲೋಕಕ್ಕೆ ಆಗಬಹುದಾದ ಉಪಯೋಗಗಳನ್ನು ತಿಳಿಸಿದ ನಂತರ ಕುಟುಂಬ ದೇಹ ದಾನಕ್ಕೆ ಒಪ್ಪಿದೆ.

ದೇಶಾದ್ಯಂತ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಮೃತ ದೇಹಗಳ ಕೊರತೆ ಇದೆ. ಬೇರೆ ಬೇರೆ ಸಂದರ್ಭಗಳಲ್ಲಿ ನೀವೂ ದೇಹದಾನ ಮಾಡಿ ಅಂತ ಶಿಲ್ಪಾ ಸಾಲಿಯಾನ್ ಸಲಹೆ ನೀಡಿದ್ದಾರೆ.

Modi 72nd Birthday: ಮೋದಿ ನಡೆದು ಬಂದ ಹಾದಿ, ಸಿಎಂ - ಪಿಎಂ ಆಗಿ 21 ವರ್ಷ ಅಧಿಕಾರದ ಸೊಬಗು

ಮೋದಿಯ ಭಾವಚಿತ್ರದಂತೆ ಮೂಡಿಬಂದ ರಂಗೋಲಿ
ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೆ ರಂಗೋಲಿ ರೂಪದಲ್ಲೂ ಶುಭಾಶಯ ಕೋರಲಾಗಿದೆ. ಜನ್ಮದಿನದ ಅಂಗವಾಗಿ ರಂಗೋಲಿಯಲ್ಲಿ ಅರಳಿ ಬಂದ ಮೋದಿ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಉಡುಪಿ ಜಿಲ್ಲೆ ಸಾಸ್ತಾನ ಚೆನ್ನಕೇಶವ ಹಾಲ್ ನಲ್ಲಿ ಬಿಡಿಸಲಾಗಿರುವ ರಂಗೋಲಿ ಮೋದಿ ಸೂಪರ್ ಆಗಿದೆ.

PM Modi Birthday: ಬಡ ಜನರ 'ಅಚ್ಚೇದಿನ್‌' ಸಲುವಾಗಿ ಪ್ರಧಾನಿ ಮೋದಿ ಘೋಷಿಸಿದ 10 ಯೋಜನೆಗಳು

ಚಿತ್ರ ಕಲಾವಿದೆ ಸ್ಪೂರ್ತಿ ಆಚಾರ್ ಮತ್ತು ಅಶ್ವತ್ಥ್ ಆಚಾರ್ಯ ಕೈ ಚಳಕದಲ್ಲಿ ಮೋದಿ ಮುಖ ಭಾವ ರಚನೆಯಾಗಿದೆ‌ .12 ಅಡಿ ಎತ್ತರ 7.5 ಅಡಿ ಅಗಲವಾಗಿರುವ ನರೇಂದ್ರ ಮೋದಿ ರಂಗೋಲಿ ಭಾವಚಿತ್ರದ ಪಡಿಯಚ್ಚಿನಂತಿದೆ. ಸುಮಾರು 15 ಗಂಟೆಗಳ ಕಾಲ ಶ್ರಮವಹಸಿ ಮುತುವರ್ಜಿಯಿಂದ ಬಿಡಿಸಲಾದ ರಂಗೋಲಿ ಇದಾಗಿದ್ದು,  ನರೇಂದ್ರ ಮೋದಿ ಅವರ ಜನ್ಮದಿನಕ್ಕಾಗಿಯೇ ಸಿದ್ಧಪಡಿಸಲಾಗಿದೆ‌.

Follow Us:
Download App:
  • android
  • ios