ನವದೆಹಲಿ[ಸೆ.28]: ಆರ್ಥಿಕತೆ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಘೋಷಿಸಿದ ಕಾರ್ಯಕ್ರಮವೊಂದಕ್ಕೆ ಪಿತೃಪಕ್ಷ ಅಡ್ಡಿಯಾಗಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಆರ್ಥಿಕತೆಯನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಸರ್ಕಾರ ಇದೀಗ ಪಿತೃಪಕ್ಷ ಮುಗಿಯುವುದನ್ನೇ ಎದುರು ನೋಡುವಂತಾಗಿದೆ.

ಇಂದು ಲಕ್ಷ್ಮೀ ವಾರ: ನಿರ್ಮಲಾ ಸೀತಾರಾಮನ್ ಘೋಷಣೆ ಆಹ್ಲಾದಕರ!

ಗ್ರಾಹಕರು ಹೆಚ್ಚು ಹೆಚ್ಚು ಖರೀದಿ ಪ್ರಕ್ರಿಯೆಯಲ್ಲಿ ತೊಡಗುವುದಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಸೆ.19ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೇಶದ 200 ಜಿಲ್ಲೆಗಳಲ್ಲಿ ಸೆ.25ರಿಂದ ಸಾಲ ಮೇಳ ಆರಂಭಿಸುವುದಾಗಿ ಘೋಷಿಸಿದ್ದರು. ಆದರೆ ಬ್ಯಾಂಕುಗಳು ಸಾಲ ನೀಡಲು ಸಿದ್ಧವಿದ್ದರೂ ಸಾಲ ಪಡೆಯಬೇಕಾದ ಗ್ರಾಹಕರು ಅತ್ತ ತಲೆ ಹಾಕುತ್ತಿಲ್ಲ. ಇದಕ್ಕೆ ಪಿತೃಪಕ್ಷವೇ ಕಾರಣ ಎಂದು ಹೇಳಲಾಗಿದೆ.

ಬರಲಿದೆ ಸಾಲು ಸಾಲು ಹಬ್ಬ; ಗ್ರಾಹಕರಿಗೆ ತಟ್ಟಲಿದೆಯಾ ಬೆಲೆ ಏರಿಕೆ ಬಿಸಿ?

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ನಿರ್ಮಲಾ ಸೀತಾರಾಮನ್‌, ಗ್ರಾಹಕರಿಂದ ಖರೀದಿ ನಡೆಯುತ್ತಿದೆ. 15 ದಿನಗಳ ಅವಧಿಯ ಪಿತೃಪಕ್ಷ (ಸೆ.13ರಿಂದ ಸೆ.28) ಅವಧಿ ಮುಕ್ತಾಯಗೊಂಡರೆ ಹಬ್ಬದ ಋುತು ಆರಂಭವಾಗುತ್ತದೆ. ಹಲವು ರಾಜ್ಯಗಳಲ್ಲಿ ಹೊಸ ವಸ್ತು ಖರೀದಿಗೆ ಪಿತೃಪಕ್ಷ ಒಳ್ಳೆಯ ಸಮಯವಲ್ಲ ಎಂಬ ಭಾವನೆ ಜನರಲ್ಲಿದೆ ಎಂದು ವಿವರಿಸಿದ್ದಾರೆ.