ದೇಶದಲ್ಲಿ ದಿನ ದಿನವೂ ಕೂಡ ಪೆಟ್ರೋಲ್ ಬೆಲೆ ಭಾರೀ ಏರಿಕೆಯಾಗುತ್ತಿದೆ. ಇದರಿಂದ ಗ್ರಾಹಕರು ಸಂಕಷ್ಟ ಪಡುವ ಸ್ಥಿತಿ ಎದುರಾಗಿದೆ. ಇದೀಗ ಮೊದಲ ಬಾರಿಗೆ ನಿರ್ಮಲಾ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. 

ನವದೆಹಲಿ (ಫೆ.21): ದೇಶದ ಕೆಲವು ಕಡೆ ಪೆಟ್ರೋಲ್‌ ದರ ಸಾರ್ವಕಾಲಿಕ ದಾಖಲೆ 100 ರು. ದಾಟುತ್ತಿದ್ದಂತೆಯೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮೌನ ಮುರಿದಿದ್ದಾರೆ. ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವಿಷಯದ ಕುರಿತು ಪರಸ್ಪರ ಮಾತುಕತೆ ನಡೆಸಬೇಕು’ ಎಂದು ಅವರು ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ, ‘ತೈಲ ಬೆಲೆ ಏರಿಕೆ ಎಂಬುದು ಎಲ್ಲರಿಗೂ ಅತ್ಯಂತ ಕೋಪ ತರಿಸುವ ವಿಷಯ. ದರ ಇಳಿಕೆ ಮಾಡದ ಹೊರತು ಇದಕ್ಕೆ ಬೇರೆ ಉತ್ತರವಿಲ್ಲ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಂದೆಡೆ ಕುಳಿತು ಚರ್ಚಿಸಬೇಕು’ ಎಂದು ಹೇಳಿದರು.

ಕೊರೋನಾಗೂ ಎದೆಗುಂದದೆ ಆರ್ಥಿಕ ಪ್ರಗತಿಗೆ ಕೇಂದ್ರದ ಒತ್ತು! ...

ಪೆಟ್ರೋಲ್‌-ಡೀಸೆಲ್‌ನ ಮೂಲದರ ಕಡಿಮೆ ಇದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೂಲಬೆಲೆಯ ಸುಮಾರು 2ರಷ್ಟುಸುಂಕ/ತೆರಿಗೆ ಹೇರುತ್ತವೆ. ಇದೇ ದರ ಏರಿಕೆಗೆ ಇನ್ನೊಂದು ಕಾರಣವಾಗಿದೆ. ಹೀಗಾಗಿ ತೆರಿಗೆ ಇಳಿಸಬೇಕು ಎಂಬುದು ಜನರ ಆಗ್ರಹ. ಇಂಥ ಸಂದರ್ಭದಲ್ಲಿ ನಿರ್ಮಲಾ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.

ದೇಶಾದ್ಯಂತ ಲಾರಿ ಮುಷ್ಕರದ ಎಚ್ಚರಿಕೆ

 ಕೂಡಲೇ ಕೇಂದ್ರ ಸರ್ಕಾರವು ಪೆಟ್ರೋಲ್‌-ಡೀಸೆಲ್‌ ಬೆಲೆ ಇಳಿಕೆಗೆ ಕ್ರಮ ಜರುಗಿಸಬೇಕು. ಇಲ್ಲದೇ ಹೋದರೆ ಮಾಚ್‌ರ್‍ನಲ್ಲಿ ಲಾರಿ ಮುಷ್ಕರ ಆರಂಭಿಸಲಾಗುತ್ತದೆ ಎಂದು ಅಖಿಲ ಭಾರತ ಮೋಟಾರು ವಾಹನ ಕಾಂಗ್ರೆಸ್‌ ಸಂಘಟನೆಯ ಮುಖ್ಯಸ್ಥ ಬಾಲ್‌ಮಲ್ಕಿತ್‌ ಸಿಂಗ್‌ ಎಚ್ಚರಿಸಿದ್ದಾರೆ.

‘ತೈಲಗಳ ಮೇಲಿನ ತೆರಿಗೆಯನ್ನು ಸರ್ಕಾರ ಇಳಿಸಬೇಕು. ನಮ್ಮ ಬೇಡಿಕೆ ಈಡೇರಿಕೆಗೆ ಫೆಬ್ರವರಿ 16ರಿಂದ ಆರಂಭವಾಗುವಂತೆ ಕೇಂದ್ರ ಸರ್ಕಾರಕ್ಕೆ 14 ದಿನಗಳ ನೋಟಿಸ್‌ ನೀಡಿದ್ದೇವೆ. ಬಡಿಕೆ ಈಡೇರದೇ ಹೋದರೆ ಮುಷ್ಕರ ಆರಂಭಿಸುತ್ತೇವೆ’ ಎಂದು ಸಿಂಗ್‌ ಹೇಳಿದ್ದಾರೆ.