ಮೃತರಾದರೂ ವಂಶದ ಹಿರಿಯರೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಕನೆಕ್ಟ್ ಆಗೋ ನೆಪದಿಂದ ಶ್ರಾದ್ಧ ಮಾಡುತ್ತಾರೆ. ಈ ಕಾರ್ಯ ನೆರವೇರಿಸಲು ಕಾರಣವೇನು?

ವರ್ಷಕ್ಕೊಮ್ಮೆ ಮೃತರ ಹಿರಿಯರಿಗೆ ಶ್ರಾದ್ಧ ಸಲ್ಲಿಸಿ, ಆಶೀರ್ವಾದ ಪಡೆಯುವುದು ಭಾರತದಲ್ಲಿ ಕಾಮನ್. ಅದರಲ್ಲಿಯೂ ಹಿಂದೂ ಸಂಪ್ರದಾಯದಲ್ಲಿ ಕರ್ಮ ಫಲವೆಂದು, ಹಿರಿಯರಿಗೆ ಪಿಂಡ ಪ್ರದಾನ ಮಾಡಿಯೇ ಮಾಡ್ತಾರೆ.

ಕುಟುಂಬದ ಹಿರಿಯರಿಗೆ ತರ್ಪಣ ಸಲ್ಲಿಸೋ ಮಹತ್ವವನ್ನು ಕೃಷ್ಣ ಭಗವದ್ಗೀತೆಯಲ್ಲಿಯೂ ವಿವರಿಸಿದ್ದಾರೆ. ಪಿತೃಗಳನ್ನು ನೆನೆಯದಿದ್ದರೆ, ಮನುಷ್ಯ ಆರ್ಥಿಕವಾಗಿ, ಉದ್ಯೋಗ ಕ್ಷೇತ್ರ ಹಾಗೂ ಇತರೆ ಕೈ ಹಾಕಿದ ಕೆಲಸದಲ್ಲಿ ಜಯ ಸಿಗುವುದಿಲ್ಲ.

ರಾಹು ಕೇತು ಸಮಸ್ಯೆಯಿದ್ದರೆ ಮೃತರಿಗೆ ಪಿತೃ ದೋಷ ನಿವಾರಿಸಿಕೊಳ್ಳಲು ಜ್ಯೋತಿಷಿಗಳು ಸೂಚಿಸುತ್ತಾರೆ. ಮೃತ ಪಟ್ಟವರಿಗೆ ರಾಹು-ಕೇತು ಸಮಸ್ಯೆಯಿದ್ದರೂ ಪಿತೃ ದೋಷ ಮಾಡಿಸಲಾಗುತ್ತದೆ. ಈ ಸಮಯದಲ್ಲಿ ಹೆಚ್ಚಾಗಿ ಅನಾರೋಗ್ಯ ಕಾಡುವುದು, ಆಸ್ತಿ ಕಳೆದುಕೊಳ್ಳುವುದು ಮತ್ತಿತರ ತೊಂದರೆಗಳಾಗುತ್ತವೆ. 

ಶ್ರದ್ಧಾ ವಿಧಾನಗಳೇನು?

ಮದುವೆ ವಿಳಂಬವಾಗುತ್ತಿದ್ದರೆ

ಅರ್ಪಣ: ಬೆಳ್ಳಿ ಅಥವಾ ಯಾವುದಾದರೂ ಪಾತ್ರೆಯನ್ನು ದಾನ ಮಾಡಬೇಕು. 

ತರ್ಪಣ: ದೀಪವನ್ನು ಗೋಧಿ ಹಿಟ್ಟಿನ ಮೇಲೆ ಹಚ್ಚಿ ನೀರಲ್ಲಿ ಬಿಡಬೇಕು.

ಸಮರ್ಪಣ: ಇಗಷ್ಟೇ ಮದುವೆಯಾದ ಜೋಡಿಗೆ ತುಪ್ಪ ಮತ್ತು ಗೋಡಂಬಿ ಪಾಯಸ ದಾನ ಮಾಡಬೇಕು.

ಹಣ ಕಾಸಿನ ತೊಂದರೆ

ಅರ್ಪಣ: ಕ್ಷೀರ ದಾನ ಶ್ರೇಷ್ಠ. 

ತರ್ಪಣ: ನೀರಿನಲ್ಲಿ ಗೋಧಿ ಹಿಟ್ಟಿನ ಮೇಲೆ ದೀಪ ಹಚ್ಚಿ ಬಿಡಬೇಕು.

ಸಮರ್ಪಣ: ಒಂದು ಪಾತ್ರೆಯಲ್ಲಿ ಊಟ ಹಾಕಿ, ನೀರಲ್ಲಿ ಬಿಡಬೇಕು.

ಉದ್ಯೋಗ ಮತ್ತು ವಿಧ್ಯಾಭ್ಯಾಸದಲ್ಲಿ ಸಂಕಟ

ಅರ್ಪಣ: ನೀರಿನ ಬದಿಯಲ್ಲಿ ದೀಪ ಹಚ್ಚಬೇಕು.

ತರ್ಪಣ: 9 ಎಲೆಗಳಲ್ಲಿ ಊಟವಿಟ್ಟು ಮನೆ ಮೇಲಿಡಬೇಕು. 

ಸಮರ್ಪಣ: ಬ್ರಾಹ್ಮಣರಿಗೆ ಹಣ ಅಥವಾ ಬಟ್ಟೆ ದಾನ ಮಾಡಿ ಆಶೀರ್ವಾದ ಪಡೆದುಕೊಳ್ಳಬೇಕು.

ಮನೆ ಕಟ್ಟುವ ಸಮಸ್ಯೆ ಇದ್ದರೆ

ಅರ್ಪಣ: ಸಿಹಿ ತಿಂಡಿ ಅಥವಾ ಬೆಲ್ಲ ದಾನ ಮಾಡಬೇಕು.

ತರ್ಪಣ: 11 ದೀಪಗಳನ್ನು ನೀರಿನ ಸಮೀಪ ಹಚ್ಚಿಡಬೇಕು

ಸಮರ್ಪಣ: ಬ್ರಾಹ್ಮಣರಿಗೆ ಛತ್ರಿ ದಾನ ಮಾಡಬೇಕು.