ಪೆಟ್ರೋಲ್ ಡೀಸೆಲ್ ದರ ದಿನದಿನವೂ ಗಗನಕ್ಕೆ ಏರುತ್ತಿದೆ. ಕೊಳ್ಳುವುದು ಭಾರೀ ದುಬಾರಿಯಾಗಿದ್ದು ಗ್ರಾಹನ ಜೇಬು ಕಾಲಿಯಾಗುತ್ತಿದೆ. ಇದೇ ಸಮದರ್ಬದಲ್ಲಿ ಪೆಟ್ರೋಲ್ ಗಿಫ್ಟ್ ಕೊಡುವುದು ಸುದ್ದಿಯಾಗುತ್ತಿದೆ.
ಮೈಸೂರು (ಫೆ.22): ಮಹಾನಗರಪಾಲಿಕೆ ಸದಸ್ಯರೊಬ್ಬರು ನೂತನ ವಧುವರರಿಗೆ ಪೆಟ್ರೋಲ್ ಗಿಫ್ಟ್ ನೀಡುವ ಮೂಲಕ ಶುಭ ಹಾರೈಸಿದ್ದಾರೆ. ಈ ಮೂಲಕ ತೈಲ ಬೆಲೆ ಏರಿಕೆಯನ್ನು ಖಂಡಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೈಸೂರು ಮಹಾನಗರ ಪಾಲಿಕೆ ಸದಸ್ಯೆ ಶೋಭಾ ಸುನಿಲ್ ಪೆಟ್ರೋಲ್ ಗಿಫ್ಟ್ ನೀಡಿದವರಾಗಿದ್ದಾರೆ. ಮೈಸೂರು ನಗರದ ಕಲ್ಯಾಣ ಮಂಟಪವೊಂದರಲ್ಲಿ ನಡೆದ ವಿವಾಹ ಕಾರ್ಯಕ್ರಮಕ್ಕೆ ಶೋಭಾ ಹೋಗಿದ್ದರು.
ಪೆಟ್ರೋಲ್ ಬೆಲೆ ಇಳಿಕೆ : ಸಚಿವೆ ನಿರ್ಮಲಾ ಪ್ರಸ್ತಾಪ ..
ಈ ಸಂದರ್ಭದಲ್ಲಿ ದಂಪತಿಗಳಿಗೆ 5 ಲೀಟರ್ ಪೆಟ್ರೋಲ್ ಉಡುಗೊರೆಯಾಗಿ ನೀಡಿದ್ದಾರೆ. ಬಳಿಕ ಪ್ರತಿಕ್ರಿಯೆ ನೀಡಿದ ಶೋಭಾ ಸುನಿಲ್, ಚಿನ್ನ, ಬೆಳ್ಳಿಗಿಂತ ಪೆಟ್ರೋಲ್ ಬೆಲೆ ದುಬಾರಿಯಾಗಿದೆ. ಹೀಗಾಗಿ, ಪೆಟ್ರೋಲ್ ಗಿಫ್ಟ್ ನೀಡಿರುವುದಾಗಿ ಹೇಳಿದ್ದಾರೆ.
