Asianet Suvarna News Asianet Suvarna News

ಕೋಲಾರ ಪಿಎಫ್ಐ ಜಿಲ್ಲಾ ಕಚೇರಿ ಬಂದ್ ಮಾಡಲು ತಯಾರಿ; ತಹಸೀಲ್ದಾರ್, ಡಿವೈಎಸ್‌ಪಿ ಭೇಟಿ

ದೇಶದಲ್ಲಿ ಪಿಎಫ್ಐ ಸಂಘಟನೆಗೆ ನಿಷೇಧ ಹೇರಿರುವ ಬೆನ್ನಲೇ, ಕೋಲಾರ ಜಿಲ್ಲೆಯಲ್ಲಿ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದೆ.  ಪಿಎಫ್ಐ ನ ಜಿಲ್ಲಾ ಕಚೇರಿ ಬಂದ್ ಮಾಡಲು ತಹಸೀಲ್ದಾರ್ ನಾಗರಾಜ್ ಹಾಗೂ ಡಿವೈಎಸ್ಪಿ ಮುರುಳಿಧರ್ ಭೇಟಿ ನೀಡಿದ್ದು, ಜಿಲ್ಲಾ ಕಚೇರಿಯ ಬೀಗ ಮುರಿದು ಕಚೇರಿ ಪರಿಶೀಲನೆ ನಡೆಸಿ ಮಹಜರು ಮಾಡಿದ ಬಳಿಕ ಕಚೇರಿಗೆ ಬೀಗ‌ ಹಾಕಿದ್ದಾರೆ.

PFI district office  close; Visiting Tehsildar, DySP kolar rav
Author
First Published Sep 29, 2022, 8:12 AM IST

ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಸೆ.29) : ದೇಶದಲ್ಲಿ ಪಿಎಫ್ಐ ಸಂಘಟನೆಗೆ ನಿಷೇಧ ಹೇರಿರುವ ಬೆನ್ನಲೇ, ಕೋಲಾರ ಜಿಲ್ಲೆಯಲ್ಲಿ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದೆ.  NIA ವಿರುದ್ಧ ಪ್ರತಿಭಟನೆ ಮಾಡುವ ಭರದಲ್ಲಿ ಸೆಪ್ಟೆಂಬರ್ 22ನೇ ತಾರೀಕಿನಂದು ಪಿಎಫ್ಐ ನ ಕೋಲಾರ ಜಿಲ್ಲಾ ಅಧ್ಯಕ್ಷ ಇಮ್ತಿಯಾಜ್ ಅಹ್ಮದ್ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ರಾಷ್ಟ್ರೀಯ ಹೆದ್ದಾರಿ 75 ನ್ನು ತಡೆದು ಪ್ರತಿಭಟನೆ ನಡೆಸಿದ್ರು. ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.

ಪಿಎಫ್‌ಐ ವಿರುದ್ಧ ಎನ್‌ಐಎ ದಾಳಿ, ರಾಹುಲ್‌ ಗಾಂಧಿ ಬೆಂಬಲ!

 ನಿನ್ನೆಯಷ್ಟೇ ಪಿಎಫ್ಐ ನ ಕೋಲಾರ(Kolar) ಜಿಲ್ಲಾ ಅಧ್ಯಕ್ಷ ಇಮ್ತಿಯಾಜ್ ಅಹ್ಮದ್(Imtiaz Ahmed) ಸೇರಿದಂತೆ 7 ಮಂದಿ ಪಿಎಫ್ಐ(PFI) ಆಕ್ಟಿವ್ ಕಾರ್ಯಕರ್ತರನ್ನು ಪೊಲೀಸರು ನಸುಕಿನಲ್ಲಿ ಬಂಧಿಸುವ ಮೂಲಕ ಶಾಕ್ ನೀಡಿದ್ದಾರೆ.

ಏಕಾಏಕಿ ದಾಳಿ ನಡೆಸಿದ ಪೊಲೀಸರು ಇಮ್ತಿಯಾಜ್ ಅಹ್ಮದ್, ಸಿದ್ದಿಕ್ ಪಾಷ, ವಾಸೀಂ ಪಾಷ,ಅಲ್ಲಾ ಬಕಾಶ್, ನಯಾಜ್ ಪಾಷಾ, ಶಹಬಾಜ್ ಪಾಷಾ ಹಾಗೂ ನೂರ್ ಪಾಷಾ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ಬ್ಯಾನ್(Ban) ಮಾಡಿರುವ ಹಿನ್ನೆಲೆ, ಪೊಲೀಸರು ಮತ್ತೆ ತಮ್ಮ ಕಾರ್ಯಚರಣೆ ಮುಂದುವರಿಸಿದ್ದಾರೆ. ಪಿಎಫ್ಐ ನ ಜಿಲ್ಲಾ ಕಚೇರಿ ಬಂದ್ ಮಾಡಲು ತಹಸೀಲ್ದಾರ್ ನಾಗರಾಜ್ ಹಾಗೂ ಡಿವೈಎಸ್ಪಿ ಮುರುಳಿಧರ್ ಭೇಟಿ ನೀಡಿದ್ದು, ಜಿಲ್ಲಾ ಕಚೇರಿಯ ಬೀಗ ಮುರಿದು ಕಚೇರಿ ಪರಿಶೀಲನೆ ನಡೆಸಿ ಮಹಜರು ಮಾಡಿದ ಬಳಿಕ ಕಚೇರಿಗೆ ಬೀಗ‌ ಹಾಕಿದ್ದಾರೆ.

ಕರ್ನಾಟಕ, ಕೇರಳ ಸೇರಿ 10 ರಾಜ್ಯಗಳಲ್ಲಿ NIA, ED Raid: ನೂರಾರು ಪಿಎಫ್ಐ ಕಾರ್ಯಕರ್ತರ ಬಂಧನ

ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯ ಶಹಜಾನ್ ಉನ್ನೀಸಾ ಎಂಬುವರ ಮನೆಯನ್ನು ಬಾಡಿಗೆಗೆ ಪಡೆದು ಪಿಎಫ್ಐ ಜಿಲ್ಲಾ ಕಚೇರಿಯನ್ನಾಗಿ ಮಾಡಿಕೊಳ್ಳಲಾಗಿತ್ತು.ಮುಜಾಹಿದ್ ಪಾಷಾ ಎಂಬುವವರ ಹೆಸರಲ್ಲಿ ಮಾಡಲಾಗಿರುವ ಬಾಡಿಗೆ ಕರಾರು ಪತ್ರ ಸಹ ಪೊಲೀಸರಿಗೆ ಸಿಕ್ಕಿದ್ದು,ಕಳೆದ ಮೂರು ವರ್ಷಗಳಿಂದ ಇದೆ ಮನೆಯನ್ನು ಕಚೇರಿಯನ್ನಾಗಿ ಮಾಡಿಕೊಂಡಿದ್ರು.

Follow Us:
Download App:
  • android
  • ios