ಮಂಡ್ಯ(ಸೆ.28): ಮಹಾಲಯ ಅಮವಾಸ್ಯೆ ಹಿನ್ನೆಲೆ ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ಅಸ್ತಿಕರಿಂದ ಪಿತೃಪಕ್ಷ ಪೂಜೆ ನಡೆದಿದೆ. ಕಾವೇರಿ ನದಿ ದಂಡೆಯ ಪ್ರದೇಶಗಳಾದ ಪಶ್ವಿಮವಾಹಿನಿ, ಸಂಗಮ್, ಘೋಸಾಯ್ ಘಾಟ್, ಸ್ನಾನಘಟ್ಟ ಪ್ರದೇಶದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಆಸ್ತಿಕರು ಪಿತೃಗಳಿಗೆ ಪಿಂಡ ತರ್ಪಣ ಮಾಡಿದ್ದಾರೆ.

ಅಗಲಿದ ಕುಟುಂಬದ ಪಿತೃಗಳಿಗೆ ತಿಲತರ್ಪಣ ಅರ್ಪಿಸಿ ಅಗಲಿದವರಿಗೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಜನ ಪೂಜೆ ಸಲ್ಲಿಸಿದ್ದಾರೆ. ಮಹಾಲಯ ಅಮವಾಸ್ಯೆ ದಿನ ಕಾವೇರಿ ನದಿ ತಟದಲ್ಲಿ  ಅಗಲಿದವರಿಗೆ ಪಿಂಡ ಪ್ರಧಾನ ಮಾಡಿದ್ರೆ ಒಳೀತಾಗಲಿದೆ ಅನ್ನೋ ನಂಬಿಕೆ ಹಿಂದಿನಿಂದಲೂ ಇದ್ದು, ಈ ನಂಬಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಕರು ಆಗಮಿಸಿ ಪೂಜೆ ನಡೆಸಿ,ಪ್ರಾರ್ಥನೆ ಸಲ್ಲಿಸಿದ್ದಾರೆ.

ಆರ್ಥಿಕತೆ ಪುನಶ್ಚೇತನಕ್ಕೆ ಪಿತೃಪಕ್ಷ ಅಡ್ಡಿ!

ಅಗಲಿದ ಪೂರ್ವಜರಿಗೆ ಸದ್ಗತಿ ದೊರೆಯುವ ನಂಬಿಕೆ ಹಿನ್ನೆಲೆಯಲ್ಲಿ ಅಗಲಿದವರಿಗೆ ತಿಲತರ್ಪಣ ಬಿಡಲು ಶ್ರೀರಂಗಪಟ್ಟಣಕ್ಕೆ ಆಸ್ತಿಕರ ದಂಡೇ ಆಗಮಿಸಿದೆ. ತಿಲತರ್ಪಣಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಶ್ರೀರಂಗಪಟ್ಟಣಕ್ಕೆ ಜನರು ಆಗಮಿಸಿದ್ದು, ಕಾವೇರಿನದಿ  ದಡದಲ್ಲಿದಲ್ಲಿ ಪಿತೃಪಕ್ಷದ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ. ನೂರಾರು ಜನರು ಅಗಲಿದವರಿಗೆ ಎಳ್ಳು ನೀರು ಬಿಟ್ಟು ಪಿಂಡ ಇಟ್ಟು ಪಿತೃಪಕ್ಷದ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ.

ವಾಹನ ದಟ್ಟಣೆ:

ವಿವಿಧೆಡೆಯಿಂದ ಬಂದ ಆಸ್ತಿಕ ಜನರು ಶ್ರೀರಂಗಪಟ್ಟಣದಲ್ಲಿ ಎಲ್ಲೆಡೆ ವಾಹನಗಳು ಸಾಲು ಸಾಲು‌ಗಟ್ಟಿ ನಿಂತಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಸಂಚಾರದಟ್ಟಣೆಯೂ ಉಂಟಾಯಿತು.

ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡುವುದೇಕೆ